ಬೆಂಗಳೂರು:- ನಗರದಲ್ಲಿ ಯುವಕರ ಬೈಕ್ ವ್ಹೀಲಿಂಗ್ ಹಾವಳಿ ನಿಂತಿಲ್ಲ. ಎಲ್ಲೆಂದರಲ್ಲಿ ಪುಂಡ ಯುವಕರ ಬೈಕ್ ವ್ಹೀಲಿಂಗ್ ನಿಂದ ಇತರೆ ವಾಹನಗಳಿಗೆ ತೊಂದರೆ- ಪ್ರಾಣಕ್ಕೆ ಸಂಚಕಾರ ತಂದೊಡ್ಡುತ್ತಿವೆ.
ನಿನ್ನೆ ನೈಸ್ ರಸ್ತೆಯಲ್ಲಿ ಪುಂಡ ಯುವಕರಿಂದ ಮೋಜು ಮಸ್ತಿ ನಡೆದಿದ್ದು, ಬೈಕ್ ವ್ಹೀಲಿಂಗ್ ನಡುವೆ ಡೇಂಜರ್ ಡ್ರ್ಯಾಗ್ ರೇಸ್ ಮೂಲಕ ಹುಚ್ಚಾಟ ಮೆರೆದಿದ್ದಾರೆ. ಪುಂಡರು, ಬೆಟ್ಟಿಂಗ್ ಕಟ್ಟಿ ಡ್ರ್ಯಾಗ್ ರೇಸ್ ಮಾಡುವ ಮೂಲಕ ಪ್ರಾಣಕ್ಕೆ ಸಂಚಕಾರ ತಂದೊಡ್ಡುತ್ತಿದ್ದಾರೆ.
ವೀಕೆಂಡ್ ಮತ್ತು ವೀಕ್ ಡೇಸ್ ಗಳಲ್ಲಿ ಈ ರೀತಿ ಬೆಂಗಳೂರು ಯುವಕರು ಹುಚ್ಚಾಟ ಮೆರೆದಿದ್ದಾರೆ.
ನಿನ್ನೆ ನೈಸ್ ರಸ್ತೆಯಲ್ಲಿ ಎರಡು ಯಮಹ ಬೈಕ್ ಗಳ ಮೂಲಕ ಡ್ರ್ಯಾಗ್ ರೇಸ್ ಮಾಡುತ್ತಿದ್ದು, ಡ್ರ್ಯಾಗ್ ರೇಸ್ ಆಡಿದ್ದನ್ನ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋ ಅಪ್ಲೋಡ್ ಮಾಡಿದ್ದಾರೆ. ಪುಂಡರು, Yamaha Rx Fan base ಎಂಬ ಖಾತೆಯಲ್ಲಿ ಡ್ರ್ಯಾಗ್ ರೇಸ್ ವಿಡಿಯೋ ಹರಿಬಿಟ್ಟಿದ್ದಾರೆ. ಈ ವಿಡಿಯೋ ಸಧ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವಿಡಿಯೋ ಕಂಡು ಪೊಲೀಸ್ ಇಲಾಖೆಗೆ ಸಾರ್ವಜನಿಕರು ಟ್ಯಾಗ್ ಮಾಡಿದ್ದಾರೆ. ಕೂಡಲೇ ಇಂತಹ ಪುಂಡರನ್ನ ಬಂಧಿಸಿ ಸೂಕ್ತ ಕ್ರಮಕ್ಕೆ ಒತ್ತಾಯ ಮಾಡಲಾಗಿದೆ. ಇತರೆ ವಾಹನ ಸವಾರರ ಪ್ರಾಣಕ್ಕೆ ಸಂಚಕಾರ ತಂದೊಡ್ಡುವ ಡ್ರ್ಯಾಗ್ ರೇಸ್ ಗೆ ಕಡಿವಾಣಕ್ಕೆ ಆಗ್ರಹ ಮಾಡಲಾಗಿದೆ. ಬೆಂಗಳೂರು ಸಿಟಿ ಪೊಲೀಸ್ ಹಾಗೂ ಟ್ರಾಫಿಕ್ ಪೊಲೀಸ್ ಕಮಿಷನರ್ ಗೆ ಟ್ಯಾಗ್ ಮಾಡುವ ಮೂಲಕ ಆಗ್ರಹಿಸಲಾಗಿದೆ.