ದಾಂಡೇಲಿ:- ಉತ್ತರಕನ್ನಡ ಜಿಲ್ಲೆಯ ಹಳಿಯಾಳ ಉಪ ವಿಭಾಗದ ವ್ಯಾಪ್ತಿಯ ದಾಂಡೇಲಿ ತಾಲ್ಲೂಕಿನ ಭರ್ಚಿ ಕ್ರಾಸ್ ನಿಂದ ನೆರೆಯ ಖಾನಾಪುರ ತಾಲ್ಲೂಕು ಗಡಿಗೆ ಸಂಪರ್ಕ ಮಾಡುವ ಲೋಕೋಪಯೋಗಿ ಇಲಾಖೆ ರಸ್ತೆ ತುಂಬಾನೇ ಹದಗೆಟ್ಟಿದ್ದು, ದಿನನಿತ್ಯ ಸಾಕಷ್ಟು ಅಪಘಾತಗಳು ಸಹ ಸಂಭವಿಸುತ್ತಿವೆ. ಆದ್ರೆ ಇದಕ್ಕೆ ಗಾಯದ ಮೇಲೆ ಬರೆ ಎಳೆದಂತೆ ಟೆಲಿಕಾಂ ಕಂಪನಿಗಳು ಕೇಬಲ್ ಅಳವಡಿಸುವ ಕಾಮಗಾರಿಯಲ್ಲಿ ಲೋಕೋಪಯೋಗಿ ಇಲಾಖೆ ರಸ್ತೆಯನ್ನು ಇನ್ನಷ್ಟು ಹದಗೆಡಿಸಿ ಕಾಮಗಾರಿ ನಿರ್ವಹಣೆ ಮಾಡ್ತಾ ಇರೋದು ನೋಡಿದ್ರೆ ನಿಜವಾಗ್ಲೂ ಈ ರಸ್ತೆಯನ್ನೇ ಈ ಕಾಮಗಾರಿಯೇ ನುಂಗಿ ಹಾಕಿ ಬಿಡ್ತೇನೋ ಅನಿಸುತ್ತಾ ಇದೆ. ಇನ್ನೂ ರಸ್ತೆಯ ಅಳತೆಯನ್ನು ನೋಡದೇ ರಸ್ತೆಯ ಅಂಚಿನಲ್ಲೇ ಕೊರೆದು ಕೇಬಲ್ ಅಳವಡಿಸಿ ರಸ್ತೆಯನ್ನು ಕೆಡಿಸಿರೋದು ನೋಡಿದ್ರೆ ಇದಕ್ಕೆ ಹಳಿಯಾಳ ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಕಟ್ಟಿಮನಿ ಯವರು ಸಹ ಇವರ ಆಮಿಷಕ್ಕೆ ಒಳಗಾದರೇನೋ ಎಂಬ ಸಂಶಯಕ್ಕೆ ಎಡೆಮಾಡಿಕೊಟ್ಟಿದೆ.
ಮಾಧ್ಯಮ ಪ್ರತಿನಿಧಿ ಬಸವರಾಜುಅವರು ಶಿರಸಿಯಲ್ಲಿರುವ ಲೋಕೋಪಯೋಗಿ ಇಲಾಖೆ ಕಾರ್ಯನಿರ್ವಾಹಕ ಅಭಿಯಂತರರ ಅಭಿಪ್ರಾಯ ಸಂಗ್ರಹ ಮಾಡಿದಾಗ ಅವರು ಹೇಳೋ ಅಭಿಪ್ರಾಯಕ್ಕೂ, ಹಲಿಯಾಳ Aee ಕಟ್ಟಿಮನಿ ಬಾಯಿ ಬಡೆಯುದಕ್ಕೂ ಒಂದಕ್ಕೂ ಸಾಮ್ಯತೆ ಇಲ್ಲವಂತಾಗಿದೆ. ಇನ್ನೂ ಮಾಹಿತಿ ಹಕ್ಕು ನಿಯಮದ ಅಡಿ ಈ ಬಗ್ಗೆ ಮಾಹಿತಿ ಕೇಳಿದ್ರೆ ಅವರು ಕೊಟ್ಟಿರೋ ಮಾಹಿತಿಗೂ, ಅಲ್ಲಿ ನಡೆದಿರೋ ಕೆಲಸಕ್ಕೂ ಒಂದಕ್ಕೊಂದು ಸಂಬಂಧವೇ ಇಲ್ಲಾ, ಇನ್ನೂ ಕಾಮಗಾರಿ ಹೆಸರಿನಲ್ಲಿ ರಸ್ತೆಯನ್ನು ಸಂಪೂರ್ಣವಾಗಿ ಹಾಳು ಮಾಡಿ ಟೆಲಿಕಾಂ ಕಂಪನಿಗಳು ಸೈಲೆಂಟ್ ಆದ್ರೆ, ಹಳಿಯಾಳ ಉಪ ವಿಭಾಗದ ಲೋಕೋಪಯೋಗಿ Aee ಕಟ್ಟಿಮನಿ ಯವರು ಮಾತ್ರ ತಮ್ಮದೇನು ತಪ್ಪಿಲ್ಲದಂತೆ ವರ್ತನೆ ಮಾಡ್ತಾ ಇದ್ದಾರೆ. ಇದರಿಂದ ದಿನನಿತ್ಯ ಈ ರಸ್ತೆಯಲ್ಲಿ ಸಂಚಾರ ಮಾಡುವ ಪ್ರಯಾಣಿಕರು ಹಾಗೂ ವಾಹನಗಳ ಪರಿಸ್ಥಿತಿಯಂತೂ ಹೇಳತೀರದು, ಆದ್ದರಿಂದ ನಮ್ಮ ನ್ಯೂಸ್ ಸಮೂಹದ ರಾಜ್ಯ ವಿಶೇಷ ಪ್ರತಿನಿಧಿ ಬಸವರಾಜು ಭೇಟಿಕೊಟ್ಟು ಸಮಗ್ರವಾಗಿ ವರದಿ ತಯಾರಿಸಿ ಈ ಬಗ್ಗೆ ಬೆಂಗಳೂರಿನ ಲೋಕೋಪಯೋಗಿ ಇಲಾಖೆಯ ಸರ್ಕಾರಿ ಕಾರ್ಯದರ್ಶಿಗೆ ದೂರು ಕೊಡಲು ಸಜ್ಜಾಗಿದ್ದಾರೆ.
ಇನ್ನಾದ್ರೂ ರಸ್ತೆಯ ದುರಸ್ತಿ ಕಾಯಕಲ್ಪ ಸಿಕ್ಕು, ಈ ಟೆಲಿಕಾಂ ಕಂಪೆನಿಗಳಿಂದ ದಂಡ ವಸೂಲಿ ಮಾಡುವವರೇ ಎಂಬುದನ್ನು ಕಾದುನೋಡಬೇಕಿದೆ