ಬೆಂಗಳೂರು:- ಹೊಸ ವರ್ಷಾಚರಣೆಗೆ ಕ್ಷಣಗಣನೆ ಆರಂಭವಾಗಿದ್ದು, ಕಟ್ಟುನಿಟ್ಟಿನ ನಿರ್ಬಂಧ ಏರಲಾಗಿದೆ. ಹೊಸ ವರ್ಷಾಚರಣೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಇದ್ದು, ಈ ಬೆನ್ನಲ್ಲೇ ಬ್ರಿಗೇಡ್ ರೋಡ್ ಶಾಪ್ಸ್ ಅಸೋಸಿಯೇಷನ್ ನಿರ್ಬಂಧಗಳನ್ನು ಜಾರಿಗೊಳಿಸಿದ್ದು, 1 ಗಂಟೆಯೊಳಗೆ ಎಲ್ಲಾ ಪಬ್’ಗಳನ್ನು ಬಂದ್ ಮಾಡಬೇಕು ಎಂದು ಸೂಚನೆ ನೀಡಿದ್ದಾರೆ.
ಬ್ರಿಗೆಡ್ ರೋಡ್, ಚರ್ಚ್ ಸ್ಟ್ರೀಟ್, ಎಂ ಜಿ ರೋಡ್ ಬಳಿ ಅಂಗಡಿಗಳಿಗೆ ನಿರ್ಬಂಧ ಹೇರಲಾಗಿದೆ. ರಾತ್ರಿ 8 ಗಂಟೆಗೆ ಅಂಗಡಿ ಮುಗ್ಗಟ್ಟುಗಳನ್ನು ಬಂದ್ ಮಾಡಬೇಕೆಂದು ಅಸೋಸಿಯೇಷನ್ ಸೆಕ್ರೆಟರಿ ಸಾಹಿಲ್ ಹೇಳಿಕೆ ನೀಡಿದ್ದಾರೆ.
ಈ ಬಾರಿ ಪೊಲೀಸರು ತುಂಬಾ ಕಠಿಣ ನಿಯಮ ಜಾರಿಗೆ ತರುತ್ತಿದ್ದು, ಒಂದು ಗಂಟೆ ಅಷ್ಟರಲ್ಲಿ ಎಲ್ಲಾ ಬಂದ್ ಇರಬೇಕು. ಡಿಸೆಂಬರ್ 31ರಂದು ರಾತ್ರಿ 8ಗಂಟೆಗೆ ಅಂಗಡಿಗಳು ಎಲ್ಲವೂ ಕ್ಲೋಸ್ ಇರುತ್ತೆ. ಉಳಿದಂತೆ ಪಬ್, ಹೋಟೆಲ್’ಗಳಿಗೆ ಒಂದು ಗಂಟೆವರೆಗೆ ಅವಕಾಶ ಕೊಟ್ಟಿದ್ದಾರೆ” ಎಂದು ಸಾಹಿಲ್ ಹೇಳಿದ್ದಾರೆ.