ಹೊಸಕೋಟೆ:- ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆಯಲ್ಲಿ ಫುಡ್ ಪಾಯ್ಸನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಸಕೋಟೆ ಆಸ್ವತ್ರೆಗಳಿಗೆ ಮಾಜಿ ಸಚಿವ ಎಂಟಿಬಿ ನಾಗರಾಜ್ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಹೊಸಕೋಟೆ ಸರ್ಕಾರಿ ಆಸ್ವತ್ರೆ ಹಾಗೂ ಎಂವಿಜೆ ಆಸ್ವತ್ರೆಗೆ ಭೇಟಿ ನೀಡಿದ್ದಾರೆ.
ಅಸ್ವಸ್ಥಗೊಂಡು ಚಿಕಿತ್ಸೆ ಪಡೆಯುತ್ತಿರುವವರ ಆರೋಗ್ಯವನ್ನು ಮಾಜಿ ಸಚಿವ ಎಂಟಿಬಿ ವಿಚಾರಿಸಿದರು. ಆಸ್ವತ್ರೆಯಲ್ಲಿರುವವರಿಗೆ ಎಂಟಿಬಿ ನಾಗರಾಜ್ ಅವರು, ಎಳನೀರು ಓ ಆರ್ ಎಸ್ ಜ್ಯೂಸ್ ವಿತರಿಸಿದ್ದಾರೆ. ಮುಖಂಡರ ಜೊತೆ ಆಗಮಿಸಿ ಮಾಜಿ ಸಚಿವರು ಎಲ್ಲರಿಗೂ ದೈರ್ಯ ತುಂಬಿದ್ದಾರೆ.