ಕೊಪ್ಪಳ:- ಒಂದು ತಾಲೂಕಿಗೆ ಬರ ಪರಿಹಾರ ಈ ವಾರ ರಿಲೀಸ್ ಮಾಡಲಾಗುತ್ತದೆ ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ಬರ ಪರಿಹಾರವನ್ನು ಪ್ರೂಟ್ಆಪ್ ನಿಂದ ವಿತರಣೆ ಮಾಡಲಾಗುತ್ತಿದೆ. ಈ ವಾರದಲ್ಲಿ ಪ್ರಾಯೋಗಿಕವಾಗಿ ಒಂದು ತಾಲೂಕಿನಲ್ಲಿ ಪರಿಹಾರ ನೀಡಲಾಗುವುದು. ಇದರ ಸಾಧಕ ಬಾಧಕಗಳನ್ನು ನೋಡಿ ಮುಂದೆ ಕ್ರಮ ಕೈಗೊಳ್ಳಲಾಗುವುದು. ಈ ಆಪ್ನಲ್ಲಿ ತಪ್ಪುಗಳು ಕಂಡು ಬಂದರೆ ಸರಿಪಡಿಸಲಾಗುವುದು. ಇದು ಶಾಶ್ವತ ಪರಿಹಾರ ನೀಡುವ ಆಪ್ ಆಗಿರುತ್ತದೆ. ಪ್ರೂಟ್ ಆಪ್ನಲ್ಲಿ ಈಗ ಶೇ. 5೦ ರಷ್ಟು ರೈತರು ನೊಂದಾಯಿಸಿದ್ದಾರೆ. ಈಗ ಅಭಿಯಾನ ನಡೆಯುತ್ತಿದೆ. ಮಧ್ಯವರ್ತಿಗಳ ಹಾವಳಿ ಇಲ್ಲದೆ ರೈತರ ಖಾತೆಗೆ ನೇರ ಹಣ ಜಮಾ ಆಗುತ್ತದೆ ಎಂದರು.
ರಾಜ್ಯದಲ್ಲಿ236 ತಾಲೂಕಿಗಳಲ್ಲಿ ಬರವಿದೆ. ಈ ಕುರಿತು ಕೇಂದ್ರಕ್ಕೆ ಮನವರಿಕೆ ಮಾಡಿದ್ದೇವೆ. ಕೇಂದ್ರ ಅಧ್ಯಯನ ತಂಡ ಬಂದು ರಾಜ್ಯದಲ್ಲಿಯ ಬರ ತೀವ್ರತೆ ಮನವರಿಕೆಯಾಗಿದೆ. ಕೇಂದ್ರ ಸರಕಾರ ಇಷ್ಟರಲ್ಲಿಯೇ ಪರಿಹಾರ ನೀಡಬಹುದು ಎದರು.