ಬೆಂಗಳೂರು: ಪಕ್ಷೀಯರ ವಿರುದ್ಧ ಮತ್ತೆ ಬಸನಗೌಡ ಪಾಟೀಲ್ ಯತ್ನಾಳ್ ಸಿಡಿ ಗುಂಡು ಸಿಡಿಸಿದ್ದಾರೆ.ಬಿಜೆಪಿ ಸರ್ಕಾರದಲ್ಲಿ ನಲವತ್ತು ಸಾವಿರ ಕೋಟಿ ಕೋವಿಡ್ ಹಗರಣ ನಡೆದಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.ನನ್ನನ್ನ ಉಚ್ಛಾಟನೆ ಮಾಡಿದ್ರೆ,ದಾಖಲೆ ಬಿಡುಗಡೆ ಮಾಡುವುದಾಗಿ ಯತ್ನಾಳ್ ಎಚ್ಚರಿಕೆ ನೀಡಿದ್ದಾರೆ.
ವಾಯ್ಸ್-ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹಾಗೂ ಅವ್ರ ಕುಟುಂಬದ ವಿರುದ್ಧ ಒಂದಲ್ಲಾ ಒಂದು ವಿಚಾರಗಳಿಗೆ,ವಾಗ್ದಾಳಿ ಮಾಡುತ್ತಿರುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್,ಇದೀಗ ಮತ್ತೊಂದು ಹಂತಕ್ಕೆ ಹೋಗಿದ್ದಾರೆ.ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೋವಿಡ್ ವೇಳೆ ನಲವತ್ತು ಸಾವಿರ ಕೋಟಿ ಹಣ ಅವ್ಯವಹಾರ ಆಗಿದೆ ಎಂದು ಬಿಎಸ್ವೈ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.ಅಲ್ದೆ ನನ್ನನ್ನ ಪಕ್ಷದಿಂದ ಉಚ್ಛಾಟನೆ ಮಾಡಿದ ಮರುದಿನವೇ ಎಲ್ಲ ದಾಖಲೆ ಬಿಡುಗಡೆ ಮಾಡ್ತೀನಿ ಎಂದು ಯತ್ನಾಳ್ ನೇರವಾಗಿ ಎಚ್ಚರಿಕೆ ನೀಡಿದ್ದಾರೆ.
ವಾಯ್ಸ್-ಇನ್ನು ಬಿಜೆಪಿ ನೂತನ ಪದಾಧಿಕಾರಿಗಳ ಪಟ್ಟಿಗೆ ಯತ್ನಾಳ್,ಬಿಎಸ್ವೈ ವಿರುದ್ಧ ಏಕವಚನದಲ್ಲಿ ರಣಾಕ್ರೋಶ ವ್ಯಕ್ತಪಡಿಸಿದ್ದಾರೆ.ಯಡಿಯೂರಪ್ಪ ತನ್ನ ಕುಟುಂಬಕ್ಕೆ ಏನ್ ಬೇಕೋ ಅದನ್ನ ಮಾಡಿಕೊಂಡಿದ್ದಾನೆ.ತನ್ನ ಚೇಲಾಗಳಿಗೆ ಏನು ಮಾಡಬೇಕೋ ಅದನ್ನ ಮಾಡಿದ್ದಾರೆ.ಬಿಎಸ್ವೈ ಕುಟುಂಬಕ್ಕೆ ಕರ್ನಾಟಕ ಬಿಜೆಪಿ ಬಿಟ್ಟುಕೊಟ್ಟಿದೆ ಎಂದಿದ್ದಾರೆ.ಅಲ್ದೇ ಮೋದಿಯವರಿಗಾಗಿ ನಾನು ಕೆಲಸ ಮಾಡುತ್ತೇನೆ.ಯಡಿಯೂರಪ್ಪ ಕುಟುಂಬಕ್ಕೆ ಅಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
ವಾಯ್ಸ್-ಇನ್ನು ಯತ್ನಾಳ್ ಮಾಡಿರುವ ಕೋವಿಡ್ ಹಗರಣ ಬಗ್ಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಪ್ರತಿಕ್ರಿಯೆ ನೀಡಿದ್ದಾರೆ.ವಿಧಾನಸೌಧದಲ್ಲಿ ಈ ಬಗ್ಗೆ ಮಾತನಾಡಿದ ದಿನೇಶ್ ಗುಂಡುರಾವ್,ಈಗಾಗಲೇ ಈ ಬಗ್ಗೆ ತನಿಖೆಗೆ ನೀಡಿದ್ದೇವೆ.ತನಿಖೆಯ ವರದಿ ಮೇಲೆ ಕ್ರಮ ತೆಗದುಕೊಳ್ಳುತ್ತೇವೆ.ಯತ್ನಾಳ್ ಅವರಿಗೆ ವಿಶೇಷ ಮಾಹಿತಿ ಇರುತ್ತೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಒಟ್ಟಾರೆ,ಸ್ಷಪಕ್ಷೀಯರೇ ವಿರುದ್ಧ ಇಷ್ಟು ದಿನ ಗುಡುಗುತ್ತಿದ್ದ ಯತ್ನಾಳ್,ಇದೀಗ ಕೋವಿಡ್ ಹಗರಣ ಬಗ್ಗೆ ಮಾಜಿ ಸಿಎಂ ಬಿಎಸ್ವೈ ವಿರುದ್ಧವೇ ಗಂಭೀರ ಆರೋಪ ಮಾಡಿದ್ದಾರೆ.ಇದು ಮುಂದಿನ ದಿನಗಳಲ್ಲಿ ಯಾರ ಕೊರಳು ಸುತ್ತಿಕೊಳ್ಳುತ್ತೆ ಅನ್ನೋದನ್ನ ಕಾದು ನೋಡಬೇಕಿದೆ…