ರಣ್ಬೀರ್ ಕಪೂರ್- ರಶ್ಮಿಕಾ ಮಂದಣ್ಣ (Rashmika Mandanna) ನಟನೆಯ ‘ಅನಿಮಲ್’ ಸೂಪರ್ ಹಿಟ್ ಆಗಿದೆ. ರಣ್ಬೀರ್ ಜೋಡಿಯಾಗಿ ಕಾಣಿಸ್ಕೊಂಡ ರಶ್ಮಿಕಾ ಬಾಲಿವುಡ್ನಲ್ಲಿ ಭದ್ರವಾಗಿ ನೆಲೆಯೂರುವ ಪರ್ಫಾಮೆನ್ಸ್ ನೀಡಿದ್ದಾರೆ. ಇದನ್ನೆಲ್ಲಾ ದೂರದಿಂದ ನೋಡುತ್ತಿದ್ದ ಪರಿಣಿತಿ ಚೋಪ್ರಾ ಇದೀಗ ತಮ್ಮ ತಪ್ಪಿನ ಅರಿವಾಗಿದೆ. ನಿರ್ದೇಶಕ ಸಂದೀಪ್ ರೆಡ್ಡಿ (Sandeep Reddy Vanga) ವಂಗಾಗೆ ಪತ್ರ ಬರೆದು ಕ್ಷಮೆಯಾಚಿಸಿದ್ದಾರೆ.
ಅನಿಮಲ್ (Animal) ಸಿನಿಮಾ ರಿಲೀಸ್ ಆದ್ಮೇಲೆ ರಶ್ಮಿಕಾ ನಟಿಸಿದ ಗೀತಾಂಜಲಿ ಪಾತ್ರದ ವಿಚಾರ ಚರ್ಚೆಯಲ್ಲಿತ್ತು. ಇಲ್ಲಿ ರಶ್ಮಿಕಾ ಮಾಡಿರುವ ಪಾತ್ರಕ್ಕೆ ಮೊದಲು ಕರೆ ಹೋಗಿದ್ದು ಪರಿಣಿತಿ ಚೋಪ್ರಾಗೆ ಅನ್ನೋದು ಅಸಲಿ ವಿಷಯ. ಇದನ್ನ ಸಂದರ್ಶನವೊಂದರಲ್ಲಿ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಕೂಡ ಹೇಳಿದ್ದರು. ಅನಿಮಲ್ ಸಕ್ಸಸ್ ಬಳಿಕ ಪರಿಣಿತಿ (Parineethi Chopra) ಸಂದೀಪ್ಗೆ ಸಾಧ್ಯವಾದರೆ ಕ್ಷಮಿಸಿಬಿಡಿ ಎಂದು ಸಂದೇಶ ಕಳಿಸಿದ್ದಾರೆ.
‘ಅನಿಮಲ್’ನಲ್ಲಿ ರಶ್ಮಿಕಾ ಮಾಡಿರುವ ಗೀತಾಂಜಲಿ ಪಾತ್ರಕ್ಕೆ ಭರ್ಜರಿ ಮೆಚ್ಚುಗೆ ಬಂದಿದೆ. ಬಾಲಿವುಡ್ನಲ್ಲಿ ಎರಡು ಚಿತ್ರ ಮಾಡಿ ಬ್ರೇಕ್ಗಾಗಿ ಕಾಯುತ್ತಿದ್ದ ರಶ್ಮಿಕಾಗೆ ಅನಿಮಲ್ ಭದ್ರ ನೆಲೆ ಕೊಡುವ ಭರವಸೆ ಮೂಡಿಸಿದೆ. ಇದೆಲ್ಲವನ್ನೂ ದೂರದಿಂದಲೇ ನೋಡುತ್ತಿದ್ದ ಪರಿಣಿತಿಗೆ ಈಗ ಮನವರಿಕೆ ಆದಂತಿದೆ.