ಬಳ್ಳಾರಿ : ಫ್ರೀ ಗ್ಯಾರಂಟಿಯು ಎಎಪಿ ಪಕ್ಷದ ಪ್ರಾಣಾಳಿಕೆ ಇಂದು ಕಾಂಗ್ರೆಸ್ ಪಕ್ಷದವರು ಎಎಪಿಯಿಂದ ಕದ್ದು ಜಾರಿಗೆ ತಂದಿದ್ದಾರೆ ಎಂದು ಎಎಪಿ ಪಕ್ಷದ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ಆರೋಪಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು ಕಾಂಗ್ರೆಸ್ ವಿರುದ್ಧ ಕಿಡಿ ಕಾರಿದ್ದಾರೆ ಸಿದ್ದರಾಮಯ್ಯ ಅವರು ಕದ್ದಿರುವುದನ್ನು ಒಪ್ಪಿಕೊಳ್ಳಬೇಕು ಬಡಜನರ ಶ್ರೇಯಸ್ಸುನ್ನು ಬಯಸುವ ಪಕ್ಷ ಎಎಪಿ ಇಂದು ಕರ್ನಾಟಕ, ತಮಿಳುನಾಡು, ತೆಲಂಗಾಣದಲ್ಲಿ ಜಾರಿಗೆ ತಂದಿರುವ ಗ್ಯಾರಂಟಿಗಳ ಮೂಲಕ ನಮ್ಮ ಎಎಪಿ, ನಮ್ಮ ಪಕ್ಷ ದೆಹಲಿಯಲ್ಲಿ ಜಾರಿಗೆ ತಂದ ನಂತರ ಮುಂದೆ ಪ್ರತಿ ರಾಜ್ಯದಲ್ಲಿ ಜಾರಿಗೆ ತಂದಿದ್ದಾರೆ
ನಮ್ಮ ಪಕ್ಷದ ಅಭ್ಯಾರ್ಥಿಗಳು 75% ನ್ಯಾಯಯುತವಾದ ಆಸ್ತಿಗಳನ್ನು ಘೋಷಿಸಿಕೊಂಡಿದ್ದಾರೆ ಇನ್ನು ಜೆಸಿಬಿ ಪಕ್ಷದಿಂದ ದೇಶವನ್ನು ಕೊಳ್ಳೆ ಹೊಡೆಯುವ ಕೆಲಸವಾಗಿದೆ, ಪಾರದರ್ಶಕವಾಗಿ ಆಡಳಿತ ನಡೆಸುವ ಕಾರ್ಯ ಎಎಪಿ ಮಾಡುತ್ತಿದೆ
ಪ್ರಭಕರ್ ಕಲ್ಡಕರ್ ಹೇಳಿಕೆ ಕುರಿತು ಮಾತನಾಡಿದ ಅವರು, ಅವರ ಹೇಳಿಕೆ ಸಮಾಜ ತಲೆಕಗ್ಗಿಸುವ ಮಾತು ಈ ರೀತಿಯ ಹೇಳಿಕೆಯನ್ನು ನೀಡುವ ಅವರು ದೇಶ ದ್ರೋಹಿಗಳು, ಬಿಜೆಪಿ ಅಧಿಕಾರಕ್ಕೆ ಬಂದರೇ ಮಾತ್ರ ಸರಿಯಾದ ಗಂಡ ಎಂದು ಹೇಳಿರುವುದು ತಪ್ಪು ಅದು ಒಬ್ಬ ಮಹಿಳೆಗೆ ಮಾಡಿದ ಅವಮಾನ ಅಲ್ಲ ಬದಲಾಗಿ ಸಮಸ್ತ ಮಾನವ ಸಮಾಜಕ್ಕೆ ಅವಮಾನ ಮಾಡಿದಂತೆ ಇಂತವರ ವಿರುದ್ದ ಸುಮೊಟೊ ಕೇಸ್ ದಾಖಲಿಸಿಕೊಳ್ಳಬೇಕು ಸಂಪ್ರದಾಯದ ಬಗ್ಗೆ ಮಾತನಾಡುವ ಪ್ರಭಾಕರ್ ಕಲ್ಡಕರ್ ಈ ರೀತಿಯ ಹೇಳಿಕೆಗಳನ್ನು ನೀಡುವುದು ಸರಿಯಲ್ಲ ಎಂದರು.
ಸಚಿವ ಶಿವಾನಂದ ಪಾಟೀಲ್ ಅವರು ರೈತ ಬಗ್ಗೆ ಹೇಳಿಕೆ ಕುರಿತು ಮಾತನಾಡಿದ್ದು ತೀವ್ರ ಖಂಡನೀಯ ರೈತರ ಬಗ್ಗೆ ಈ ರೀತಿಯ ಹೇಳಿಕೆ ನೀಡಿರುವುದು ಸರಿಯಲ್ಲ ಒಬ್ಬ ಸಚಿವರಾಗಿ ಬೇಜವಾಬ್ದಾರಿಯ ರೀತಿ ಹೇಳಿಕೆ ನೀಡಬಾರದು, ಅವರು ಅಹಂಕಾರದಿಂದ ಈ ರೀತಿಯ ಹೇಳಿಕೆ ನೀಡಿದ್ದಾರೆ ರೈತರಿಗೆ ಅವಮಾನ ಮಾಡುವ ಉದ್ದೇಶದಿಂದ ಈ ರೀತಿಯ ಹೇಳಿಕೆಯನ್ನು ನೀಡಿದ್ದಾರೆ ಎಂದು ಮುಖ್ಯಮಂತ್ರಿ ಚಂದ್ರು ಹೇಳಿದರು.