ಬೆಂಗಳೂರು : ಹೊಸ ವರ್ಷಕ್ಕೆ ಸಂಭ್ರಮಾಚರಣೆ ವೇಳೆ ಯಾವುದೇ ಅಹಿತಕರ ಘಟನೆ ನಡೆದಯಂತೆ ಎಚ್ಚರಿಕೆ ವಹಿಸಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ದಯಾನಂದ್ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಜನಸಂದಣಿ ಜಾಗದಲ್ಲಿ ಬಂದೋಬಸ್ತ್ ಪಿಕೇಟಿಂಗ್ ಪಾಯಿಂಟ್ ಗಳ ನೇಮಕ ಸ್ಟಾರ್ ಹೋಟೆಲ್, ಪಬ್ , ಕ್ಲಬ್ ಗಳ ಏರಿಯಾದಲ್ಲೊ ಬಂದೋಬಸ್ತ್ ಪಾಯಿಂಟ್ ಗಳ ನಿಯೋಜನೆ ಬ್ರಿಗೇಡ್, ಎಂಜಿ ರಸ್ತೆಯಲ್ಲಿ 3 ಸಾವಿರ ಪೊಲೀಸರ ನಿಯೋಜನೆ ಮಹಿಳೆಯರ ಸುರಕ್ಷತೆಗಾಗಿ ಸೇಫ್ ಟೀಂ ಐಲ್ಯಾಂಡ್ ಗಳ ನಿರ್ಮಾಣ ಮಕ್ಕಳು ಕಾಣೆಯಾದರೆ ಕಳುವು ಬಗ್ಗೆ ಮಾಹಿತಿ ನೀಡಲು ಪೊಲೀಸ್ ಕಿಯೋಸ್ಕ್ ಗಳ ನಿರ್ಮಾಣ ಸೂಕ್ತ ಕಣ್ಗಾವಲು ಪ್ರದೇಶದಲ್ಲಿ ವಾಚ್ ಟವರ್ ಗಳ ನಿರ್ಮಾಣ, ಬೈನಾಕುಲರ್ ಮೂಲಕ ವೀಕ್ಷಣೆ ಉಳಿದಂತೆ ಇಂದಿರಾನಗರ ಹಾಗೂ ಕೋರಮಂಗಲದಲ್ಲೂ ಹೆಚ್ಚಿನ ಪೊಲೀಸರ ನಿಯೋಜನೆ
ಡ್ರಗ್ ಫೆಡ್ಲರ್ ಗಳ ಮೇಲೆ ತೀವ್ರ ನಿಗಾ ಇಟ್ಟಿರೋ ಪೊಲೀಸರು ಯಾವುದೇ ಕಾರಣಕ್ಕೂ ಡ್ರಗ್ಸ್ ಸೇವನೆ ಮಾಡೋಕೆ ಬಿಡಲ್ಲ ಈಗಾಗಲೇ ಫೆಡ್ಲರ್ ಗಳನ್ನು ವಶಕ್ಕೆ ಪಡೆದು ವಿಚಾರಣೆ ಮಾಡಲಾಗ್ತಾ ಇದೆ ಅನಧಿಕೃತವಾಗಿ ಎಣ್ಣೆ ಶೇಖರಣೆ ಮಾಡೋದು, ಬ್ಲಾಕ್ ನಲ್ಲಿ ಮಾರಾಟ ಮಾಡೋಕೆ ಮೇಲೆ ನಿಗಾ
ರೌಡಿಗಳ ಮೇಲೆಯೂ ಹದ್ದಿನ ಕಣ್ಣಿಡಲಾಗಿದೆ ಡ್ರಂಕ್ ಅಂಡ್ ಟ್ರೈವ್ ಮೇಲೆಯೂ ಈಗಾಗಲೇ ಕಾರ್ಯಾಚರಣೆ ಮಾಡಲಾಗ್ತಾ ಇದೆ ಪ್ರಮುಖ ಸ್ಥಳದಲ್ಲಿ ಡ್ರೋನ್ ಕ್ಯಾಮರಾಗಳನ್ನು ಬಳಸಲಾಗ್ತಾ ಇದೆ ಸುಮಾರು 10 _ಸಾವಿರ ಕ್ಕೂ ಹೆಚ್ಚು ಪೊಲೀಸರನ್ನು ನಗರದಾದ್ಯಂತ ನಿಯೋಜನೆ ಈಗಾಗಲೇ 8 ಸಾವಿರಕ್ಕೂ ಅಧಿಕ ಪೊಲೀಸರ ನಿಯೋಜನೆ ಮಾಡಲಾಗಿದೆ ಉಳಿದಂತೆ ಹೋಂ ಗಾರ್ಡ್ ಗಳನ್ನು ಸಹ ನಿಯೋಜನೆ ಮಾಡಲಾಗುತ್ತೆ
ಬಂದೋಬಸ್ತ್’ಗೆ ಪೊಲೀಸರ ನಿಯೋಜನೆ
ಹೆಚ್ಚುವರಿ ಪೊಲೀಸ್ ಆಯುಕ್ತರು – 2
ಜಂಟಿ ಪೊಲೀಸ್ ಆಯುಕ್ತರು – 1
ಡಿಸಿಪಿ – 15
ಎಸಿಪಿ – 45
ಇನ್ಸ್ಪೆಕ್ಟರ್ ಗಳು – 160
ಸಬ್ ಇನ್ಸ್ಪೆಕ್ಟರ್ ಗಳು – 600
ಎಎಸ್ಐ – 600
ಎಚ್ ಸಿ – 1800
ಪಿಸಿ ಗಳು – 5200
ರಾತ್ರಿ ಒಂದು ಗಂಟೆವರೆಗೂ ಮಾತ್ರ ಸೆಲೆಬ್ರೇಷನ್ ಗೆ ಅವಕಾಶ ಒಂದು ಗಂಟೆಗೆ ಎಲ್ಲವನ್ನು ಕ್ಲೋಸ್ ಮಾಡಬೇಕು ಹೋಟೆಲ್ ಬಾರ್ ಪಬ್ ಎಲ್ಲವೂ ಕ್ಲೋಸ್ ಮಾಡಬೇಕು
ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೋಗೋ ಫ್ಲೈ ಓವರ್ ಮಾತ್ರ ಓಪನ್ ಇರುತ್ತದೆ ಉಳಿದಂತೆ ಎಲ್ಲಾ ಫ್ಲೈ ಓವರ್ ಗಳು ಬಂದ್ ಆಗಲಿದೆ ಮಾಲ್ನಲ್ಲಿ ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರ್ತಾರೆ ಅಂತ ಸುದ್ದಿ ಇದೆ ಹೀಗಾಗಿ ಎಲ್ಲಾ ಮಾಲ್ ಗಳ ಬಳಿಯೂ ಪೊಲೀಸರ ನಿಯೋಜನೆ ಮಾಡಲಾಗುತ್ತೆ ಎಂಜಿ ರೋಡ್, ಬ್ರೀಗೆಡ್ ರಸ್ತೆ ಬಳಿ ಪಾರ್ಕಿಂಗ್ ಗೆ ಅವಕಾಶವಿಲ್ಲ 48 ನಾಕಾಬಂದಿಗಳನ್ನ ಮಾಡಲಾಗಿದೆ ವೀಲಿಂಗ್ ಹಾಗೂ ಡ್ರ್ಯಾಗ್ ರೇಸಿಂಗ್ ಕಡಿವಾಣಕ್ಕೆ ರೆಡಿ ಆಗಿದ್ದೀವಿ 48 ಕಡೆಗಳಲ್ಲಿ ಡ್ರಂಕ್ ಅಂಡ್ ಡ್ರೈವ್ ತಪಾಸಣೆ ಮಾಡಲಾಗುತ್ತೆ ರಾತ್ರಿ 11 ರಿಂದ ಬೆಳಿಗ್ಗೆ 6 ಗಂಟೆವರೆಗೂ ಫ್ಲೈ ಓವರ್ ಗಳು ಕ್ಲೋಸ್ ಆಗಿರುತ್ತೆ ಎಂದು ತಿಳಿಸಿದರು.