ದೊಡ್ಡಬಳ್ಳಾಪುರ: ಜೆಡಿಎಸ್ ಪಕ್ಷ ಸೋತಿರಬಹುದು ಆದರೆ ಸತ್ತಿಲ್ಲ ಬೂತ್ ಮಟ್ಟದಿಂದ ಪಕ್ಷ ಸಂಘಟನೆ ಮಾಡುತ್ತೇವೆ ಎಂದು ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಹರೀಶ್ ಗೌಡ ಹೇಳಿದರು.
ನಗರದ ಒಕ್ಕಲಿಗರ ಸಮುದಾಯ ಭವನದಲ್ಲಿ ಆಯೋಜಿಸಿದ್ದ ನೂತ ನ ವರ್ಷದ ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.
ಸ್ಥಳೀಯ ಶಾಸಕರು ನನ್ನ ಸ್ನೇಹಿತರು. ಮೈತ್ರಿ ಪಕ್ಷಗಳ ಮುಖಂಡರು ಹಾಗೂ ಕಾರ್ಯಕರ್ತರ ಸಂಬಂಧ ಸ ಸ್ನೇಹಮಯವಾಗಿರಲಿ, ಶಾಸಕರ ಒಳ್ಳೆಯ ಕೆಲಸಗಳಿಗೆ ನಮ್ಮ ಸಹ ಕಾರವೂ ಇರಲಿದೆ. ಆದರೆ, ವಿರೋಧ ಪಕ್ಷದ ನಾಯಕರು ಜೆಡಿಎಸ್ ನಾಯಕರನ್ನು ಕೊಳ್ಳುವ ಮಾತನಾಡಿರುವುದು ಸರಿಯಲ್ಲ. ಪಕ್ಷದ ಹಿತಾಸಕ್ತಿಗೆ ಧಕ್ಕೆಯಾದರೆ ಖಂಡಿಸುವ ಅಧಿಕಾರ ವನ್ನು ವರಿಷ್ಠರು ನೀಡಿದ್ದಾರೆ ಎಂದು ಪರೋಕ್ಷ ಎಚ್ಚರಿಕೆ ನೀಡಿದರು.
ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಕಾಂಗ್ ರೆಸ್ಸಿಗೆ ದೇಶದಲ್ಲಿ ಎಂತಹ ಪರಿಸ್ಥಿತಿ ಬಂದೊದಗಿದೆ ಎಂ ಬುದು ಎಲ್ಲರಿಗೂ ತಿಳಿದಿದೆ. ತಾಲೂಕಿನಲ್ಲಿ ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ ಬಿಡು ಗಡೆಯಾಗಿದ್ದ ಅನುದಾನವನ್ನು ಕಾಂಗ್ರೆಸ್ ಸರ್ಕಾರ ದೇವ ನಹಳ್ಳಿಗೆ ವರ್ಗಾಯಿಸಿದೆ. ಕ್ಷೇತ್ರದ ಮಾಜಿ ಶಾಸಕರು ಇದರ ವಿರುದ್ಧ ದನಿಯೆತ್ತಿಲ್ಲ. ಬಿಬಿಎಂಪಿ ಸೇರಿದಂತೆ ಸ್ಥಳೀಯ ಚುನಾವಣೆ ನಡೆಸಲೂ ಮೀನಾಮೇಷ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ತಾಲೂಕಿನ ಸಮಸ್ಯೆಗಳಿಗೆ ಸ್ಪಂದಿಸುವ ಸಲುವಾಗಿ ಪಕ್ಷದ ಮುಖಂಡರು, ಕಾರ್ಯಕರ್ತರಲ್ಲಿ ಚೈತನ್ಯ ತುಂಬಲು ಕಾರ್ಯಕ್ ರಮ ಆಯೋಜಿಸಲಾಗಿದೆ. ಕ್ಷೇತ್ರದಲ್ಲಿ ಕೆಟ್ಟ ಶಕ್ತಿಗಳ ಕೈವಾಡದಿಂದ ಪಕ್ಷ ಮೂ ರನೇ ಸ್ಥಾನಕ್ಕೆ ಬಂದಿದೆ. ಬೂತ್ ಮಟ್ಟದಲ್ಲಿ ಕ್ಯಾಲೆಂಡರ್ ತಲುಪಿಸುವ ಜೊತೆಗೆ ಸಂಘಟನೆಗೆ ಎಲ್ಲರೂ ಶ್ರಮಿಸಬೇಕು. ಮುಖಂಡರ ಸಹಕಾರ ಇಲ್ಲದೇ ಯಾವುದೇ ಕೆಲಸ ಮಾಡಲಾಗದು. ನನ್ನ ರಾಜಕೀಯ ಜೀವನ ಇರುವವರೆಗೂ ಪಕ್ಷ ವಿರೋಧಿ ಕೆಲಸ ಮಾಡಲ್ಲ. ಮುಖಂಡರು ನನಗೆ ಅವಕಾಶ ಮಾಡಿಕೊಡಬೇಕು. ಪ್ರತಿ ಪಂಚಾಯ್ತಿಯಲ್ಲಿ ಸಭೆ ಮಾಡಿ, ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಬೇಕು ಎಂದು ಕರೆ ನೀಡಿದರು.
ಪ್ರತಿಎರಡು ತಿಂಗಳಿಗೊಮ್ಮೆ ಪಂಚಾಯ್ತಿ ಮಟ್ಟದಲ್ಲಿ ಗ್ರಾಮ ವಾಸ್ತವ್ಯ ಮಾಡಲಾಗುವುದು. ಇನ್ನು ಐದಾರು ತಿಂಗಳಲ್ಲಿ ರಾಜಕೀಯ ಧೃವೀಕರಣ ನಡೆದು, ಕುಮಾರಸ್ವಾಮಿಯವರೇ ಅಧಿಕಾರದ ಚುಕ್ಕಾಣಿ ಹಿಡಿಯಲಿದ್ದಾಾರೆ ಯಾರೂ ಧೃತಿಗೆಡಬಾರದು ಎಂದು ಹೇಳಿದರು.
ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ರವಿಕುಮಾರ್ ಮಾತನಾ ಡಿ, ತಾಲೂಕಿನಲ್ಲಿ ಜೆಡಿಎಸ್ ಪಕ್ಷ ಫಿನಿಕ್ಸ್ ನಂತೆ ಪು ಟಿದೇಳಲಿದೆ. ಬಿಜೆಪಿ, ಕಾಂಗ್ರೆಸ್ ಪಕ್ಷಗಳಿಗೆ ನಮ್ಮಮುಖಂಡರು, ಕಾರ್ ಯಕರ್ತರ ವಲಸೆ ತಡೆಯಲು ಹರೀಶ್ ಗೌಡರು ಕಾರ್ಯಕರ್ತರಲ್ಲಿ ಹುರುಪು ತುಂಬುವ ಕೆಲಸ ಮಾಡುತ್ತಿದ್ದಾರೆ. ವರಿಷ್ಠರು ಯಾರಿಗೇ ಟಿಕೆಟ್ ನೀಡಿದರೂ ಒಟ್ಟಾಗಿ ಕೆಲಸ ಮಾಡೊಣ. ಮುಂಬರುವ ದಿನಗಳಲಿ ಬಾಶೆಟ್ಟಿಹಳ್ಳಿ ಪ.ಪಂ, ಎಪಿಎಂಸಿ, ತಾ.ಪಂ ಜಿ.ಪಂ ಚುನಾವಣೆ ಎದುರಿಸಲು ಈಗಿನಿ ಎಲ್ಲರು ಸಕ್ರಿಯರಾಗಿ ದುಡಿಯಬೇಕು
ಕಾಂತಮಣಿ ಹರೀಶ್ ಗೌಡ ಮಾತನಾಡಿ, ರಾಷ್ಟ್ರೀಯ ಪಕ್ಷಗಳನ್ ನು ಹಿಂದಿಕ್ಕಿ ಮುನ್ನೆಡೆಯುವ ಶಕ್ತಿ ಜೆಡಿಎಸ್ ಪಕ್ಷಕ ಕ್ಕಿದೆ. ಜನಪರ ಕಾರ್ಯಕ್ರಮ ನೀಡುವ ಪ್ರಾದೇಶಿಕ ಪಕ್ಷಗಳನ್ನು ಗೆ ಲ್ಲಿಸೋಣ ಎಂದು ಕಾರ್ಯಕರ್ತರಿಗೆ ಕರೆ ನೀಡಿದರು
ಜೆಡಿಎಸ್ ಹಿರಿಯ ಮುಖಂಡ ಎಚ್.ಅಪ್ಪಯ್ಯಣ್ಣ ಮಾತನಾಡಿ, ಪೂಲೆಗುಂಪಾಗಿದ್ದಾರೆ ಎಂಬುದನ್ನು ಕಾರ್ಯಕ್ರಮ ಸುಳ್ಳು ಮಾಡಿದು . ಲೊಕಸಭೆ ಚುನಾವಣೆಯಲ್ಲಿ ಎದುರಾಳಿಗಳಿಗೆ ತಕ್ಕ ಉತ್ತರ ಕೊಡಬೇಕು ಎಂದರು
ಮುಖಂಡರಾದ ರಾ.ಬೈರೇಗೌಡ, ಚಂದ್ರಣ್ಣ ಎ.ನರಸಿಂಹಯ್ಯ ನಗರ ಸಭಾ ಸದಸ್ಯತ. ನಾ. ಪ್ರಭುದೇವ್, ಕೊನಘಟ್ಟ ಆನಂದ್, ಪ್ರವೀಣ್ ಶಾಂತಿನಗರ, ಕೆಂಪರಾಜು, ಕೊತ್ತೂರಪ್ಪ ಹಾಗೂ ತಾಲ್ಲೂಕಿನ ಹಲವು ಮುಖಂಡ ರು, ಕಾರ್ಯಕರ್ತರು ಉಪಸ್ಥಿತರಿದ್ದರು.