ಬೆಂಗಳೂರು: ಕೆಲ ಸೆಲೆಬ್ರೆಟಿಗಳು ಬದುಕಲ್ಲಿ ಲವ್ , ಸೆಕ್ಸ್, ದೋಖಾ ಅನ್ನೊದು ಕಾಮನ್ ಏನೂ ಅನ್ನೋಷ್ಟರ ಮಟ್ಟಿಗೆ ಆಗಿಬಿಟ್ಟಿದೆ. ಹೌದು. ಇದೀಗ ಕರ್ನಾಟಕದ ಕ್ರಿಕೆಟಿಗರೊಬ್ಬರ ಮೇಲೆ ಇಂತಹದೇ ಆರೋಪ ಕೇಳಿ ಬಂದಿದೆ.. ಸದ್ಯ ಕ್ರಿಕೆಟರ್ ನ ಪ್ರೇಮ ಪುರಾಣ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಮಾಜಿ ಸೈನಿಕರೊಬ್ಬರ ಪುತ್ರಿ ಆರ್ ಟಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಆ ಕುರಿತ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ ನೋಡಿ….
ಕೊಡಗು ಮೂಲದ ಕ್ರಿಕೆಟಿಗ ಕೆ.ಸಿ.ಕಾರಿಯಪ್ಪ ವಿರುದ್ದ ಗಂಭೀರ ಆರೋಪ ಕೇಳಿ ಬಂದಿದೆ.ಇನ್ಸ್ಟಾ ಗ್ರಾಮ್ ನಲ್ಲಿ ಪರಿಚಯವಾಗಿದ್ದ ಯುವತಿಯನ್ನ ಮದ್ವೆಯಾಗೋದಾಗಿ ನಂಬಿಸಿ ವಂಚಿಸಿದ್ದಾರಂತೆ. ಇನ್ನು ಕಾರಿಯಪ್ಪನಿಂದ ವಂಚನೆಗೊಳಗಾದ ಯುವತಿಯೂ ಕೊಡಗು ಮೂಲದವರಾಗಿದ್ದು, ಎರಡು ವರ್ಷಗಳ ಹಿಂದೆ ಇಬ್ಬರಿಗೂ ಇನ್ಸ್ಟಾ ದಲ್ಲಿ ಪರಿಚಯವಾಗಿತ್ತಂತೆ. ನಂತರ ಪರಿಚಯ ಪ್ರೇಮಕ್ಕೆ ತಿರುಗಿದ್ದು, ದೈಹಿಕ ಸಂಪರ್ಕವೂ ಬೆಳೆಸಿ ಕೊನೆಗೆ ಸದ್ಯಕ್ಕೆ ಮಗು ಬೇಡ ಅಂತ ಅಬಾರ್ಷನ್ ಮಾಡಿಸಲು ಕಾರಿಯಪ್ಪನೇ ಬಲವಂತವಾಗಿ ಯುವತಿಗೆ ಮಾತ್ರೆ ನುಂಗಿಸಿದ್ದ ಎಂದು ಆರೋಪಿಸಲಾಗಿದೆ..
ಅದಾದ ಬಳಿಕ ಕಾರಿಯಪ್ಪ ಯುವತಿಯನ್ನ ಅವೈಡ್ ಮಾಡೋದಕ್ಕೆ ಶುರು ಮಾಡಿದ್ದಾನಂತೆ. ಅದೇ ವೇಳೆ ಕಾರಿಯಪ್ಪನ ಮತ್ತೊಬ್ಬ ಗರ್ಲ್ ಫ್ರೆಂಡ್ ಈ ಯುವತಿಗೆ ಕರೆ ಮಾಡಿ ವಿಚಾರಿಸಿದ್ದಾಳೆ. ಈ ವೇಳೆ ನನಗೆ ಮೋಸ ಮಾಡ್ತಿದ್ದೀಯ ನನ್ನನ್ನ ಮದ್ವೆಯಾಗು ಅಂತ ಒತ್ತಾಯಿಸಿದ್ದು, ಅದಕ್ಕೆ ಕಾರಿಯಪ್ಪ ವಿರೋಧ ವ್ಯಕ್ತಪಡಿಸಿದನಂತೆ. ಈ ಸಂಬಂಧ ನೊಂದ ಯುವತಿ ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.
ಬಳಿಕ ಡ್ರಾಮ ಶುರು ಮಾಡಿದ ಕಾರಿಯಪ್ಪ ಐಪಿಎಲ್ ಮುಗಿದ ಬಳಿಕ ಮದುವೆ ಆಗೋದಾಗಿ ನಂಬಿಸಿ ಕೇಸ್ ವಾಪಸ್ಸು ತೆಗೆಸಿಕೊಳ್ಳುವಂತೆ ಮಾಡಿದ್ದಾನಂತೆ.ನಂತರ ಮನೆಗೆ ಬಂದು ಮದ್ವೆಯಾಗೋದಾಗಿ ಮಾತುಕತೆ ಮಾಡಿ, ಟೂರ್ನಮೆಂಟ್ ಅದು ಇದು ಅಂತ ಅವೈಡ್ ಮಾಡಿದ್ದಾನಂತೆ. ಹೀಗಾಗಿ ಇದೀಗ ನನಗೆ ಮೋಸ ಮಾಡಿದ್ದಾನೆಂದು ಆರ್.ಟಿ. ನಗರ ಪೊಲೀಸ್ ಠಾಣೆಯಲ್ಲಿ ಸಂತ್ರಸ್ತೆ ದೂರು ದಾಖಲಿಸಿದ್ದಾಳೆ. ಅತ್ತ ಕಾರಿಯಪ್ಪ ಸಹ ಯುವತಿ ವಿರುದ್ದ ಕೌಂಟರ್ ಕಂಪ್ಲೈಂಟ್ ದಾಖಲಿಸಿದ್ದು, ಯುವತಿ ನಡೆತೆ ಸರಿ ಇಲ್ಲ. ನನ್ನ ಮನೆ ಬಳಿಬಂದು ಗಲಾಟೆ ಮಾಡಿ, ಪೋಷಕರಿಗೆ ಬೆದರಿಕೆ ಹಾಕ್ತಾಳೆ ಅಂತ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಸದ್ಯ ಇಬ್ಬರು ಒಬ್ಬರಿಗೋಬ್ಬರು ಆರೋಪ ಪ್ರತ್ಯಾರೋಪ ಮಾಡಿಕೊಳ್ಳುತ್ತಿದ್ದು, ಇಬ್ಬರ ಜಗಳ ಪೊಲೀಸ್ ಠಾಣೆ ಮೆಟ್ಟಿಲೆರಿದ್ದು, ಮುಂದೆ ಇಬ್ಬರ ಪ್ರೇಮ ಪುರಾಣ ಎಲ್ಲಿಗೆ ಹೋಗಿ ನಿಲ್ಲುತ್ತೆ ಕಾದು ನೋಡಬೇಕು. ಕೆಲ ಸೆಲೆಬ್ರೆಟಿಗಳು ಬದುಕಲ್ಲಿ ಲವ್ , ಸೆಕ್ಸ್, ದೋಖಾ ಅನ್ನೊದು ಕಾಮನ್ ಏನೂ ಅನ್ನೋಷ್ಟರ ಮಟ್ಟಿಗೆ ಆಗಿಬಿಟ್ಟಿದೆ. ಹೌದು. ಇದೀಗ ಕರ್ನಾಟಕದ ಕ್ರಿಕೆಟಿಗರೊಬ್ಬರ ಮೇಲೆ ಇಂತಹದೇ ಆರೋಪ ಕೇಳಿ ಬಂದಿದೆ.. ಸದ್ಯ ಕ್ರಿಕೆಟರ್ ನ ಪ್ರೇಮ ಪುರಾಣ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಮಾಜಿ ಸೈನಿಕರೊಬ್ಬರ ಪುತ್ರಿ ಆರ್ ಟಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಆ ಕುರಿತ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ ನೋಡಿ…
ಕೊಡಗು ಮೂಲದ ಕ್ರಿಕೆಟಿಗ ಕೆ.ಸಿ.ಕಾರಿಯಪ್ಪ ವಿರುದ್ದ ಗಂಭೀರ ಆರೋಪ ಕೇಳಿ ಬಂದಿದೆ.ಇನ್ಸ್ಟಾ ಗ್ರಾಮ್ ನಲ್ಲಿ ಪರಿಚಯವಾಗಿದ್ದ ಯುವತಿಯನ್ನ ಮದ್ವೆಯಾಗೋದಾಗಿ ನಂಬಿಸಿ ವಂಚಿಸಿದ್ದಾರಂತೆ. ಇನ್ನು ಕಾರಿಯಪ್ಪನಿಂದ ವಂಚನೆಗೊಳಗಾದ ಯುವತಿಯೂ ಕೊಡಗು ಮೂಲದವರಾಗಿದ್ದು, ಎರಡು ವರ್ಷಗಳ ಹಿಂದೆ ಇಬ್ಬರಿಗೂ ಇನ್ಸ್ಟಾ ದಲ್ಲಿ ಪರಿಚಯವಾಗಿತ್ತಂತೆ. ನಂತರ ಪರಿಚಯ ಪ್ರೇಮಕ್ಕೆ ತಿರುಗಿದ್ದು, ದೈಹಿಕ ಸಂಪರ್ಕವೂ ಬೆಳೆಸಿ ಕೊನೆಗೆ ಸದ್ಯಕ್ಕೆ ಮಗು ಬೇಡ ಅಂತ ಅಬಾರ್ಷನ್ ಮಾಡಿಸಲು ಕಾರಿಯಪ್ಪನೇ ಬಲವಂತವಾಗಿ ಯುವತಿಗೆ ಮಾತ್ರೆ ನುಂಗಿಸಿದ್ದ ಎಂದು ಆರೋಪಿಸಲಾಗಿದೆ..
ಅದಾದ ಬಳಿಕ ಕಾರಿಯಪ್ಪ ಯುವತಿಯನ್ನ ಅವೈಡ್ ಮಾಡೋದಕ್ಕೆ ಶುರು ಮಾಡಿದ್ದಾನಂತೆ. ಅದೇ ವೇಳೆ ಕಾರಿಯಪ್ಪನ ಮತ್ತೊಬ್ಬ ಗರ್ಲ್ ಫ್ರೆಂಡ್ ಈ ಯುವತಿಗೆ ಕರೆ ಮಾಡಿ ವಿಚಾರಿಸಿದ್ದಾಳೆ. ಈ ವೇಳೆ ನನಗೆ ಮೋಸ ಮಾಡ್ತಿದ್ದೀಯ ನನ್ನನ್ನ ಮದ್ವೆಯಾಗು ಅಂತ ಒತ್ತಾಯಿಸಿದ್ದು, ಅದಕ್ಕೆ ಕಾರಿಯಪ್ಪ ವಿರೋಧ ವ್ಯಕ್ತಪಡಿಸಿದನಂತೆ. ಈ ಸಂಬಂಧ ನೊಂದ ಯುವತಿ ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.
ಬಳಿಕ ಡ್ರಾಮ ಶುರು ಮಾಡಿದ ಕಾರಿಯಪ್ಪ ಐಪಿಎಲ್ ಮುಗಿದ ಬಳಿಕ ಮದುವೆ ಆಗೋದಾಗಿ ನಂಬಿಸಿ ಕೇಸ್ ವಾಪಸ್ಸು ತೆಗೆಸಿಕೊಳ್ಳುವಂತೆ ಮಾಡಿದ್ದಾನಂತೆ.ನಂತರ ಮನೆಗೆ ಬಂದು ಮದ್ವೆಯಾಗೋದಾಗಿ ಮಾತುಕತೆ ಮಾಡಿ, ಟೂರ್ನಮೆಂಟ್ ಅದು ಇದು ಅಂತ ಅವೈಡ್ ಮಾಡಿದ್ದಾನಂತೆ. ಹೀಗಾಗಿ ಇದೀಗ ನನಗೆ ಮೋಸ ಮಾಡಿದ್ದಾನೆಂದು ಆರ್.ಟಿ. ನಗರ ಪೊಲೀಸ್ ಠಾಣೆಯಲ್ಲಿ ಸಂತ್ರಸ್ತೆ ದೂರು ದಾಖಲಿಸಿದ್ದಾಳೆ. ಅತ್ತ ಕಾರಿಯಪ್ಪ ಸಹ ಯುವತಿ ವಿರುದ್ದ ಕೌಂಟರ್ ಕಂಪ್ಲೈಂಟ್ ದಾಖಲಿಸಿದ್ದು, ಯುವತಿ ನಡೆತೆ ಸರಿ ಇಲ್ಲ. ನನ್ನ ಮನೆ ಬಳಿಬಂದು ಗಲಾಟೆ ಮಾಡಿ, ಪೋಷಕರಿಗೆ ಬೆದರಿಕೆ ಹಾಕ್ತಾಳೆ ಅಂತ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಸದ್ಯ ಇಬ್ಬರು ಒಬ್ಬರಿಗೋಬ್ಬರು ಆರೋಪ ಪ್ರತ್ಯಾರೋಪ ಮಾಡಿಕೊಳ್ಳುತ್ತಿದ್ದು, ಇಬ್ಬರ ಜಗಳ ಪೊಲೀಸ್ ಠಾಣೆ ಮೆಟ್ಟಿಲೆರಿದ್ದು, ಮುಂದೆ ಇಬ್ಬರ ಪ್ರೇಮ ಪುರಾಣ ಎಲ್ಲಿಗೆ ಹೋಗಿ ನಿಲ್ಲುತ್ತೆ ಕಾದು ನೋಡಬೇಕು.