ಮೊನ್ನೆಯ ದರದಲ್ಲೇ ಇಂದು ಕೂಡ ಚಿನ್ನದ ದರ ಮುಂದುವರಿದಿದ್ದು, ಇಂದು ಬೆಳ್ಳಿ ದರ ಕೂಡ ಸ್ಥಿರವಾಗಿದೆ. ಭಾರತದಲ್ಲಿ ಚಿನ್ನದ ಬೆಲೆಯಲ್ಲಿ ಏರಿಳಿತ ಕಾಣುವುದು ಸಹಜ. ಆದರೆ ಅಪರೂಪಕ್ಕೊಮ್ಮೆ ಸ್ಥಿರವಾಗಿರುವುದು ಚಿನ್ನದ ಖರೀದಿದಾರರಿಗೆ ಖುಷಿ ನೀಡುವುದು ಸುಳ್ಳಲ್ಲ.
22 ಕ್ಯಾರೆಟ್ ಚಿನ್ನದ ದರ
ಇಂದು 1 ಗ್ರಾಂ ಚಿನ್ನದ ಬೆಲೆ 5,820 ರೂ. ಇದೆ. 8 ಗ್ರಾಂ ಚಿನ್ನ ಖರೀದಿಸುವುದಾದರೆ ಇಂದು 46,650 ರೂ. ನೀಡಬೇಕು. ಇಂದಿನ 10 ಗ್ರಾಂ ಚಿನ್ನದ ಬೆಲೆ 58,200 ಆಗಿದ್ದರೆ, 100 ಗ್ರಾಂ ಚಿನ್ನದ ಬೆಲೆ 5,82,000 ರೂ. ಇದೆ.
24 ಕ್ಯಾರೆಟ್ ಚಿನ್ನದ ದರ
1 ಗ್ರಾಂ 24 ಕ್ಯಾರೆಟ್ ಚಿನ್ನಕ್ಕೆ ಇಂದು 6,349 ರೂ ಇದೆ. 8 ಗ್ರಾಂ ಚಿನ್ನಕ್ಕೆ ಇಂದು 50,792 ರೂ ನೀಡಬೇಕು. 10 ಗ್ರಾಂ ಚಿನ್ನ ಖರೀದಿಸುವುದಾದರೆ ಇಂದು 63,490 ರೂ. ಕೊಡಬೇಕು. 100 ಗ್ರಾಂ ಚಿನ್ನದ ದರ 6,34,900 ರೂ ಇದೆ.
ಕರ್ನಾಟಕದಲ್ಲಿ ಇಂದಿನ ಚಿನ್ನದ ದರ
ಬೆಂಗಳೂರು, ಮಂಗಳೂರು, ಮೈಸೂರು, ದಾವಣಗೆರೆ, ಬಳ್ಳಾರಿ ಸೇರಿದಂತೆ ರಾಜ್ಯದ ಪ್ರಮುಖ ನಗರಗಳಲ್ಲಿ ಇಂದು 22 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂ ಗೆ 58,200 ರೂ ಇದ್ದರೆ, 24 ಕ್ಯಾರೆಟ್ಗೆ 63,490 ರೂ. ಇದೆ. ಆದರೆ ಮಜೂರಿ, ಇತರೆ ಶುಲ್ಕ ಹಾಗೂ ಇತ್ಯಾದಿ ದರಗಳು ವಿವಿಧ ನಗರಗಳಲ್ಲಿ ವ್ಯತ್ಯಾಸವಿರಬಹುದು.