ರಾಮನಗರ:- ಎಣ್ಣೆ ವಿಚಾರಕ್ಕೆ ತಲೆ ಮೇಲೆ ಕಲ್ಲು ಹೊತ್ತು ಹಾಕಿ ನಿವೃತ್ತ ಎಎಸ್ಐ ಪುತ್ರನ ಕೊಲೆ ಮಾಡಿದ ಘಟನೆ ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಕಲ್ಕೆರೆ ದೊಡ್ಡಿ ಗ್ರಾಮದಲ್ಲಿ ಜರುಗಿದೆ.
ನಿವೃತ್ತ ಎಎಸ್ಐ ಮಗನಾಗಿರುವ ಬೆಂಗಳೂರು ಮೂಲದ ದೀಪಕ್ (23) ಎಂಬಾತನನ್ನು ತಲೆ ಮೇಲೆ ಕಲ್ಲು ಹಾಕಿ ಕೊಲೆ ಮಾಡಲಾಗಿದೆ. ಈ ಕೊಲೆಯನ್ನು ಮಾಡಿದ ಆರೋಪಿ ಪ್ರಸಾದ್ನನ್ನು ಪೊಲೀಸರು ಬಂಧಿಸಿದ್ದಾರೆ.
ದೀಪಕ್ ಬೆಂಗಳೂರಿನ ಕುಮಾರಸ್ವಾಮಿ ಲೇಔಟ್ನ ನಿವಾಸಿ. ಆತ ಕನಕಪುರ ತಾಲೂಕಿನ ಕಲ್ಕೆರೆ ದೊಡ್ಡಿ ಗ್ರಾಮಕ್ಕೆ ಹೋಗಿದ್ದ. ಅಲ್ಲಿ ಪ್ರಸಾದ್ನನ್ನು ಭೇಟಿಯಾಗಿದ್ದ. ಅವರಿಬ್ಬರು ಅಲ್ಲಿನ ಶೆಡ್ ಒಂದರಲ್ಲಿ ಎಣ್ಣೆ ಪಾರ್ಟಿ ಮಾಡಿದ್ದರು. ಈ ನಡುವೆ ಅವರ ಮಧ್ಯೆ ಜಗಳವಾಗಿದೆ ಎಂದು ಹೇಳಲಾಗಿದೆ. ಕುಡಿತದ ಮತ್ತಿನಲ್ಲಿ ರಾತ್ರಿ ಶೆಡ್ನಲ್ಲೇ ಮಲಗಿದ್ದ ದೀಪಕ್ನ ತಲೆ ಮೇಲೆ ಪ್ರಸಾದ್ ಕಲ್ಲು ಹೊತ್ತು ಹಾಕಿದ್ದಾನೆ. ಹೀಗಾಗಿ ದೀಪಕ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಕನಕಪುರ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಪ್ರಸಾದ್ನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ