ಮುದ್ದೇಬಿಹಾಳ:- ಮುದ್ದೇಬಿಹಾಳ ತಾಲೂಕು ರೂಢಗಿ ಬಸರಕೋಡ ಗ್ರಾಮದ ಮಧ್ಯೆ ಆಲಕೊಪ್ಪರ ಸಮೀಪ ಸೋಮವಾರ ಸಂಜೆ ಎರಡು ಬೈಕ್ಗಳ ನಡುವೆ ಡಿಕ್ಕಿ ಸಂಭವಿಸಿ ಓರ್ವ ಸ್ಥಳದಲ್ಲೇ ಸಾವನ್ನಪ್ಪಿದ್ದು ಮೂವರು ಗಾಯಗೊಂಡಿರುವ ಘಟನೆ ಜರುಗಿದೆ.
ಸೋಮಪ್ಪ ಮಾದರ (50) ಮೃತ ದುರ್ದೈವಿ. ಬೈಕ್ನಲ್ಲಿದ್ದ ಆಲಕೊಪ್ಪರದ ಚನ್ನಮ್ಮ ಪಾಟೀಲ (68), ಜಾವೇದ್ ಶೇಖ್ (30) ಗಂಭೀರ ಗಾಯಗೊಂಡಿದ್ದು ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ತುರ್ತು ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಜಿಲ್ಲಾಸ್ಪತ್ರೆಗೆ ಕಳಿಸಿಕೊಡಲಾಗಿದೆ.
ಇನ್ನೋರ್ವ ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಸ್ಥಳಕ್ಕೆ ಮುದ್ದೇಬಿಹಾಳ ಪಿಎಸೈ ಸಂಜಯ್ ತಿಪ್ಪರಡ್ಡಿ ಅವರು ಪೊಲೀಸರೊಂದಿಗೆ ಧಾವಿಸಿ ಕಾನೂನು ಕ್ರಮ ಕೈಕೊಂಡಿದ್ದಾರೆ.