ಬೆಂಗಳೂರು:- ಸಿದ್ದರಾಮಯ್ಯ ಎಲ್ಲವನ್ನೂ ಗೊತ್ತಿದ್ದೆ ಮಾಡ್ತಾರೆ ಮಾರ್ಖರಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ರಾಜ್ಯ ಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರಿಗೆ ರಾಜ್ಯ ಸಭೆ ಸಭಾಪತಿ ಪತ್ರ ಬರೆದಿದ್ದಾರೆ. ಆದರೆ ಅದನ್ನು ಅಧಿವೇಶನ ನಂತರ ಬರೆದಿದ್ದಾರೆ ಎಂದು ತಿರುಚುತ್ತಿದ್ದಾರೆ. ಸದನದಿಂದ ಕಾಂಗ್ರೆಸ್ ನವರು ಹೊರ ಹೋಗಬೇಕಿತ್ತು, ಹೋಗಿದ್ದಾರೆ ಎಂದರು.
ಚಳಿಗಾಲ ಅಧಿವೇಶನ ನಡೆದ ವೇಳೆಯಲ್ಲಿಯೇ ರಾಜ್ಯ ಸಭಾ ಸ್ಪೀಕರ್ ಜಗದೀಪ್ ಧನಕರ್ ಅವರು ಮಲ್ಲಿಕಾರ್ಜುನ ಖರ್ಗೆ ಅವರಿಗೆ ಪತ್ರ ಬರೆದಿದ್ದಾರೆ. ಅದರೂ ಸಹಿತ ಖರ್ಗೆ ಅವರು ಅಧಿವೇಶನ ನಂತರ ಪತ್ರ ಬರೆದಿದ್ದಾರೆ ಎಂದು ಆರೋಪಿಸಿದ್ದಾರೆ. ಸದನದಲ್ಲಿಯೇ ಧನಕರ್ ಅವರು ಖರ್ಗೆ ಅವರಿಗೆ ಮಾತುಕತೆಗೆ ಆಹ್ವಾನಿಸಿದ್ದರು ಎಂದು ಜೋಶಿ ತಿಳಿಸಿದರು. ಸದನದಿಂದ ಕಾಂಗ್ರೆಸ್ ನವರು ಅಮಾನತು ಆಗಿ ಹೊರಹೋಗಬೆಕಿತ್ತು. ಅದಕ್ಕಾಗಿ ಈ ರೀತಿ ಮಾಡಿದ್ದಾರೆ. ಪತ್ರಕ್ಕೆ ಉತ್ತರಿಸದ ಅವರು ಸಸ್ಪೆಂಡ್ ಆಗೋಕೆ ತೀರ್ಮಾನ ಮಾಡಿದ್ದರು. ಕಾಂಗ್ರೆಸ್ ಪಾರ್ಟಿಗೆ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಲ್ಲ ಎಂದು ಟೀಕಿಸಿದರು.
ವಿಜಯೇಂದ್ರ ಸಾರಥ್ಯದಲ್ಲಿ ಕೆಜೆಪಿ ಭಾಗ- 2: ಬಸನಗೌಡ ಯತ್ನಾಳ್ ನೀಡಿದ ಸುಳಿವೇನು? ಹಿಜಾಬ್ ಬಗ್ಗೆ ಸಿಎಂ ಹೇಳಿಕೆ ದುರುದ್ದೇಶ ಹೊಂದಿದೆ ಇನ್ನೂ ಒಂದು ವಿಷಯವನ್ನು ತಿರುಚುವುದರಲ್ಲಿ ಕಾಂಗ್ರೆಸ್ ಪಕ್ಷದವರು ನಿಸ್ಸೀಮರು. ಇಲ್ಲದ ಹಿಜಾಬ್ ನಿಷೇಧ ನಿರ್ಧಾರವನ್ನು ಹಿಂತೆಗೆಯುತ್ತೇನೆ ಎನ್ನುವುದು ಎಂತಹ ಮುಟ್ಟಾಳತನ. ಜನರ ಭಾವನೆ ಕೆರಳಿಸಿ ವೋಟ್ ಬ್ಯಾಂಕ್ ಅನ್ನು ಮಾಡಿಕೊಳ್ಳುವಂತಹ ಹುನ್ನಾರ ನಡೆಸಿದ್ದು, ಕಾಂಗ್ರೆಸ್ ದುರುದ್ದೇಶ ಹೊಂದಿದೆ. ತುಷ್ಟಿಕರಣದ ರಾಜಕಾರಣ ಮಾಡುತ್ತಿದೆ ಎಂದು ಅವರು ವಾಗ್ದಾಳಿ ನಡೆಸಿದರು. ಕಾಂಗ್ರೆಸ್ನ ಇಂತಹ ನಡವಳಿಕಯ ಪರಿಣಾಮವನ್ನು ತಿರುಗಿ ಎದುರಿಸಬೇಕಾಗುತ್ತದೆ. ಕಾಂಗ್ರೆಸ್ ಪಕ್ಷದವರು ಸಮಯಕ್ಕೆ ತಕ್ಕಂತೆ ಬದಲಾಗುತ್ತಾರೆ. ಮಧ್ಯಪ್ರದೇಶದಲ್ಲಿ ಹಿಂದೂ ಎಂದು ಹೇಳಿಕೊಂಡು ಜನಿವಾರ ಪ್ರದರ್ಶನ ಮಾಡುವುದು,ಇದು ರಾಹುಲ್ ಗಾಂಧಿಯವರ ಹೊಸ ಸ್ಟ್ಯಾಂಡರ್ಡ್. Cotton Theft: ‘ಬರ’ದ ಗಾಯದ ಮೇಲೆ ‘ರೈತ’ನಿಗೆ ಹತ್ತಿ ‘ಕಳ್ಳತನ ಬರೆ’ ಸಿದ್ದರಾಮಯ್ಯ ಮೂರ್ಖರಲ್ಲ ಹಿಜಾಬ್ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ನನ್ನ ಪ್ರಕಾರ ಸಿಎಂ ಸಿದ್ದರಾಮಯ್ಯ ಅವರಿಗೆ ಎಲ್ಲ ಗೊತ್ತಿದ್ದೇ ರೀತಿ ನಿಷೇಧ ನಿರ್ಧಾರ ಹಿಂಪಡೆಯುತ್ತೇವೆ ಎಂದೆಲ್ಲ ಹೇಳುತ್ತಿದ್ದಾರೆ. ಸಿದ್ದರಾಮಯ್ಯ ಇನ್ನೋಸೆಂಟ್ ಅಲ್ಲ, ಇಗ್ನೋರೆನ್ಸ್ ಅಲ್ಲ, ಮೂರ್ಖರಂತೂ ಮೊದಲೇ ಅಲ್ಲಾ ಎಂದು ಟಾಂಗ್ ನೀಡಿದರು