ದಾವಣಗೆರೆ : ರೈತರ ಬಗ್ಗೆ ಸಚಿವ ಶಿವಾನಂದ್ ಪಾಟೀಲ್ (Shivanand Patil) ಉಡಾಫೆ ಹೇಳಿಕೆಗೆ ಸಚಿವ ಸ್ಥಾನದಿಂದ ಶಿವಾನಂದ ಪಾಟೀಲ್ ವಜಾ ಮಾಡಬೇಕೆಂದು ಮಾಜಿ ಸಚಿವ ಎಂ ಪಿ ರೇಣುಕಾಚಾರ್ಯ ಒತ್ತಾಯ ಮಾಡಿದ್ದಾರೆ
ನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ರೈತರ ಪರಿಹಾರ ಕೊಡುತ್ತಾರೆ ನೀವು ನಿಮ್ಮ ಕುಟುಂಬದರು ಆತ್ಮಹತ್ಯೆ ಮಾಡಿಕೊಳ್ಳಿ. 2ಲಕ್ಷ 5 ಲಕ್ಷ ಪರಿಹಾರಕ್ಕಾಗಿ ಯಾರಾದರೂ ಆತ್ಮಹತ್ಯೆ ಮಾಡಿಕೊಳ್ಳುತ್ತಾರಾ..? ಸಾಲ ಮನ್ನಾ ಮಾಡಲಿ ಅಂತ ಯಾರಾದ್ರು ಆತ್ಮಹತ್ಯೆ ಮಾಡಿಕೊಳ್ತಾರಾ..? ಎಂದು ಪ್ರಶ್ನೆ ಮಾಡಿದರು.
ಹಿಂದೆ ಸಚಿವರಾಗಿದ್ದಾಗಲೂ ಶಿವಾನಂದ ಪಾಟೀಲ್ ಇಂತಹ ಹೇಳಿಕೆಯನ್ನ ನೀಡಿದ್ದರು ಜವಾಬ್ದಾರಿ ಸ್ಥಾನದಲ್ಲಿದ್ದವರು ಇಂತಹ ಹೇಳಿಕೆ ನೀಡುವುದು ಖಂಡನೀಯ ಅವರು ಎರಡನೇ ಬಾರಿ ಹೀಗೆ ರೈತರಿಗೆ ಅವಮಾನ ಮಾಡಿದ್ದಾರೆ. ಇದು ದಪ್ಪ ತೊಗಲಿನ ಚರ್ಮದ ಸರಕಾರ, ಇದು ದುರಹಂಕಾರಿ ಸರ್ಕಾರ ದುರಹಂಕಾರಿ ಮಂತ್ರಿಗಳಿದ್ದಾರೆ.
ರಾಜ್ಯದಲ್ಲಿ ಮೊಹಮ್ಮಬಿನ್ ತುಘಲಕ್, ಟಿಪ್ಪುವಿನ ಆಡಳಿತ ನಡೆಯುತ್ತಿದೆ ಸರ್ಕಾರದ ಯಾವುದೇ ಭರವಸೆಗಳು ಇದುವರೆಗೂ ಈಡೇರಿಲ್ಲ ಮೌಲ್ವಿಗಳಿಗೆ 10 ಸಾವಿರ ಕೋಟಿ ಕೊಡುತ್ತೇವೆ ಅಂತ ಹೇಳುತ್ತೀರಿ ಇಂತಹ ಸಚಿವರನ್ನ ಇಟ್ಟುಕೊಂಡರೆ ಸಿಎಂಗೆ ಅಪಮಾನ ನೀವು ಅದೇ ರೀತಿ ಮಾತಾಡುತ್ತೀರಿ, ಸಚಿವರು ಅದೇ ರೀತಿ ಮಾತಾಡುತ್ತಾರೆ ಕೆಣಕಿ ಹಿಜಾಬ್ ವಿಚಾರವನ್ನ ಎಳೆದು ತಂದಿದ್ದೀರಿ ಇಂತಹ ಸಚಿವರಾದ ಜಮೀರ್ ಹಾಗೂ ಶಿವಾನಂದ ಪಾಟೀಲ್ ರನ್ನ ವಜಾ ಮಾಡಬೇಕು ಎಂದು ಮಾಜಿ ಸಚಿವ ರೇಣುಕಾಚಾರ್ಯ ಒತ್ತಾಯ ಮಾಡಿದ್ದಾರೆ