ವಿಜಯನಗರ : ಕ್ರಿಸ್ಮಸ್ ಹಬ್ಬದ ನಿಮಿತ್ತ ನಗರದಲ್ಲಿ ಸೋಮವಾರ ಕ್ರೈಸ್ತ ಬಾಂಧವರು ಅದ್ಧೂರಿಯಾಗಿ ಹಬ್ಬವನ್ನು ಆಚರಿಸಿದರು. ಬೆಳಿಗ್ಗೆ, ಸ್ಥಾನ ಮಾಡಿ ಹೊಸ ಬಟ್ಟೆಗಳನ್ನು ಧರಿಸಿದ ನಂತರ, ಅವರು ತಮ್ಮ ಹತ್ತಿರದ ಚರ್ಚ್ಗಳಿಗೆ ತೆರಳಿ ಪ್ರಾರ್ಥನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಫೆಲ್ಲೋ ಷಿಪ್ ಚರ್ಚ್ ಫಾದರ್ ಸೌಂದರ್ ರಾಜ್ ಮಾತನಾಡಿ, ಜನರ ಪಾಪಗಳನ್ನು ತೊಳೆಯಲು ಪ್ರಭು ಯೇಸು ಈ ನೆಲದಲ್ಲಿ ತನ್ನ ರಕ್ತವನ್ನು ಸುರಿಸಿದನು ಎಂದರು
ಏಸುವಿನ ತತ್ವ ಸಿದ್ದಂತಾಗಳನ್ನು ಪ್ರತಿಯೊಬ್ಬರು ಪಾಲಿಸಬೇಕು ಎಂದರು.
ನಂತರ ಏಸು ಪ್ರಭು ಮೇಲಿನ ಹಾಡುಗಳನ್ನು ಹಾಡಿದರು. ಚರ್ಚ್ಗಳಲ್ಲಿ ನಡೆದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಭಕ್ತರ ಮನಸೂರೆಗೊಂಡವು