ಬೆಂಗಳೂರು: ಕ್ರಿಕೆಟಿಗ ಕೆ.ಸಿ ಕಾರಿಯಪ್ಪ (KC Cariappa) ವಿರುದ್ಧ ಯುವತಿಯೊಬ್ಬರು ವಂಚನೆ ಪ್ರಕರಣ ದಾಖಲಿಸಿದ್ದಾರೆ. ಮದುವೆಯಾಗುವುದಾಗಿ ಹೇಳಿ ದೈಹಿಕ ಸಂಪರ್ಕ ಬೆಳೆಸಿ ವಂಚಿಸಿದ್ದಾನೆ ಎಂದು ಯುವತಿ (Young Woman) ನೀಡಿದ ದೂರಿನಲ್ಲಿ ಗಂಭೀರ ಆರೋಪ ಮಾಡಿದ್ದಾರೆ.
ದೂರಿನಲ್ಲಿ ಏನಿದೆ..?: ನಾನು ಮತ್ತು ಕೆ.ಸಿ ಕಾರಿಯಪ್ಪ ಇನ್ಸ್ಟಾದಲ್ಲಿ ಪರಿಚಯವಾಗಿದ್ದು, ಒಂದೇ ಕಮ್ಯೂನಿಟಿ ಹಾಗೂ ಒಂದೇ ಊರಿನವರಾಗಿದ್ದೇವೆ. ಆರಂಭದಲ್ಲಿ ನನಗೆ ಲವರ್ ಇರುವ ಬಗ್ಗೆ ಹೇಳಿದ್ದೆ. ಹೀಗಾಗಿ ಫ್ರೆಂಡ್ ಆಗಿ ಇರುವ ಬಗ್ಗೆ ಮಾತನಾಡಿದೆವು. ಅದಾದ ಬಳಿಕ ನಮ್ಮ ಮನೆಯವರಿಗೆ ಪರಿಚಯ ಮಾಡಲಾಗಿತ್ತು. ನನಗೆ ಮೊದಲ ಲವ್ವರ್ ಗಿಂತ ನಿವೇ ಇಷ್ಟ ಅಂತ ನಂಬಿಸಿ ನನ್ನನ್ನು ದೈಹಿಕವಾಗಿ ಬಳಸಿಕೊಂಡರು. ಹೀಗಾಗಿ ನಾನು ಪ್ರಗ್ನೆಂಟ್ ಆಗಿದ್ದೆ. ಅದನ್ನ ಅಬಾರ್ಷನ್ ಮಾಡಿಸಿಕೊಳ್ಳುವಂತೆ ಹೇಳಿದ್ದ. ಆದರೆ ಅದಕ್ಕೆ ನಾನು ಒಪ್ಪಿಕೊಳ್ಳಲಿಲ್ಲ. ಆದರೂ ಐಪಿಎಲ್ ಇದೆ, ನಂತರ ಮದುವೆ ಆಗೋಣ ಅಂತ ಹೇಳಿ ಅಬಾರ್ಷನ್ ಮಾಡಿಸಿದ ಎಂದು ಆರೋಪಿಸಿದ್ದಾರೆ
ಒಮ್ಮೆ ಅವರ ಮನೆಯವರ ಭೇಟಿ ಮಾಡಿಸಿ ಬಂದ ಬಳಿಕ ನನಗೆ ಕಾರಿನಲ್ಲಿ ಮಾತ್ರೆ ಕೊಟ್ಟಿದ್ದ. ಒತ್ತಾಯಪೂರ್ವಕವಾಗಿ ನನಗೆ ಮಾತ್ರೆ ಕೊಡಿಸಿದ್ದ. ಮಾತ್ರೆ ಕೊಟ್ಟ ಒಂದು ವಾರದಲ್ಲಿ ಬ್ಲೀಡಿಂಗ್ ಆಗಿದೆ. ಅದನ್ನ ಪ್ರಶ್ನೆ ಮಾಡಿದಾಗ ಡಾಕ್ಟರ್, ಒಂದು ಮಾತ್ರೆಯಿಂದ ಏನೂ ಆಗಲ್ಲ ಅಂತ ನನಗೆ ಹೇಳಿದರು. ನೀನು ವೀಕ್ ಇದ್ದೀಯಾ ಅನ್ನಿಸುತ್ತೆ ಒಂದು ಕೆಟ್ಟ ಕನಸು ಅಂತ ಮರೆತುಬಿಡು ನಾನು ಜವಾಬ್ದಾರನಾಗಿರುತ್ತೇನೆ ಎಂದು ಕಾರಿಯಪ್ಪ ಹೇಳಿದ್ದರು ಅಂತಾ ಯುವತಿ ಗಂಭೀರ ಆರೋಪ ಮಾಡಿದ್ದಾರೆ. ಒಮ್ಮೆ ಹಳೆ ಲವರ್ ಕಾಲ್ ಮಾಡಿದ್ದರು. ಆಗ ನನಗೆ ಮೋಸ ಮಾಡಿರೋ ಬಗ್ಗೆ ಹೇಳಿದರು. ಅದ್ದರಿಂದ ನನಗೆ ವಿಚಾರ ಗೊತ್ತಾಯ್ತು. ನನ್ನ ಮೇಲೆ ಡ್ರಗ್ಸ್ ತೆಗೆದುಕೊಳ್ಳುವ ಆರೋಪ ಕೂಡ ಮಾಡಿದ್ದರು ಎಂದಿದ್ದಾರೆ
ಆರ್ ಆರ್ ನಗರ ಕ್ಯಾಂಪ್ಗೆ ಹೋದ ಬಳಿಕ ನನ್ನನ್ನು ತಿರಸ್ಕರಿಸಲು ಪ್ರಯತ್ನಪಟ್ಟರು. ಹಾಗಾಗಿ ನಾನು ಕೇಸ್ ಕೊಡ್ತೀನಿ ಅಂತ ಹೇಳಿದ್ದೆ. ಅಂತೆಯೇ ಬಗಲಗುಂಟೆ ಪೊಲೀಸ್ ಠಾಣೆಯಲ್ಲಿ (Bagalgunte Police Station) ದೂರು ಕೊಟ್ಟೆ. ಆ ಬಳಿಕ ನೀನು ಆತುರಪಡಬೇಡ ನಾನು ಮದುವೆ ಆಗುತ್ತೇನೆ ಅಂತ ಹೇಳಿದ. ಅವರ ಪೋಷಕರನ್ನ ಕರೆದುಕೊಂಡು ಬಂದು ಮದುವೆ ಬಗ್ಗೆ ಮಾತನಾಡಿಸಿದ್ರು. ಅವರ ಪೋಷಕರು ಮದುವೆ ನೀವೇ ಮಾಡುವಂತೆ ಡಿಮಾಂಡ್ ಮಾಡಿದ್ರು. ಅದರಂತೆ ಒಪ್ಪಿಕೊಂಡು ಮದುವೆಗೆ ಮುಂದಾದಿದ್ವಿ ಎಂದಿದ್ದಾರೆ.
ಮಾಡ್ಲಿಂಗ್ ಮಾಡುವ ವಿಚಾರದ ಬಗ್ಗೆ ಡಾಮಿನೇಟ್ ಮಾಡ್ತಾ ಇದ್ದ. ಒಮ್ಮೆ ಎರಡು ಟೂರ್ನಮೆಂಟ್ ಮಿಸಸ್ ಕಾರ್ಯಪ್ಪ ಅಂತ ಬರೆಸಿ ನನ್ನ ಬೇರೆ ಬೇರೆ ರಾಜ್ಯಕ್ಕೆ ಕರೆದುಕೊಂಡು ಹೋಗಿದ್ದಾನೆ. 22 ಡಿಸೆಂಬರ್ ನಲ್ಲಿ ಮನೆಗೆ ಹೋಗಿದ್ದೆ. ನಾನು ಐಪಿಎಲ್ನಲ್ಲಿ ಅನ್ ಸೋಲ್ಡ್ ಆಗಿದ್ದೀನಿ ಬೇಜಾರ್ನಲ್ಲಿ ಇದ್ದೀನಿ ಅಂತ ಕಳಿಸಿಕೊಟ್ಟ. ನನಗೆ ಟಾರ್ಚರ್ ಮಾಡಬೇಡ ಎಂದು ಬೆದರಿಸಿ ಕಳಿಸಿಕೊಟ್ಟ. ಮನೆಗೆ ಹೋಗಿ ಕೂತಿದ್ರು ನನಗೆ ರೆಸ್ಪಾನ್ಸ್ ಮಾಡಿಲ್ಲ. ಹಾಗಾಗಿ ಒಂದು ಇನ್ಸ್ಟಾ ಮಾರ್ಟ್ ನಲ್ಲಿ ನನ್ನ ಕೈಕಟ್ ಮಾಡಿಕೊಳ್ಳುವುದಕ್ಕೆ ಚಾಕು ತರಿಸಿದ್ದೆ. ಅದನ್ನ ಪೊಲೀಸರಿಗೆ ಹೇಳಿ ದೂರು ಕೊಟ್ಟಿದ್ದಾನೆ. ಬಗಲಗುಂಟೆ ಠಾಣೆಯಲ್ಲಿ ಬೆದರಿಕೆ ಹಾಕುತ್ತಿದ್ದಾಳೆಂದು ದೂರು ಕೊಟ್ಟಿದ್ದಾನೆ ಎಂದು ಯುವತಿ ತಿಳಿಸಿದ್ದಾರೆ.
ಕೆ.ಸಿ ಕಾರ್ಯಪ್ಪ ಕೂಡ ವೀಡ್ ತೆಗೆದುಕೊಳ್ತಾನೆ. ಮನೆಯಲ್ಲಿ ಡ್ರಗ್ಸ್ ಮಾಡುತ್ತಾರೆ. ನಾನು ಪಾರ್ಟಿಗೆ ಹೋದಾಗ ಬಿಯರ್ ಕುಡಿತೀನಿ, ಅದನ್ನ ಬಿಟ್ಟು ಡ್ರಗ್ಸ್ ತೆಗೆದುಕೊಳ್ಳಲ್ಲ. ನಾನು ಮೆಡಿಕಲ್ ಟೆಸ್ಟ್ ಗೆ ರೆಡಿ ಇದ್ದೇನೆ ಎಂದು ಯುವತಿ ತಿಳಿಸಿದ್ದಾರೆ. ಮುಸ್ಲಿಂ ಬಾಯ್ ಅನ್ನು ಮದುವೆ ಆಗಿದ್ದೆ, ಆದರೆ ನನಗೆ ಡಿವೋರ್ಸ್ ಆಯ್ತು. ಕಾರಣ ನನಗೆ ಕನ್ವರ್ಟ್ ಆಗೋದಕ್ಕೆ ಒತ್ತಾಯ ಮಾಡಿದ್ದರು, ನಾನು ಅದಕ್ಕೆ ನಿರಾಕರಿಸಿದ್ದೆ. ಬಳಿಕ ನನಗೆ ನನ್ನ ಮೊದಲ ಮದುವೆ ಕಾನೂನಿನ ಪ್ರಕಾರ ಡಿವೋರ್ಸ್ ಆಯ್ತು. ಹೀಗೆಲ್ಲ ಆಗಿದೆ ನಾನು ನೋಡಿಕೊಳ್ತೀನಿ ಅಂದಿದ್ದ. ಹಳೆ ಲವರ್ ಸಿಕ್ಕಾಪಟ್ಟೆ ಆರೋಪ ಮಾಡಿದ್ದರು. ಕಾರಿಯಪ್ಪ ಅವರ ದೊಡ್ಡ ಮಟ್ಟದಲ್ಲಿ ಲೋನ್ಸ್ ಇದೆ. ಫೋನ್ ಪಿಕ್ ಮಾಡಲ್ಲ ಅವನು ಅಂತೆಲ್ಲ ಅವರು ಹೇಳಿದ್ದರು ಎಂದಿದ್ದಾರೆ.