ಬಿಗ್ ಬಾಸ್ ಮನೆಯಲ್ಲಿ (Bigg Boss Kannada 10) ಸದಾ ಬೇರೇ ಅವರ ತಪ್ಪನ್ನು ಹುಡುಕುತ್ತಾ ಗುಡುಗೋ ವಿನಯ್ಗೆ ಡ್ರೋನ್ ಪ್ರತಾಪ್ ಪ್ರಶ್ನಿಸಿದ್ದಾರೆ. ಲಕ್ಷುರಿ ಬಜೆಟ್ ಮಿಸ್ಟೇಕ್ ಮಾಡಿ ಇಡೀ ಮನೆಗೆ ನಷ್ಟವಾಗುವಂತೆ ಮಾಡಿದ್ದಕ್ಕೆ ವಿನಯ್ (Vinay Gowda) ಅವರ ಬಳಿ ಪ್ರಶ್ನೆ ಮಾಡುವ ಗುಂಡಿಗೆ ಡ್ರೋನ್ ಪ್ರತಾಪ್ (Drone Prathap) ತೋರಿಸಿದ್ದಾರೆ.
ವಾರವಿಡೀ ಕಷ್ಟಪಟ್ಟು ಆಡಿದ್ದರೂ, ಲಕ್ಷುರಿ ಬಜೆಟ್ ಖರೀದಿ ವೇಳೆ ಸ್ಪರ್ಧಿಗಳು ಮಾಡಿಕೊಳ್ಳುತ್ತಿರುವ ಸಣ್ಣ-ಪುಟ್ಟ ಎಡವಟ್ಟುಗಳಿಂದಾಗಿ ಲಕ್ಷುರಿ ಬಜೆಟ್ ಮಿಸ್ ಆಗುತ್ತಿದೆ. ಈ ಬಾರಿ ಇನ್ನೇನು ಲಕ್ಷುರಿ ಬಜೆಟ್ ಕೈಗೆ ಸಿಕ್ತು. ಚಿಕನ್ ಬಂದೇಬಿಡ್ತು ಎಂಬ ಖುಷಿಯಲ್ಲಿ ಇರುವಾಗಲೇ ಮತ್ತೆ ಶಾಕ್ ಎದುರಾಗಿದೆ. ವಿನಯ್ ಮಾಡಿದ ತಪ್ಪಿನಿಂದ ನಿಯಮ ಉಲ್ಲಂಘನೆ ಆಗಿದ್ರಿಂದಾಗಿ ಲಕ್ಷುರಿ ಬಜೆಟ್ನ `ಬಿಗ್ ಬಾಸ್’ ವಾಪಸ್ ಪಡೆದಿದ್ದಾರೆ
ಈ ವಾರ ಲಕ್ಷುರಿ ಬಜೆಟ್ ಗಳಿಸಲು ಸ್ಪರ್ಧಿಗಳಿಗೆ 10 ಸಾವಿರ ಪಾಯಿಂಟ್ಗಳನ್ನು ಬಿಗ್ ಬಾಸ್ ನೀಡಿದ್ದರು. ಅದನ್ನ ಬಳಸಿಕೊಂಡು ಖರೀದಿ ಮಾಡುವ ವೇಳೆ, ಬಝರ್ ಆಗೋಕೂ ಮುನ್ನವೇ ಸ್ಟಾರ್ಟ್ ಮಾಡ್ತಾ ಇದ್ದೀನಿ ಈಗ ಅಂತ್ಹೇಳಿ ಟಿವಿ ರಿಮೋಟ್ ಪ್ರೆಸ್ ಮಾಡಿ ಲಕ್ಷುರಿ ಐಟಮ್ಸ್ ಲಿಸ್ಟ್ ಇರುವ ಸ್ಲೈಡ್ ಆನ್ ಮಾಡಿದರು ವಿನಯ್.
ಲಕ್ಷುರಿ ವಸ್ತುಗಳನ್ನು ಪಡೆಯುವ ತರಾತುರಿಯಲ್ಲಿ ಚಟುವಟಿಕೆಯ ಮೂಲ ನಿಯಮವಾದ ಬಝರ್ ಅನ್ನು ಮನೆ ಮರೆತು, ಬಝರ್ ಆಗುವ ಮುನ್ನವೇ, ಟಿವಿಯಲ್ಲಿ ಸ್ಲೈಡ್ ಆನ್ ಮಾಡಿದ ಕಾರಣ ಈ ವಾರವೂ ಮನೆ ಲಕ್ಷುರಿ ಬಜೆಟ್ ಅನ್ನು ಮರೆಯಬೇಕು ಎಂದು ಬಿಗ್ ಬಾಸ್ (Bigg Boss) ಘೋಷಿಸಿದ್ದರು. ಈ ತಪ್ಪು ನಡೆದಿದ್ದೇ ವಿನಯ್ ಕಡೆಯಿಂದ ಹಾಗಾಗಿ ಪ್ರತಾಪ್ ಖಡಕ್ ಆಗಿಯೇ ಪ್ರಶ್ನೆ ಕೇಳಿದ್ದಾರೆ.