ಯುವ ಆಟಗಾರರಿಗೆ ಸ್ಫೂರ್ತಿಯ ಚಿಲುಮೆ ಆಗಿದ್ದಾರೆ ಎಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ಫಾಫ್ ಡುಪ್ಲೆಸಿಸ್ ಮುಕ್ತ ಕಂಠದಿಂದ ಗುಣಗಾನ ಮಾಡಿದ್ದಾರೆ. ಆದರೆ ವಿರಾಟ್ ಶೀಘ್ರವೇ ಒಂದು ಸ್ವರೂಪದ ಕ್ರಿಕೆಟ್ ಗೆ ವಿದಾಯ ಹೇಳಲಿದ್ದಾರೆ ಎಂದು ಭವಿಷ್ಯ ನುಡಿದಿದ್ದಾರೆ.
2023ರ ಏಕದಿನ ವಿಶ್ವಕಪ್ ಟೂರ್ನಿಯ ನಂತರ ಡಿಸೆಂಬರ್ 26 ರಂದು ದಕ್ಷಿಣ ಆಫ್ರಿಕಾ ವಿರುದ್ಧ ನಡೆಯಲಿರುವ ಬಾಕ್ಸಿಂಗ್ ಡೇ ಟೆಸ್ಟ್ ಮೂಲಕ ರೋಹಿತ್ ಶರ್ಮಾ ನಾಯಕತ್ವದಡಿ ವಿರಾಟ್ ಕೊಹ್ಲಿ ಸ್ಪರ್ಧಾಸ್ಪರ್ಧಾತ್ಮಕ ಕ್ರಿಕೆಟ್ ಗೆ ಮರಳಲಿದ್ದು, ಹರಿಣಿಗಳ ನಾಡಿನಲ್ಲಿ ಚೊಚ್ಚಲ ಟೆಸ್ಟ್ ಸರಣಿ ಗೆಲ್ಲುವ ಹುಮ್ಮಸ್ಸಿನಲ್ಲಿದ್ದಾರೆ.
2023ರ ಏಕದಿನ ವಿಶ್ವಕಪ್ ಟೂರ್ನಿಗೂ ಮುನ್ನ ವಿರಾಟ್ ಕೊಹ್ಲಿ ಟೂರ್ನಿಯಲ್ಲಿ ಟಾಪ್ ರನ್ ಸ್ಕೋರರ್ ಆಗಲಿ ಎಂದು ಬಯಸುತ್ತೀರಾ ಎಂದು ಫಾಫ್ ಡುಪ್ಲೆಸಿಸ್ ಅವರನ್ನು ಸಂದರ್ಶನ ಒಂದರಲ್ಲಿ ಪ್ರಶ್ನಿಸಲಾಗಿತ್ತು.
“ಹೌದು ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ವಿರಾಟ್ ಕೊಹ್ಲಿ ತಮ್ಮ ಬ್ಯಾಟಿಂಗ್ ಪ್ರದರ್ಶನದಿಂದ ಯಾವ ರೀತಿ ವ್ಯವಹರಿಸುತ್ತಾರೆ ಎಂದು ನೋಡಲು ಕಾತರನಾಗಿದ್ದೇನೆ. ವಿಶ್ವಕಪ್ ಟೂರ್ನಿಯ ಆರಂಭಕ್ಕೂ ಮುನ್ನ ಸ್ಟುಡಿಯೋದ ಒಂದು ಕಾರ್ಯಕ್ರಮದಲ್ಲಿ ಈ ಬಾರಿಯ ವಿಶ್ವಕಪ್ ಟೂರ್ನಿಯಲ್ಲಿ ಅತ್ಯಂತ ಸಮೃದ್ಧ ಬ್ಯಾಟ್ಸ್ ಮನ್ ಯಾರಾಗುತ್ತಾರೆ ಎಂದು ಕೇಳಿದ್ದ ಪ್ರಶ್ನೆ ಈಗಲೂ ನನಗೆ ನೆನಪಿದೆ. ಆದರೆ ನನಗೆ ವಿರಾಟ್ ಹೆಚ್ಚು ರನ್ ಗಳಿಸುತ್ತಾರೆ ಎಂಬ ನಂಬಿಕೆ ಇತ್ತು. ವಿಶ್ವಕಪ್ ನಂತಹ ದೊಡ್ಡ ಟೂರ್ನಿಯಲ್ಲಿ ಅತನ ಬ್ಯಾಟಿಂಗ್ ಪ್ರದರ್ಶನ ಉತ್ತುಂಗದಲ್ಲಿ ಇದ್ದು ಸಾಕಷ್ಟು ರನ್ ಗಳು ಹರಿದು ಬರುತ್ತವೆ,” ಎಂದು ಆರ್ ಸಿಬಿ ನಾಯಕ ಹೇಳಿದ್ದಾರೆ.