2023ರಲ್ಲಿ ಐಸಿಸಿ ಆಯೋಜನೆಯ ಏಕದಿನ ವಿಶ್ವಕಪ್ ಟೂರ್ನಿ ಜಯಿಸಬೇಕೆಂದು ಪಣತೊಟ್ಟಿದ್ದ ವಿಶ್ವದ ಬಹುತೇಕ ತಂಡಗಳು ಒಡಿಐ ದ್ವಿಪಕ್ಷೀಯ ಸರಣಿಗಳನ್ನೇ ಹೆಚ್ಚಾಗಿ ಆಯೋಜಿಸಿತ್ತು. ಈ ವರ್ಷ ಒಂದೇ ಇನಿಂಗ್ಸ್ ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಅಗ್ರ ಬ್ಯಾಟ್ಸ್ ಮನ್ ಆಗಿ ಗುರುತಿಸಿಕೊಂಡಿದ್ದಾರೆ. ಈ ಪಟ್ಟಿಯಲ್ಲಿರುವ ಟಾಪ್ 10 ಆಟಗಾರರ ಬಗ್ಗೆ ಇಲ್ಲಿ ವಿವರಿಸಲಾಗಿದೆ.
ಏಡೆನ್ ಮಾರ್ಕ್ರಮ್ (ದಕ್ಷಿಣ ಆಫ್ರಿಕಾ)
ಹರಿಣಿಗಳ ನಾಡಿನ ನಾಯಕ ಏಡೆನ್ ಮಾರ್ಕ್ರಮ್ ಈ ಪಟ್ಟಿಯಲ್ಲಿ 6ನೇ ಸ್ಥಾನ ಅಲಂಕರಿಸಿದ್ದಾರೆ. ಏಪ್ರಿಲ್ 2ರಂದು ಜೋಹಾನ್ಸ್ಬರ್ಗ್ ಪಿಚ್ನಲ್ಲಿ ನೆದರ್ಲೆಂಡ್ ವಿರುದ್ಧ ನಡೆದಿದ್ದ ಪಂದ್ಯದಲ್ಲಿ 126 ಎಸೆತಗಳಲ್ಲಿ 17 ಬೌಂಡರಿ ಹಾಗೂ 7 ಸಿಕ್ಸರ್ ಸಿಡಿಸಿ 175 ರನ್ ಗಳಿಸಿದ್ದರು.
ಮಿಚೆಲ್ ಮಾರ್ಷ್ (ಆಸ್ಟ್ರೇಲಿಯಾ)
2023ರ ಏಕದಿನ ವಿಶ್ವಕಪ್ ವಿಜೇತ , ಆಸ್ಟ್ರೇಲಿಯಾದ ಬ್ಯಾಟಿಂಗ್ ಆಲ್ ರೌಂಡರ್ ಮಿಚೆಲ್ ಮಾರ್ಷ್, ಬಾಂಗ್ಲಾದೇಶ ವಿರುದ್ಧ ನಡೆದ ವಿಶ್ವಕಪ್ ಪಂದ್ಯದಲ್ಲಿ 134.09 ಸ್ಟ್ರೆಕ್ ರೇಟ್ ನಲ್ಲಿ 17 ಬೌಂಡರಿ ಹಾಗೂ 9 ಸಿಕ್ಸರ್ ನೆರವಿನಿಂದ 177* ರನ್ ಗಳಿಸಿ ಟಾಪ್ 5ರಲ್ಲಿ ಗುರುತಿಸಿಕೊಂಡಿದ್ದಾರೆ
ಫಖರ್ ಝಮಾನ್ (ಪಾಕಿಸ್ತಾನ)
2023ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ನ್ಯೂಜಿಲೆಂಡ್ ವಿರುದ್ಧ ಪಂದ್ಯದಲ್ಲಿ ಸ್ಫೋಟಕ ಬ್ಯಾಟಿಂಗ್ ನಡೆಸಿ ಶತಕ (126* ರನ್) ಬಾರಿಸಿದ ಪಾಕಿಸ್ತಾನದ ಮಾಜಿ ನಾಯಕ ಫಖರ್ ಝಮಾನ್ ನಂಬಲಾಗದ ಗೆಲುವು ತಂದುಕೊಟ್ಟಿದ್ದರು.
ಬೆನ್ ಸ್ಟೋಕ್ಸ್ (ಇಂಗ್ಲೆಂಡ್)
ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಬೆನ್ ಸ್ಟೋಕ್ಸ್ ಅವರ ಬ್ಯಾಟ್ ಹೆಚ್ಚಾಗಿ ಘರ್ಜಿಸದಿದ್ದರೂ, 13 ಸೆಪ್ಟೆಂಬರ್ ಓವಲ್ನಲ್ಲಿ ನ್ಯೂಜಿಲೆಂಡ್ ವಿರುದ್ಧ ನಡೆದ ಪಂದ್ಯದಲ್ಲಿ ಸ್ಫೋಟಕ ಇನಿಂಗ್ಸ್ ಕಟ್ಟಿದ್ದ ಸ್ಟೋಕ್ಸ್ 15 ಬೌಂಡರಿ ಹಾಗೂ 9 ಸಿಕ್ಸರ್ ಸಹಿತ 182 ರನ್ ಚಚ್ಚಿದ್ದರು.
ಗ್ಲೆನ್ ಮ್ಯಾಕ್ಸ್ ವೆಲ್ (ಆಸ್ಟ್ರೇಲಿಯಾ)
2023ರ ಏಕದಿನ ವಿಶ್ವಕಪ್ ಗೆಲ್ಲಲು ಆಸ್ಟ್ರೇಲಿಯಾಕ್ಕೆ ಬಲವಾಗಿದ್ದ ಸ್ಟಾರ್ ಆಲ್ ರೌಂಡರ್ ಗ್ಲೆನ್ ಮ್ಯಾಕ್ಸ್ ವೆಲ್, ವಿಶ್ವಕಪ್ ಟೂರ್ನಿಯಲ್ಲಿ ಅಫಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ 21 ಬೌಂಡರಿ ಹಾಗೂ 10 ಸಿಕ್ಸರ್ ಗಳ ಸಹಿತ 128 ಎಸೆತಗಳಲ್ಲಿ ಅಜೇಯ 201 ರನ್ ಗಳಿಸಿ 2ನೇ ಸ್ಥಾನ ಪಡೆದಿದ್ದಾರೆ.
ಶುಭಮನ್ ಗಿಲ್ (ಭಾರತ)
ಮುತ್ತಿನ ನಗರಿಯಲ್ಲಿ ಜನವರಿ 18 ರಂದು ನ್ಯೂಜಿಲೆಂಡ್ ವಿರುದ್ಧ ನಡೆದ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾದ ಯಂಗ್ ಓಪನರ್ ಶುಭಮನ್ ಗಿಲ್, 149 ಎಸೆತಗಳಿಂದ 208 ರನ್ ಗಳಿಸಿ ತಮ್ಮ ಚೊಚ್ಚಲ ದ್ವಿಶತಕ ಸಿಡಿಸಿದ್ದರು.