ಬಾಗಲಕೋಟೆ: ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಬನಹಟ್ಟಿ ಮಂಗಳವಾರ ಪೇಟೆಯಲ್ಲಿರುವ ಶ್ರೀ ಗುರು ವೀರಭದ್ರೇಶ್ವರ ಸ್ವಾಮಿಯ 93 ನೇ ವರ್ಷದ ಕಾರ್ತಿಕೋತ್ಸವವು ಇದೇ ಬರುವ 27 ಡಿಸೆಂಬರ್ 2023 ರಂದು ಬುಧವಾರ ದಿವಸ ಅದ್ದೂರಿಯಾಗಿ ನಡೆಯಲಿದೆ.
ಅಂದು ಬೆಳ್ಳಗಿನ ಜಾವ ಬನಹಟ್ಟಿಯ ಹಿರೇಮಠದ ಶ್ರೀ ಗಳಿಂದ ಸಕಲ ವಿಧಿ ವಿಧಾನಗಳೊಂದಿಗೆ ಶ್ರೀ ವೀರಭದ್ರ ಸ್ವಾಮಿಗೆ ರುದ್ರಾಭಿಕ್ಷಕ ಬುತ್ತಿ ಪೂಜೆ,ಅಗ್ನಿ ಪುಟ್ಟ ಪ್ರಾರಂಭ ನಂತರ ಮಧ್ಯಾಹ್ನ 12 ಕ್ಕೆ ಸೋಮವಾರ ಪೇಟೆಯ ಬಡಿಗಣಿ ರವರ ಮನೆಯಿಂದ ಶ್ರೀ ರಾಚೋಟೆಶ್ವರ ಪಲ್ಲಕಿ ಉತ್ಸವ ಪ್ರಮುಖ ರಸ್ತೆ ಮಾರ್ಗವಾಗಿ ದೇವಸ್ಥಾನದ ಮುಂಭಾಗದ ಅಗ್ನಿ ಪ್ರವೇಶಿಸುತ್ತದೆ, ಸಂಜೆ 6 ಕ್ಕೆ ಹೂವಿನ ಅಲಂಕಾರದಲ್ಲಿಶ್ರೀ ವೀರಭದ್ರೇಶ್ವರ ಹಾಗೂ ಶ್ರೀ ರಾಚೋಟೆಶ್ವರರ ಪಲ್ಲಕಿ ಉತ್ಸವ
ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಶ್ರೀ ಈಶ್ವರಲಿಂಗ ಮೈದಾನ ತಲುಪಿ ವಿವಿಧ ಜಿಲ್ಲೆಗಳಿಂದ ಆಗಮಿಸಿದ
ವೀರಗಾಸೆ ಪುರವಂತರ ವೀರಭದ್ರನ ಒಡಪು ಹೇಳುವ ಮೂಲಕ ವಿರಾಟ ಸೇವೆಯೊಂದಿಗೆ
ಸಂಪನ್ನಗೊಳ್ಳುತ್ತದೆ ಎಂದು ಕಾರ್ತಿಕೋತ್ಸವ ಕಮಿಟಿ ಹಿರಿಯರಾದ ಪಂಡಿತ ಪಟ್ಟಣ, ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ,
ಪ್ರಕಾಶ ಕುಂಬಾರ