ಮಹದೇವಪುರ: ನಗರದಾದ್ಯಂತ ಹನುಮಾನ್ ಜಯಂತಿಯನ್ನು ಸಡಗರ ಸಂಭ್ರಮದಿಂದ ಆಚರಣೆ ಮಾಡಿ ಭಕ್ತಿ ಭಾವದಿಂದ ನಮಿಸಲಾಗುತ್ತಿದೆ . ಹಾಗೆ ಬೆಂಗಳೂರಿನ ಮಹದೇವಪುರ ಕ್ಷೇತ್ರದ ಬಿಳಿಶಿವಾಲೆಯ ಕಟ್ಟಣಗಿರಿ ಆಂಜನೇಯ ದೇವಸ್ಥಾನದಲ್ಲಿ ಅದ್ದೂರಿವಾಗಿ ಹನುಮಾನ್ ಜಯಂತಿಯನ್ನು ಆಚರಣೆ ಮಾಡಲಾಗಿದೆ .
ನೂರಾರು ವರ್ಷಗಳ ಇತಿಹಾಸವಿರುವ ಈ ದೇಗುಲಕ್ಕೆ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ರಾಮನ ಬಂಟನಿಗೆ ಶ್ರದ್ದಾ ಭಕ್ತಿಯಿಂದ ನಮಿಸಿದರು . ಇನ್ನೂ ಹನುಮಾನ್ ಜಯಂತಿ ಹಾಗೂ ಅಯೋಧ್ಯೆಯಿಂದ ಬಂದಿರುವ ರಾಮ ಮಂತ್ರಾಕ್ಷತೆಯನ್ನು ಸ್ಥಳೀಯ ಶಾಸಕಿ ಮಂಜುಳಾ ಲಿಂಬಾವಳಿ ಹಾಗೂ ಮಾಜಿ ಸಚಿವ ಅರವಿಂದ ಲಿಂಬಾವಳಿ ಅವರು ಕಲಶ ಹೊತ್ತ ನೂರಾರು ಮಹಿಳೆಯರೊಂದಿಗೆ ಶೋಭಾ ಯಾತ್ರೆ ಮೂಲಕ ಕಟ್ಟಣಗಿರಿ ಆಂಜನೇಯ ದೇವಸ್ಥಾನಕ್ಕೆ ಬೇಟಿ ನೀಡಿ ಕೇಸರಿ ನಂದನಿಗೆ ದಂಪತಿಗಳ ಸಮೇತ ವಿಶೇಷ ಪೂಜೆ ಸಲ್ಲಿಸಿ ಅನ್ನ ಸಂತರ್ಪಣೆ ಭಾಗಿಯಾಗಿದ್ದರು .
ಸಂಜೆ ಬಿಳಿ ಶಿವಾಲಯದ ಗ್ರಾಮದ ಪ್ರಮುಖ ಬೀದಿಗಳಲ್ಲಿ ಕಟ್ಟಣಗಿರಿ ಆಂಜನೇಯ ದೇವರ ಮೂರ್ತಿಯ ರಥೋತ್ಸವ ಮಾಡಲಾಯಿತು.ಸುಮಾರು 80 ಕ್ಕೂ ಹೆಚ್ಚು ಮಾಲಾದಾರಿಗಳು ಅಂಜನಾದ್ರಿ ಬೆಟ್ಟಕ್ಕೆ ದರ್ಶನಕ್ಕೆ ತೆರಳಿದರು.
ಈ ಸದರ್ಭದಲ್ಲಿ ಮಹದೇವಪುರ ಗ್ರಾಮಾಂತರ ಅಧ್ಯಕ್ಷ ನಟರಾಜ್, ಬಿಳೆ ಶಿವಾಲಯದ ಯುವ ಮುಖಂಡ ಆನಂದ್, ನಾರಯಣ ಗೌಡರು,ಬಿ ಎಸ್ ವಿ ಪ್ರಕಾಶ್,ರಂಗೇಗೌಡ,ಮೋಹನ್ ರೆಡ್ಡಿ,ಬಂಡೆ ಹೊಸುರು ಸುಂದರ್, ರಾಂಪುರ ವೇಣುಗೋಪಾಲ್ ಮನು,ಮುರಳಿ, ಬಿಎಸ್ ವಿ ಲಕ್ಷ್ಮಣ್ ಮತ್ತಿತರರು ಇದ್ದರು.