ವಿಜಯಪುರ:- ಇಲ್ಲಿನ ಲೋಕಸಭೆ ಟಿಕೆಟ್ ಆಕಾಂಕ್ಷಿಯಲ್ಲ ಎಂದು ಮಾಜಿ ಡಿಸಿಎಂ ಗೋವಿಂದ ಕಾರಜೋಳ ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ನಾನು ಲೋಕಸಭೆ ಟಿಕೆಟ್ ಆಕಾಂಕ್ಷಿಯಲ್ಲ. ರಾಜ್ಯ-ರಾಷ್ಟ್ರ ನಾಯಕರೊಂದಿಗೆ ಸೇರಿ ರಾಜ್ಯದ 28 ಕ್ಷೇತ್ರದಲ್ಲಿಯೂ ನಮ್ಮ ಅಭ್ಯರ್ಥಿಗಳು ಗೆಲ್ಲಲು ಎಲ್ಲ ಪ್ರಯತ್ನ ಮಾಡುತ್ತೇನೆ. ನಾನು ಲೋಕಸಭೆ ಸ್ಪರ್ಧೆ ಮಾಡಬೇಕು ಎನ್ನುವ ಕೂಗು ಪಕ್ಷದಲ್ಲಿ ಇಲ್ಲ ಎಂದರು.
ಗಾಳಿ ಸುದ್ದಿಗಳನ್ನು ಮಾಧ್ಯಮ ಮಿತ್ರರು ನಂಬಬಾರದು. ಸದ್ಯ ನಡೆಯುತ್ತಿರುವ ಮಾದಿಗರ ಆತ್ಮಗೌರವ ಸಮಾವೇಶ.
ಇದೊಂದು ಸಾಮಾಜಿಕ ನ್ಯಾಯದ ಹೋರಾಟ, ಜನರ ಎಚ್ಚರಿಸುವ ಕೆಲಸ ಇದಕ್ಕೂ ಲೋಕಸಭಾ ಚುನಾವಣೆಗೂ ಸಂಬಂಧ ಇಲ್ಲ ಎಂದು ಸ್ಪಷ್ಟಪಡಿಸಿದರು. ಆರ್.ಎಸ್.ಎಸ್ ವಿರುದ್ಧ ಕಾಂಗ್ರೆಸ್ ನಾಯಕ ಹರಿಪ್ರಸಾದ ಆರೋಪ ಕುರಿತು ಪ್ರತಿಕ್ರೀಯೆ ನೀಡಿದ ಗೊಂವಿದ ಕಾರಜೋಳ ಅವರು, ಕಾಂಗ್ರೆಸ್ ನಾಯಕ ಹರಿಪ್ರಸಾದ ಬಗ್ಗೆ ಹಗುರವಾಗಿ ಮಾತನಾಡಲು ಇಷ್ಟಪಡಲ್ಲ. ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟ ಸ್ವಾತಂತ್ರ್ಯ ಯೋಧರ ಬಗ್ಗೆ ತಿಳಿದುಕೊಂಡು ಹರಿಪ್ರಸಾದ ಮಾತನಾಡಲಿ, ದೇಶ ಇತಿಹಾಸ ಬಗ್ಗೆ ತಿಳಿದುಕೊಂಡು ಮಾತನಾಡುವುದು ಒಳ್ಳೆಯದು ಎಂದರು.