ಕೆಲವು ಜನರಲ್ಲಿ ಶ್ರವಣ ದೋಷದ ಸಮಸ್ಯೆ ಕಾಡುತ್ತಿದೆ. ಹಾಗಾಗಿ ಅಂತವರು ನಿಮ್ಮ ಶ್ರವಣದ ಶಕ್ತಿಯನ್ನು ಹೆಚ್ಚಿಸಲು ಈ ಆಹಾರ ಸೇವಿಸಿ. ಶ್ರವಣ ಶಕ್ತಿ ಹೆಚ್ಚಾಗಲು ಮೆಗ್ನೀಶಿಯಂ ಸಮೃದ್ಧವಾಗಿರುವ ಆಹಾರ ಸೇವಿಸಿ.
ಇದು ನರಗಳನ್ನು ಬಲಗೊಳಿಸುತ್ತದೆ. ದೊಡ್ಡ ಶಬ್ದದಿಂದಾಗುವ ಹಾನಿಯನ್ನು ತಡೆಯುತ್ತದೆ. ಹಾಗಾಗಿ ಆವಕಾಡೊ, ಬಾದಾಮಿ, ಅಂಜೂರ, ಪಾಲಕ್ ಮುಂತಾದವುಗಳನ್ನು ಸೇವಿಸಿ.
ಪೊಟ್ಯಾಶಿಯಂ ಸೇವನೆಯಿಂದ ಕಿವಿಯಲ್ಲಿ ದ್ರವದ ಸಮತೋಲನ ಉತ್ತಮವಾಗಿರುತ್ತದೆ. ಇದು ಕಿವಿಯ ಕೇಳುವ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಹಾಗಾಗಿ ಬಾಳೆಹಣ್ಣು, ಆಲೂಗಡ್ಡೆ, ಕಿತ್ತಳೆ, ಎಳನೀರನ್ನು ಕುಡಿಯಿರಿ.
ಸತುವು ಸಮೃದ್ಧವಾಗಿರುವ ಆಹಾರ ಸೇವನೆಯಿಂದ ಕಿವಿಯಲ್ಲಿ ಸೋಂಕಿನ ಸಮಸ್ಯೆಯನ್ನು ನಿವಾರಿಸಬಹುದು.