ಹುಬ್ಬಳ್ಳಿ:- ಹಿಜಾಬ್ ನಿಷೇಧ ಆಗದಿದ್ದರೂ ಅದನ್ನು ವಾಪಸ್ ಪಡೆಯುತ್ತೇವೆ ಎಂದು ಹೇಳಿರುವುದು ಸಿದ್ದರಾಮಯ್ಯ ಅವರ ಮುಠ್ಠಾಳತನ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ಹಿಜಾಬ್ ನಿಷೇಧ ಆಗದಿದ್ದರೂ ಅದನ್ನು ವಾಪಸ್ ಪಡೆಯುತ್ತೇವೆ ಎಂದು ಹೇಳಿರುವುದು ಕಾಂಗ್ರೆಸ್ನ ಬೌದ್ಧಿಕ ದಿವಾಳಿತನಕ್ಕೆ ಸಾಕ್ಷಿ. ಇದು ಸಿದ್ದರಾಮಯ್ಯ ಅವರ ಮುಠ್ಠಾಳತನ. ತಮ್ಮ ವೈಫಲ್ಯಗಳನ್ನು ಮುಚ್ಚಿಹಾಕಲು ರೀತಿ ಮಾಡುತ್ತಿದ್ದಾರೆ’ ಎಂದರು.
ನಮ್ಮ ಸರ್ಕಾರ ಇದ್ದಾಗ ಹಿಜಾಬ್ ನಿಷೇಧ ಮಾಡಿರಲಿಲ್ಲ. ಇದು ಸಿದ್ದರಾಮಯ್ಯ ಅವರಿಗೆ ಗೊತ್ತಿದ್ದರೂ ಈ ರೀತಿ ಹೇಳಿದರೆ ಅದು ಸಮಾಜಕ್ಕೆ ಬಗೆಯುತ್ತಿರುವ ದ್ರೋಹ. ಗೊತ್ತಿಲ್ಲ ಎಂದಾದರೆ ಅವರು ಮುಖ್ಯಮಂತ್ರಿ ಸ್ಥಾನದಲ್ಲಿ ಇರಲು ಅರ್ಹರಲ್ಲ’ ಎಂದರು.
‘ಹಿಜಾಬ್ ನಿಷೇಧ ಎಂದರೆ ಅದನ್ನು ಧರಿಸಿ ಎಲ್ಲಿಯೂ ಓಡಾಡುವಂತಿಲ್ಲ. ಹಿಜಾಬ್ ಯಾವಾಗ ನಿಷೇಧವಾಗಿದೆ? ಸಿದ್ದರಾಮಯ್ಯ ಮೂರ್ಖರ ರೀತಿ ಮಾತನಾಡಿದ್ದಾರೆ. ಸಮುದಾಯಗಳ ನಡುವೆ ಜಗಳ ಹಚ್ಚಿ, ತುಷ್ಟೀಕರಣ ಮಾಡಿ ಮುಸ್ಲಿಮರ ಮತಗಳನ್ನು ಪಡೆಯುವ ಹುನ್ನಾರ ಇದರ ಹಿಂದೆ ಇದೆ. ಈ ಷಡ್ಯಂತ್ರಕ್ಕೆ ಮುಸ್ಲಿಮರು ಬಲಿಯಾಗಬಾರದು’ ಎಂದು ಹೇಳಿದರು.