ಬೆಂಗಳೂರು: ಕೊರೊನಾ ಮಹಾಮಾರಿ ಜೆಎನ್.1 ರೂಪತಾಳಿ ಯಾರಿಗೂ ಗೋಚರಿಸದಂತೆ ಲಗ್ಗೆ ಇಟ್ಟಿದೆ. ಈಗಾಗಲೇ ಸಾವಿನ ಷರಾ ಬರೆದಿರುವ ಕೊರೊನಾ, ಅಬ್ಬರಿಸಲು ಹೊರಟಿದೆ. ಈಗಾಗಲೇ ಕೆಲ ನಿಯಮಗಳನ್ನ ಜಾರಿಗೆ ತಂದು ಕೊರೊನಾ ಕ್ರಿಮಿಯನ್ನ ಹದ್ದುಬಸ್ತಿನಲ್ಲಿಟ್ಟಿದೆ.ಇದೀಗ ಸಾಲು ಸಾಲು ಹಬ್ಬಗಳು ಬರುತ್ತಿರೋದು ಮತ್ತೆ ಕೊರೊನಾ ಸುನಾಮಿಯಂತೆ ಹರಡುವ ಆತಂಕ ಕಾಡ್ತಿದ್ದು, ಇದು ಬಿಬಿಎಂಪಿಗೆ ಟೆನ್ಷನ್ ಹೆಚ್ಚಿಸಿದೆ.
ಹೋಂ ಐಸೋಲೇಷನ್ ಕಡ್ಡಾಯ.. ಕ್ವಾರಂಟೈನ್ ಆದವರ ಮೇಲೆ ಹೆಚ್ಚು ನಿಗಾ.. ಕೋವಿಡ್ ಟೆಸ್ಟ್ ಹೆಚ್ಚಳ.. ನೆರೆ ರಾಜ್ಯಗಳಿಂದ ಬರುವ ಪ್ರಯಾಣಿಕರ ಮೇಲೆ ಹದ್ದಿನ ಕಣ್ಣು. ಹೀಗೆ ಏನೇ ಮುನ್ನೆಚ್ಚರಿಕೆಗಳನ್ನ ಆರೋಗ್ಯ ಇಲಾಖೆ ತೆಗೆದುಕೊಳ್ಳುತ್ತಿದ್ರು, ಚೀನಾ ಕೂಸು ಕೊರೊನಾ ಮಹಾಮಾರಿ ಜೆಎನ್.1 ರೂಪತಾಳಿ ಮೆಲ್ಲ ಮೆಲ್ಲನ್ನೆ ರಾಜ್ಯದ ಜಿಲ್ಲೆಗಳಿಗೆ ಎಂಟ್ರಿ ಕೊಡ್ತಿದೆ. ಕಳೆದ ಬಾರಿಯಂತೆ ಈ ಬಾರಿಯೂ ಬೆಂಗಳೂರು ಹಾಟ್ ಸ್ಪಾಟ್ ಆಗಲಿದೆಯೇ ಎಂಬ ಸಂದೇಹ ಮೂಡಿದೆ.
ಹೌದು .. ಕೊರೊನಾ ಹೊಸ ಅವತಾರದಲ್ಲಿ ಎಲ್ಲೆಡೆ ಹಬ್ಬುತ್ತಿದೆ. ಅತ್ತ ವೈರಸ್ ಹಾವಳಿ ಇದ್ರೆ ಇತ್ತ ಸಾಲು ಸಾಲು ರಜೆಗಳು ಬಂದಿದೆ. ಕ್ರಿಸ್ಮಸ್ ಹಾಗೂ ಹೊಸ ವರ್ಷದಲ್ಲಿ ಒಂದೆಡೆ ಕೊರೊನಾಗೆ ಬ್ರೇಕ್ ಹಾಕಬೇಕಿದ್ರೆ ಮತ್ತೊಂದೆಡೆ ಸೆಲಬ್ರೇಷನ್ ಹೆಸರಲ್ಲಿ ಆಟಾಟೋಪ ಪ್ರದರ್ಶಿಸುವವರ ಆಟಗಳಿಗೆ ಪಾಲಿಕೆ ಬ್ರೇಕ್ ಹಾಕಬೇಕಾದ ಪರಿಸ್ಥಿತಿ ಎದುರಾಗಿದೆ. ಸದ್ಯ ನಗರದಲ್ಲಿ ದಿನೇ ದಿನೇ ಕೋವಿಡ್ ಪಾಸಿಟಿವಿ ಹಾಗೂ ಆಕ್ಟೀವ್ ಕೇಸ್ ಗಳ ಸಂಖ್ಯೆ ಹೆಚ್ಚಾಗ್ತಿರೋ ಬೆನ್ನಲ್ಲೇ ಮತ್ತೊಂದು ಆತಂಕ ಶುರುವಾಗಿದೆ.
ರಜೆ, ಹಬ್ಬ ಯಾವುದು ಇಲ್ಲದೇ ಈಗಲೇ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗ್ತಿರೋವಾಗ ಇನ್ನು ರಜೆ ಸಿಕ್ರೆ ಕೊರೊನಾ ಆಟ ಹೇಗಿರುತ್ತೆ ಅನ್ನೋ ಆತಂಕ ಶುರುವಾಗಿದೆ.ಈ ಬಗ್ಗೆ ಗಂಭೀರ ಚಿಂತನೆ ನಡೆಸಿರೋ ಬೆಂಗಳೂರು ಮಹಾನಗರ ಪಾಲಿಕೆ ಡಿಸೆಂಬರ್ 27 ರಂದು ನಡೆಯಲಿರೋ ತಾಂತ್ರಿಕ ಸಲಹಾ ಸಮಿತಿ ಸಭೆಯಲ್ಲಿ ಸಲಹೆ ಪಡೆದು, ಕೋವಿಡ್ ಮಾರ್ಗಸೂಚಿ ಮರುಪರೀಶೀಲನೆ ಮುಂದಾಗಿದೆ. ರಾಜ್ಯದಲ್ಲಿ ಅದರಲ್ಲೂ ಬೆಂಗಳೂರಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗ್ತಿದೆ. ಈ ಬೆನ್ನಲ್ಲೇ ಸಾಲು ಸಾಲು ರಜೆ ಹಿನ್ನೆಲೆ ಜನರು ರಜೆಯ ಮಜಾ ಪಡೆಯಲು ಬೇರೆ, ಬೇರೆ ಊರಿನತ್ತ ಪ್ರಯಾಣ ಬೆಳೆಸುತ್ತಿದ್ದಾರೆ.
ಇದರಿಂದ ಮತ್ತೆ ಕೊರೊನಾ ಹೆಚ್ಚಾಗುವ ಆತಂಕ ಮೂಡಿದೆ. ಇದರ ಜೊತೆಗೆ ಸರ್ಕಾರ ಹೊಸ ವರ್ಷ ಸೆಲೆಬ್ರೇಷನ್ ವೇಳೆ ಇನ್ನಿತರ ವಿಷಯಗಳ ಮೇಲೂ ನಿಗಾ ವಹಿಸಬೇಕಾ ಅಗತ್ಯ ಇದ್ದು, ಪಬ್ , ಕ್ಲಬ್ , ಮೆಟ್ರೋ ,ಬಸ್,ಮಾಲ್ ಗಳಲ್ಲಿ ಜನದಟ್ಟನೆ ನಿಯಂತ್ರಣಕ್ಕೆ ಕಡಿವಾಣ ಹಾಕಲು ಹೊಸ ಸೂತ್ರಕ್ಕೆ ಬಿಬಿಎಂಪಿ ಸಜ್ಜು ಆಗ್ತಿದೆ. ಹಿಂದೆ ಕೊರೊನಾ ಅಲೆಗಳು ಬಂದಾಗ ಏನ್ ಮಾಡಬೇಕು ಅನ್ನೋದೆ ಗೊತ್ತಾಗದೆ ಅನುಭವಿಸಿದ ಸಾವು-ನೋವುಗಳಿಂದ ಸರ್ಕಾರ ಈ ಬಾರಿ ಎಚ್ಚೆತ್ತಿದೆ. ಹಳೆ ಸ್ಥಿತಿ ಮರುಕಳಿಸದಂತೆ ಸರ್ಕಾರ ಮತ್ತು ಅಧಿಕಾರಿಗಳು ಎಚ್ಚರಿಕೆಯಲ್ಲಿದ್ದಾರೆ.ಆದ್ರೆ ಕೋವಿಡ್ ಕಟ್ಟಿಹಾಕಲು ಯಾವ ಸೂತ್ರ ಸರ್ಕಾರ ಅನುಸರಿಸುತ್ತೆ ಅನ್ನೋದನ್ನ ಕಾದುನೋಡಬೇಕಿದೆ.