ಧಾರವಾಡ: ಆತ ಹಿರಿಯರ ಕ್ರೀಡಾ ಕೂಟದಲ್ಲಿ ಪಾಲ್ಗೊಂಡು ಧಾರವಾಡಕ್ಕೆ ಕೀರ್ತಿ ತಂದ ವೃದ್ಧ. ರಾಜ್ಯ ಹಾಗೂ ಅಂತರರಾಜ್ಯಮಟ್ಟದಲ್ಲಿ ನಡೆದ ಹಿರಿಯರ ಕ್ರೀಡಾಕೂಟದಲ್ಲಿ ಗೆದ್ದು ಪದಕಗಳಿಗೆ ಮುತ್ತಿಕ್ಕಿದ್ದಾನೆ. 75 ರ ಇಳಿ ವಯಸ್ಸಿನಲ್ಲೂ ಕ್ರೀಡಾಕೂಟದಲ್ಲಿ ಪಾಲ್ಗೊಂಡು ಧಾರವಾಡದ ಕೀರ್ತಿ ಹೆಚ್ಚಿಸಿದ್ದಾನೆ. ಆದರೆ, ಆತನನ್ನು ಆತನ ಮಕ್ಕಳು ಸರಿಯಾಗಿ ನೋಡಿಕೊಳ್ಳುತ್ತಿಲ್ಲ ಎಂದು ಇದೀಗ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರ ಬಳಿ ತನ್ನ ಅಸಹಾಯಕತೆ ತೋಡಿಕೊಂಡಿದ್ದಾನೆ.
ಹೌದು! ಈ ರೀತಿ ಸಚಿವರ ಬಳಿ ತನ್ನ ಅಹವಾಲು ಸಲ್ಲಿಸುತ್ತಿರುವ ಈ ವೃದ್ಧನ ಹೆಸರು ಬಸಪ್ಪ ಸಳಾಯಿ. ಧಾರವಾಡ ತಾಲೂಕಿನ ಶಿಬಾರಗಟ್ಟಿ ಗ್ರಾಮದವನು. 75 ವರ್ಷದ ಹಿರಿಯರ ಕರ್ನಾಟಕ ಓಪನ್ ನ್ಯಾಷನಲ್ ಮಾಸ್ಟರ್ ಗೇಮ್ಸ್ನಲ್ಲಿ ಸ್ಪರ್ಧೆ ಮಾಡಿ 100, 200, 300, 800 ಹಾಗೂ 1500 ಮೀಟರ್ ಓಟದಲ್ಲಿ ಪಾಲ್ಗೊಂಡು ಪದಕಗಳನ್ನು ಪಡೆದಿದ್ದಾನೆ. ಆದರೆ, ಈ ವಯೋವೃದ್ಧನನ್ನು ಆತನ ಮಕ್ಕಳು ಸರಿಯಾಗಿ ನೋಡಿಕೊಳ್ಳುತ್ತಿಲ್ಲ.
iPhone 16 ಲೈನ್ಅಪ್ ಬಗ್ಗೆ ನಿಮಗೇನು ಗೊತ್ತು?: A18 ಚಿಪ್ ಯಾಕೆ ಹಾಕ್ತಾರೆ ಗೊತ್ತಾ?
ಹೀಗಾಗಿ ತನಗೆ ಏನಾದರೂ ಧನ ಸಹಾಯ ಮಾಡಿ ಎಂದು ಸಚಿವರ ಜನತಾ ದರ್ಶನ ಕಾರ್ಯಕ್ರಮದಲ್ಲಿ ಸಚಿವ ಲಾಡ್ ಅವರಿಗೆ ಮನವಿ ಸಲ್ಲಿಸಿದ್ದಾನೆ. ಇವರ ಮನವಿ ಆಲಿಸಿರುವ ಸಚಿವರು ಕ್ರೀಡಾ ಇಲಾಖೆಯಿಂದ ಬಸಪ್ಪನಿಗೆ ಪ್ರೋತ್ಸಾಹ ಧನ ಕೊಡುವಂತೆ ಅಧಿಕಾರಿಗಳಿಗೆ ಸ್ಥಳದಲ್ಲೇ ಸೂಚನೆ ಕೊಟ್ಟಿದ್ದಾರೆ. ಇಳಿ ವಯಸ್ಸಿನಲ್ಲಿ ತನ್ನ ಮಕ್ಕಳು ತನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತಿಲ್ಲ ಎಂದು ಬಸಪ್ಪ ಈ ರೀತಿ ಸಚಿವರಿಗೆ ಮನವಿ ಸಲ್ಲಿಸಿದ್ದು ವಿಪರ್ಯಾಸವೇ ಸರಿ.