ಧಾರವಾಡ: ವಿಕಲಚೇತನ ಮಗಳ ಫೋಟೋ ಹಿಡಿದು ಜನತಾ ದರ್ಶನಕ್ಕೆ ಬಂದಿದ್ದ ಮಹಿಳೆಯೊಬ್ಬರಿಗೆ ಸಚಿವ ಸಂತೋಷ ಲಾಡ್ ತಮ್ಮ ಲಾಡ್ ಫೌಂಡೇಶನ್ ವತಿಯಿಂದ 50 ಸಾವಿರ ರೂಪಾಯಿ ಧನ ಸಹಾಯ ಮಾಡಿ ಮಾನವಿಯತೆ ಮೆರೆದಿದ್ದಾರೆ. ಕವಿತಾ ದೇವರದವರ ಎಂಬ ಯುವತಿಗೆ ಕಳೆದ 2015 ರಲ್ಲಿ ಬೆನ್ನು ಮೂಳೆಯ ಶಸ್ತ್ರಚಿಕಿತ್ಸೆ ನಡೆದಿತ್ತು. ಆಗಿನಿಂದ ಆಕೆ ಹಾಸಿಗೆ ಹಿಡಿದಿದ್ದಲ್ಲದೇ ಯಾವುದೇ ಚಿಕಿತ್ಸೆ ಫಲಿಸದೇ ಕೈ ಕಾಲುಗಳು ಸಹ ಸೆಟೆದು ನಿಂತಿವೆ.
ಇದಕ್ಕೆ ಎಷ್ಟೇ ಖರ್ಚು ಮಾಡಿದರೂ ಕವಿತಾಳ ಆರೋಗ್ಯ ಸುಧಾರಿಸಿಲ್ಲ. ಹೀಗಾಗಿ ಕವಿತಾ ತಾಯಿ ಪ್ರತಿಭಾ ಇವತ್ತು ಲಾಡ್ ಅವರನ್ನು ಭೇಟಿ ಮಾಡಲು ಬಂದಾಗ, ಮಗಳ ಫೋಟೋ ತೋರಿಸಿದ್ದಾಳೆ. ಇದನ್ನು ನೋಡಿ ಮರುಗಿದ ಲಾಡ್, ಆ ಮಹಿಳೆಗೆ ಸಹಾಯ ಮಾಡಿದ್ದಾರೆ. ಮೂಲತಃ ಧಾರವಾಡ ತಾಲೂಕಿನ ಮುಮ್ಮಿಗಟ್ಟಿ ಗ್ರಾಮದ ಪ್ರತಿಭಾ, ಕೊರೊನಾದಲ್ಲಿ ತನ್ನ ಪತಿಯ ಸಾವಿನ ನಂತರ ಮಗಳ ಚಿಕಿತ್ಸೆಗಾಗಿ ಓಡಾಡಲು ಆಗದೇ ಧಾರವಾಡದಲ್ಲಿ ಬಾಡಿಗೆ ಮನೆ ಮಾಡಿಕೊಂಡು ಇದ್ದಾಳೆ.
iPhone 16 ಲೈನ್ಅಪ್ ಬಗ್ಗೆ ನಿಮಗೇನು ಗೊತ್ತು?: A18 ಚಿಪ್ ಯಾಕೆ ಹಾಕ್ತಾರೆ ಗೊತ್ತಾ?
ಪ್ರತಿಭಾ ಅವರ ಸಣ್ಣ ಮಗ ಎಸ್ಸೆಸ್ಸೆಲ್ಸಿ ಓದುತ್ತಿದ್ದಾನೆ. ಮಗಳನ್ನು ಮನೆಯಲ್ಲೇ ಇದ್ದು ನೋಡಿಕೊಳ್ಳುವ ಪ್ರತಿಭಾಗೆ ಮನೆ ನಡೆಸೋದು ಕಷ್ಟ ಆಗಿತ್ತು. ಅದಕ್ಕೆ ಲಾಡ್ ಈಗ ಸಹಾಯ ಮಾಡಿ ಮಾನವೀಯ ಮೆರೆದಿದ್ದಾರೆ. ಅಲ್ಲದೇ ತಮ್ಮ ಸಂತೋಷ ಲಾಡ್ ಫೌಂಡೇಶನ್ ವತಿಯಿಂದ ಪ್ರತಿತಿಂಗಳು ಕವಿತಾಳ ಚಿಕಿತ್ಸೆಗಾಗಿ ಹಣ ಸಹ ನೀಡುವ ಭರವಸೆ ನೀಡಿದ್ದಾರೆ.