ಕಲಬುರಗಿ: ನಾನು ಯಾವತ್ತೂ ವಿಲನ್ ಇದ್ದೇನೆ.ವಿಲನ್ ಇದ್ರೇನೇ ಹಿರೋಗೆ ಕಿಮ್ಮತ್ತಿರುತ್ತೆ. ಹೀಗಾಗಿ ಸರ್ವಪಕ್ಷಗಳಿಗೂ ನಾನೇ ವಿರೋಧ ಪಕ್ಷದ ನಾಯಕ ಅಂತ ಬಿಜೆಪಿ ಶಾಸಕ ಬಸಣ್ಣಗೌಡ ಪಾಟೀಲ್ ಯತ್ನಾಳ ಹೇಳಿದ್ದಾರೆ.
ಕಲಬುರಗಿಯಲ್ಲಿಂದು ಮಾತನಾಡಿದ ಯತ್ನಾಳ್ ವಿಲನ್ ಇಲ್ಲದೇ ಹೋದ್ರೆ ಹೀರೋ ಯಾರ ಜೋಡಿ ಫೈಟ್ ಮಾಡ್ತಾನೆ ಹೇಳಿ.ಅದಕ್ಕಾಗಿ ನಾನು ವಿಲನ್ ಆಗಿದ್ದೇನೆ.ಮುಂದೆ ನೋಡೋಣ ಅಂಬರೀಷ್ ಸಹ ಮೊದಲು ವಿಲನ್ ಇದ್ರು ನಂತ್ರ ಹೀರೋ ಆದ್ರು..ಹಾಗೇನೇ ನಾನೂ ಆಗಬಹುದು ಅಂತ ಹೇಳಿದ್ರು.
ಇದೇವೇಳೆ ಮಲ್ಲಿಕಾರ್ಜುನ ಖರ್ಗೆಯವರು ಇಂಡಿಯಾ ಒಕ್ಕೂಟದ ಪ್ರಧಾನಿ ಅಭ್ಯರ್ಥಿ ಘೋಷಣೆ ವಿಚಾರಕ್ಕೆ ರಿಯಾಕ್ಟ್ ಮಾಡಿದ ಯತ್ನಾಳ್ ಖರ್ಗೆಯವರು ಪ್ರಧಾನಿ ಆಗಲ್ಲ ಇನ್ನೇನಿದ್ರೂ ಮತ್ತೆ ಮೋದಿಯವರೇ ಪ್ರಧಾನಿ ಆಗ್ತಾರೆ ಖರ್ಗೆಯವರು ವಿರೋಧ ಪಕ್ಷದಲ್ಲಿರ್ತಾರೆ ಅಂತ ಹೇಳಿದ್ರು..