ಕಲಬುರಗಿ: ತರಕಾರಿ ವ್ಯಾಪಾರ ಮಾಡುತಿದ್ದ ಯುವಕನನ್ನ ಬರ್ಬರವಾಗಿ ಕೊಲೆಗೈದ ಘಟನೆ ಕಲಬುರಗಿಯಲ್ಲಿ ನಡೆದಿದೆ.ಚಿತ್ತಾಪುರ ಪಟ್ಟಣದ ಹೊರವಲಯದಲ್ಲಿ ಕೊಲೆ ನಡೆದಿದ್ದು
ಕೊಲೆಯ ನಂತ್ರ ಪೆಟ್ರೋಲ್ ಸುರಿದು ಶವ ಗುರುತು ಸಿಗದಂತೆ ಬೆಂಕಿ ಹಚ್ಚಲಾಗಿದೆ..ಕೊಲೆಯಾದಯುವಕನನ್ನ ದಾವಲ್ ಸಾಬ್ ಎಂದು ಗುರುತಿಸಲಾಗಿದೆ.
ಸ್ಥಳಕ್ಕೆ ಭೇಟಿ ನೀಡಿದ ಚಿತ್ತಾಪುರ ಪೋಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ..ಕೊಲೆಗೆ ಕಾರಣ ಇನ್ನೂ ತಿಳಿದು ಬಂದಿಲ್ಲ ತನಿಖೆ ನಂತ್ರ ಪಾತಕಿಗಳ ಬಣ್ಣ ಬಯಲಾಗಲಿದೆ.