ಕಲಬುರಗಿ: ಕಾಂಗ್ರೆಸ್ ಮುಖಂಡನ ಪುತ್ರ ಭೀಕರವಾಗಿ ಕೊಲೆಯಾಗಿರೋ ಘಟನೆ ಕಲಬುರಗಿಯಲ್ಲಿ ನಡೆದಿದೆ. ಅಳಂದ ಪಟ್ಟಣದ ಹೊರವಲಯದಲ್ಲಿ ಘಟನೆ ನಡೆದಿದ್ದು ಕೈ ಲೀಡರ್ ಬಸವರಾಜ್ ಚೌಲೆಯ ಪುತ್ರ ಚಂದ್ರಶೇಖರ್ ಕೊಲೆಯಾದ ದುರ್ದೈವಿಯಾಗಿದ್ದಾನೆ.
KMF ಅಧ್ಯಕ್ಷ ಆರ್ ಕೆ ಪಾಟೀಲ್ PA ಆಗಿರುವ ಬಸವರಾಜ ಕಾಂಗ್ರೆಸ್ ಪಕ್ಷದಲ್ಲಿ ಅತ್ಯಂತ ಪ್ರಭಾವಿ ಎನ್ನಲಾಗಿದೆ.ಕೊಲೆಯಾದ ಚಂದ್ರಶೇಖರ್ ಗೆಳೆಯ ಮಿಲನ್ ಕೊಲೆ ಮಾಡಿರೋ ಶಂಕೆ ಹಿನ್ನಲೆ ಆರೋಪಿಯನ್ನ ಪೋಲೀಸರು ವಶಕ್ಕೆ ಪಡೆದಿದ್ದಾರೆ.
ಎಣ್ಣೆ ಪಾರ್ಟಿ ಮಾಡಲು ಗೆಳೆಯರಿಬ್ಬರು ಸೇರಿದ್ದಾರೆ.ಈ ವೇಳೆ ಮಾತಿಗೆ ಮಾತು ಬೆಳೆದು ಜಗಳ ಕೊಲೆಯಲ್ಲಿ ಅಂತ್ಯವಾಗಿದೆ ಅಂತ ಹೇಳಲಾಗ್ತಿದೆ..