ನಮ್ಮ ದೇಶದ ಪ್ರಮುಖ ಕಂಪನಿಯಾದ ಮಾರುತಿ ಸುಜುಕಿ, ವಾರ್ಷಿಕ ಒಂದರಿಂದ ಎರಡು ಲಕ್ಷ ಕಾರುಗಳನ್ನು ಮಾತ್ರ ತಯಾರಿಸಿ ಮಾರಾಟ ಮಾಡುತ್ತಿತ್ತು. ಈಗ ಇದೇ ಕಂಪನಿಯು ವಾರ್ಷಿಕ ಸುಮಾರು 18 ಲಕ್ಷ ಕಾರುಗಳನ್ನು ಮಾರಾಟ ಮಾಡುತ್ತದೆ. ಇಪ್ಪತ್ತು ವರ್ಷದ ಹಿಂದೆ ಮಾರುತಿ ಸುಜುಕಿ ಕಂಪನಿಯ ಒಂದು ಷೇರಿನ ಬೆಲೆ 125 ರೂಪಾಯಿ
ಸೆನ್ಸೆಕ್ಸ್-70,000: ಹೂಡಿಕೆದಾರರು ಈಗ ಏನು ಮಾಡಬೇಕು?
* ಸೆನ್ಸೆಕ್ಸ್ 70 ಸಾವಿರ ಮಾತ್ರವಲ್ಲ, 71 ಸಾವಿರ ಮಟ್ಟವನ್ನೂ ಇತ್ತೀಚೆಗೆ ದಾಟಿದೆ. ಹೀಗೆಂದರೆ ಮಾರುಕಟ್ಟೆಯು ಅತೀ ಎತ್ತರಕ್ಕೆ ಹೋಗಿಬಿಟ್ಟಿದೆಯೆ? ಇಲ್ಲಿಂದ ಮತ್ತೆ ಮೇಲೇರುತ್ತದೆಯಾ ಅಥವಾ ಕೆಳಗಿಳಿಯುತ್ತದೆಯಾ? ಇಂದಿನ ಸನ್ನಿವೇಶದಲ್ಲಿ ಷೇರು ಖರೀದಿ ಮಾಡುವುದೇ ಅಥವಾ ಮಾರಾಟ ಮಾಡುವುದೇ ಅಥವಾ ಸುಮ್ಮನಿರುವುದೇ?
ಬಹುತೇಕ ಖ್ಯಾತ ಮಾರುಕಟ್ಟೆ ತಜ್ಞರು ಹೇಳುವ ಪ್ರಕಾರ, ಮಾರುಕಟ್ಟೆಯ ಮಟ್ಟವನ್ನು ನೋಡಿ ಷೇರು ಖರೀದಿಸಬಾರದು. ಕಂಪನಿಗಳ ಸಾಮರ್ಥ್ಯ ನೋಡಿ ಷೇರು ಖರೀದಿಸಬೇಕು. ಉತ್ತಮ ಕಂಪನಿಗಳ ಸಾಮರ್ಥ್ಯವು ಮಾರುಕಟ್ಟೆಯ ಮಟ್ಟದ ಮೇಲೆ ನಿರ್ಧಾರವಾಗಿಲ್ಲ. ಉತ್ತಮ ಕಂಪನಿಗಳು ಸದಾ ಉತ್ತಮ ಪ್ರದರ್ಶನ ತೋರುತ್ತಿರುತ್ತವೆ. ಕಳೆದ 44 ವರ್ಷಗಳಲ್ಲಿ ಭಾರತ ಹಾಗೂ ಈ ವಿಶ್ವವು ಒಳ್ಳೆಯ, ಕೆಟ್ಟ ಮತ್ತು ಅತೀ ಕೆಟ್ಟ ಘಳಿಗೆಗಳನ್ನು ಕಂಡಿವೆ. ಅಲ್ಲದೇ, ಇದೆಲ್ಲವನ್ನೂ ಸಮರ್ಥವಾಗಿ ನಿಭಾಯಿಸಿದೆ. ಮಾರುಕಟ್ಟೆಯ ಏರಿಳಿತದ ಮಟ್ಟವನ್ನು ಬದಿಗಿಟ್ಟು, ನಮ್ಮ ಹೂಡಿಕೆಯ ಗುರಿ ಅಥವ ಲಕ್ಷ್ಯದ ಕಡೆ ಗಮನ ಹರಿಸಬೇಕು.
* ಮಾರುಕಟ್ಟೆ ಕುಸಿದಾಗ, ಒಳ್ಳೆಯ ಕಂಪನಿಗಳ ಷೇರುಗಳನ್ನು ಖರೀದಿಸಬೇಕು. ಮಾರುಕಟ್ಟೆ ಜಿಗಿದಾಗ ಷೇರುಗಳನ್ನು ಮಾರಾಟ ಮಾಡಿ ಲಾಭ ಮಾಡಿಕೊಳ್ಳಬೇಕು. ಮಾರುಕಟ್ಟೆ ಕುಸಿಯಲಿ ಅಥವಾ ಬೆಳೆಯಲಿ ಹೂಡಿಕೆದಾರರಿಗೆ ಲಾಭವಿದೆ.