ಬೆಂಗಳೂರು: ಚಿನ್ನ ಬೆಳ್ಳಿಯ ಬೆಲೆಯಲ್ಲಿ ಒಂದು ವಾರದ ಬಳಿಕ ಹೆಚ್ಚು ಏರಿಕೆ ಕಂಡಿದ್ದು, ಒಂದೇ ದಿನಕ್ಕೆ 10 ಗ್ರಾಂ ಚಿನ್ನ 380 ರೂಪಾಯಿ ಹಾಗೂ ಒಂದು ಕೆ.ಜಿ ಬೆಳ್ಳಿ 700 ರೂಪಾಯಿ ಹೆಚ್ಚಳವಾಗಿದೆ. ಈ ಮೂಲಕ ಮತ್ತೆ ದಾಖಲೆಯ ದರವನ್ನು ತಲುಪಿದೆ.
ಮಾರುಕಟ್ಟೆಯಲ್ಲಿ ಚಿನ್ನದ ದರ ಹೀಗಿದೆ. ಬೆಂಗಳೂರಿನ ಮಾರುಕಟ್ಟೆಯಲ್ಲಿ 1 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆಯು 5,775 ರೂಪಾಯಿ ಇದೆ. 1 ಗ್ರಾಂ 24 ಕ್ಯಾರೆಟ್ ಚಿನ್ನ ಅಥವಾ 999 ಗೋಲ್ಡ್ ಬೆಲೆ 6,300 ರೂಪಾಯಿ ಇದೆ. ಕಳೆದ ಒಂದು ದಿನಕ್ಕೆ ಹೋಲಿಸಿದರೆ 22 ಕ್ಯಾರೆಟ್ ಚಿನ್ನ 35 ರೂಪಾಯಿ (ಪ್ರತಿ ಗ್ರಾಂಗೆ) , 24 ಕ್ಯಾರೆಟ್ ಚಿನ್ನ 38 ರೂಪಾಯಿ (ಪ್ರತಿ ಗ್ರಾಂಗೆ) ಏರಿಕೆಯಾಗಿದೆ.
ಇನ್ನು ಬೆಳ್ಳಿದರ ನೋಡುವುದಾದರೆ, ಬೆಂಗಳೂರಿನ ಮಾರುಕಟ್ಟೆಯಲ್ಲಿ ಪ್ರತಿ ಒಂದು ಕೆ.ಜಿ 76,200 ರೂಪಾಯಿ ಇದೆ. ಇನ್ನು ಕಳೆದ ಒಂದು ವಾರದಿಂದ ಚಿನ್ನ 250 ರೂಪಾಯಿ ಏರಿಳಿಕೆಯಾಗುತ್ತಿದ್ದು, ಇಂದು ಮಾತ್ರ ದಿಢೀರ್ 700 ರೂಪಾಯಿ ಏರಿಕೆಯಾಗಿದೆ.