ಬೆಳಗಾವಿ:- ಹಿಜಾಬ್ ಕೇಸ್ ವಾಪಸ್ ಪಡೆಯಲು ಸಿದ್ದರಾಮಯ್ಯ ಯಾರು? ಎಂದು ಪ್ರಮೋದ್ ಮುತಾಲಿಕ್ ಪ್ರಶ್ನೆ ಮಾಡಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ರಾಜ್ಯದಲ್ಲಿ ಹಿಜಾಬ್ ಪ್ರಕರಣ ವಿವಾದ ತಣ್ಣಗಾಗಿತ್ತು. ಮತ್ತೆ ವಿವಾದದ ಕಿಡಿಯನ್ನು ಸಿಎಂ ಸಿದ್ದರಾಮಯ್ಯ ಹಚ್ಚಿದ್ದಾರೆ. ವಾಪಸ್ ಪಡೆಯಲು ಸಿದ್ದರಾಮಯ್ಯ ಯಾರು? ಎಂದು ಪ್ರಶ್ನಿಸಿದರು.
ಹೈಕೋರ್ಟ್ ಆದೇಶ ವಾಪಸ್ ಪಡೆಯಲು ಆಗಲ್ಲ. ರಾಜ್ಯದಲ್ಲಿ ಗಲಭೆ ಮಾಡಲು ಹಿಜಾಬ್ಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಹಿಜಾಬ್ ಕಿಡಿ ಹೊತ್ತಿಸಿದ್ದು ಸರಿ ಅಲ್ಲ. ಸಿಎಂ ಸಿದ್ದರಾಮಯ್ಯ ಹೇಳಿಕೆ ವಾಪಸ್ ಪಡೆಯಬೇಕು. ಇಲ್ಲವಾದಲ್ಲಿ ಕೋರ್ಟ್ನಲ್ಲಿ ಪ್ರಕರಣ ದಾಖಲಿಸುತ್ತೇವೆ ಎಂದರು.