ದಾವಣಗೆರೆ:- ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಾತಿಗಣತಿ ವಿರೋಧಿಯಲ್ಲ ಎಂದು ಸಚಿವ ಈಶ್ವರ್ ಖಂಡ್ರೆ ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು, ವೈಜ್ಞಾನಿಕ ಆಧಾರದಲ್ಲಿ ಜಾತಿಗಣತಿ ಮಾಡಬೇಕು ಎಂದು ದಾವಣಗೆರೆಯಲ್ಲಿ ಸಚಿವ ಹಾಗೂ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಒತ್ತಾಯ ಮಾಡಿದ್ದಾರೆ.
ನಾವು ಈ ಬಗ್ಗೆ ಈಗಾಗಲೇ ಸ್ಪಷ್ಟವಾಗಿ ಹೇಳಿದ್ದೇವೆ. ವಾಸ್ತವಾಂಶದ ಆಧಾರದ ಮೇಲೆ ಸತ್ಯಾಸತ್ಯತೆ ಖಚಿತಪಡಿಸಿಕೊಂಡು ಜಾತಿಗಣತಿ ಮಾಡಲಿ. ವೀರಶೈವ ಲಿಂಗಾಯತದ ಎಲ್ಲ ಒಳಪಂಗಡಗಳನ್ನ ಸೇರಿಸಿಕೊಂಡು ಜಾತಿಗಣತಿ ಮಾಡಬೇಕು ಎಂದರು.
ಹಿಜಾಬ್ ಹಿಂಪಡೆದ ವಿಚಾರವಾಗಿ ಮಾತನಾಡಿ, ಅವರವರ ಧರ್ಮದ ಆಚರಣೆ ಮಾಡಲು ಸಂವಿಧಾನ ಅವಕಾಶ ಕೊಟ್ಟಿದೆ. ಅದನ್ನ ಜಾರಿ ಮಾಡುವುದು ಮತ್ತು ಅವಕಾಶ ಕೊಡುವ ಕೆಲಸವನ್ನ ಸಿಎಂ ಮಾಡುತ್ತಾರೆ. ಸಿಎಂ ಯಾವುದೇ ನಿರ್ಧಾರ ತೆಗೆದುಕೊಂಡ್ರು ಸಂವಿಧಾನಬದ್ದವಾಗಿರುತ್ತದೆ, ನ್ಯಾಯಬದ್ಧವಾಗಿರುತ್ತದೆ ಎಂದರು.
ಯತ್ನಾಳ ನಾಲಿಗೆ ಮತ್ತು ಮೆದುಳಿಗೆ ಲಿಂಕ್ ಇಲ್ಲ. ಅವರು ಯಾವ ಸಮಯದಲ್ಲಿ ಏನು ಮಾತಾಡ್ತಾರೆ ಅಂತ ಅವರಿಗೆ ಅರಿವಿದೆಯೋ ಗೊತ್ತಿಲ್ಲ ಎಂದು ದಾವಣಗೆರೆಯಲ್ಲಿ ಸಚಿವ ಈಶ್ವರ ಖಂಡ್ರೆ ಹೇಳಿಕೆ ನೀಡಿದ್ದಾರೆ.