ಬೆಂಗಳೂರು: ಹೊಸ ವರ್ಷ ಹತ್ತಿರ ಬರ್ತಿದ್ದಂತೆ ರಾಜಧಾನಿಯಲ್ಲಿ ಡ್ರಗ್ಸ್ ವಾಸನೆ ಹೆಚ್ಚಾಗ್ತಿದೆ. ಇತ್ತಿಚೆಗಷ್ಟೇ ವಿದೇಶಿ ಮೂಲದ ಪೆಡ್ಲರ್ ಅರೆಸ್ಟ್ ಮಾಡಿದ್ದ ಖಾಕಿ ಪಡೆ ಕೋಟ್ಯಾಂತರ ರೂ. ಡ್ರಗ್ಸ್ ವಶಕ್ಕೆ ಪಡೆದಿತ್ತು. ಅದೇ ರೀತಿ ಮತ್ತೆ ಮೂವರು ಪೆಡ್ಲರ್ಗಳನ್ನ ಹೆಡೆಮುರಿ ಕಟ್ಟಿರೋ ಸಿಸಿಬಿ ಟೀಂ, ಅರ್ಧಕೋಟಿಯಷ್ಟು ಡ್ರಗ್ಸ್ ಸೀಜ್ ಮಾಡಿದೆ.
ರಾಜಧಾನಿ ಬೆಂಗಳೂರಲ್ಲಿ ಮಾದಕ ವಸ್ತುಗಳು ಮಾರಾಟ ಎಗ್ಗಿಲ್ಲದೇ ನಡೀತಿದೆ. ಖಾಕಿ ಪಡೆ ಎಷ್ಟೇ ಎಚ್ಚರಿಕೆ ವಹಿಸಿದ್ರು, ಖತರ್ನಾಕ್ ಅಸಾಮಿಗಳು ಡ್ರಗ್ಸ್ ಪೂರೈಕೆಗೆ ನಾನಾ ದಾರಿಗಳನ್ನ ಹುಡುಕ್ತಾರೆ. ಮೊನ್ನೆಯಷ್ಟೆ ಸಿಸಿಬಿ ಪೊಲೀಸರ ಬೇಟೆಯಲ್ಲಿ ಸುಮಾರು 21 ಕೋಟಿಗೂ ಅಧಿಕ ಮೊತ್ತದ ಮಾದಕ ವಸ್ತುಗಳು ಪತ್ತೆಯಾಗಿದ್ವು. ಹಾಗೆ ಓರ್ವ ವಿದೇಶಿ ಡ್ರಗ್ ಪೆಡ್ಲರ್ ಬಂಧನವಾಗಿತ್ತು. ಈ ಘಟನೆ ಬೆನ್ನಿಗೆ ಇದೇ ರೀತಿ ವರ್ಷಾಚರಣೆಯ ಪಾರ್ಟಿಗಳಿಗಾಗಿ ಸಂಗ್ರಹಿಸಿಟ್ಟಿದ್ದ ಡ್ರಗ್ಸ್ ಅಡ್ಡೆ ಮೇಲೆ ಸಿಸಿಬಿ ಟೀಂ ದಾಳಿ ನಡೆಸಿದ್ದು, ಮೂವರು ಡ್ರಗ್ ಪೆಡ್ಲರ್ಗಳನ್ನ ಸಮೇತ ಅರ್ಧ ಕೋಟಿಗೂ ಹೆಚ್ಚು ಮೊತ್ತದ ಮಾದಕ ವಸ್ತುಗಳನ್ನ ಸೀಜ್ ಮಾಡಿದೆ.
ಯೆಸ್. ನೈಜೀರಿಯನ್ ಮೂಲದ ಜೋಶುವಾ, ಕೇರಳದ ಅಬ್ದುಲ್ ಅಹದ್, ನಿಸಮ್ ಎಂಬುವರೇ ಬಂಧಿತ ಡ್ರಗ್ ಪೆಡ್ಲರ್ಗಳು. ಹೊಸ ವರ್ಷಾಚರಣೆಯ ಪಾರ್ಟಿಗಳಿಗಾಗಿ ಈ ಆರೋಪಿಗಳು ಕೋರಮಂಗಲದ ಹೋಟೆಲ್ ಒಂದರ ರೂಂನಲ್ಲಿ ಡ್ರಗ್ಸ್ ಸಂಗ್ರಹಿಸಿಟ್ಟಿದ್ರು. ಈ ಮಾಹಿತಿ ಅರಿತ ಸಿಸಿಬಿ ಟೀಂ ಹೋಟೆಲ್ ಮೇಲೆ ದಾಳಿ ಮಾಡಿ 86.89 ಗ್ರಾಂ. MDMA, 100 LSD Strips ಸೇರಿದಂತೆ ಸುಮಾರು 52 ಲಕ್ಷ ಮೊತ್ತದ ಅನೇಕ ವಿಧದ ಮಾದಕ ವಸ್ತುಗಳು ಸೀಜ್ ಮಾಡಿದೆ. ಈ ಆರೋಪಿಗಳು ಸ್ಥಳೀಯ ವ್ಯಕ್ತಿಗಳಿಂದ ಕಡಿಮೆ ಬೆಲೆಗೆ ಡ್ರಗ್ಸ್ ಖರೀದಿ ಮಾಡಿ ಹೆಚ್ಚು ಮೊತ್ತಕ್ಕೆ ಮಾರಾಟ ಮಾಡುತ್ತಿದ್ರು ಅನ್ನೊ ವಿಚಾರ ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದ್ದು, ಪೊಲೀಸರು ವಿಚಾರಣೆ ಮುಂದುವರಿಸಿದ್ದಾರೆ.
ಒಟ್ನಲ್ಲಿ ನ್ಯೂ ಇಯರ್ ಹಿನ್ನೆಲೆ ರಾಜಧಾನಿಯಲ್ಲಿ ನಶೆ ಲೋಕ ಸೃಷ್ಟಿ ಮಾಡಲು ಡ್ರಗ್ ಪೆಡ್ಲರ್ಗಳ ಆಕ್ಟಿವ್ ಆಗಿದ್ದಾರೆ. ಆದ್ರೆ ಬೆಂಗಳೂರು ಸಿಸಿಬಿ ಅಧಿಕಾರಿಗಳು ಇಂತ ಖತರ್ನಾಕ್ಗಳ ಪ್ಲಾನ್ಗಳನ್ನ ಬ್ರೇಕ್ ಮಾಡ್ತಿದ್ದು, ಜೈಲಿನ ದಾರಿ ತೋರಿಸ್ತಿದ್ದಾರೆ.