ಧಾರವಾಡ:- ಹಿಜಾಬ್ ನಿಷೇಧ ಆದೇಶ ವಾಪಸ ಬಗ್ಗೆ ಸಿಎಂ ಹೇಳಿಕೆ ವಿಚಾರವಾಗಿ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಸಚಿವ ಸಂತೋಷ್ ಲಾಡ್ ಗರಂ ಆಗಿದ್ದಾರೆ.
ಈ ಸಂಬಂಧ ದಾವಣಗೆರೆಯಲ್ಲಿ ಮಾತನಾಡಿದ ಅವರು, ಅದು ದಂಗಲ್ ಹೇಗೆ ಆಗುತ್ತದೆ. ಸಿಎಂ ಹೇಳಿದ್ದು ಕಾನೂನಾತ್ಮವಾಗಿ ಇದೆ. ಅದನ್ನು ದಂಗಲ್ ಎಂಬ ಪದ ಬಳಸಿ ಯಾಕೆ ಹೇಳ್ತಿರಾ? ಧರ್ಮ ದಂಗಲ್ ಎಂದರೆ ಏನು? ಅದರಲ್ಲಿ ಧರ್ಮ ದಂಗಲ್ ಏನಾಗಿದೆ ಹೇಳಿ ಮಾಧ್ಯಮಗಳು ಧರ್ಮ ದಂಗಲ್ ಪದ ಬಳಸುತ್ತಿದ್ದಿರಿ. ಇದು ಎಷ್ಟು ಸರಿ? ಕಾನೂನಾತ್ಮಕ, ಸಂವಿಧಾನಾತ್ಮಕವಾಗಿ ಅದಕ್ಕೆ ಅವಕಾಶವಿದೆ. ಅದರಲ್ಲಿ ಸಿಎಂ ತಪ್ಪು ಏನಿದೆ.
ವಿರೋಧ ಪಕ್ಷಗಳು ವಿರೋಧ ಮಾಡುತ್ತವೆ ಮಾಡಲಿ. ನಾನು ಒಬ್ಬ ಹಿಂದೂ ಅಲ್ಲವಾ? ನಾನೇನು ವಿರೋಧ ಮಾಡುತ್ತಿಲ್ಲ. ನೀವು ಹಿಂದೂ ಅಲ್ಲವಾ? ನೀವು ವಿರೋಧ ಮಾಡುತ್ತಿರಾ? ನಿಮ್ಮ ನಿಲುವು ಏನು? ಎಂದು ಪ್ರಶ್ನಿಸಿದರು.
ಮುಸ್ಲಿಂ ತುಷ್ಠೀಕರಣ ಆರೋಪ ವಿಚಾರವಾಗಿ ಮಾತನಾಡಿ, ವಿರೋಧ ಪಕ್ಷಗಳ ದೃಷ್ಟಿಕೋನ ಹಾಗಿದೆ ಸಬ್ ಕಾ ಸಾಥ್ ಸಬ್ ಕಾ ವಿಕಾಸ ಎಂದರೆ ಏನು? ಹಿಂದೂ, ಮುಸ್ಲಿಂ, ಸಿಖ್, ಬುದ್ಧ ಎಲ್ಲರನ್ನೂ ಒಂದೇ ರೀತಿ ನೋಡಿಕೊಳ್ಳುತ್ತೇವೆ. ಬಿಜೆಪಿ ಸರ್ಕಾರದ ವಿವಿಧ ನಿಯಮಗಳ ವಾಪಸ್ ವಿಚಾರವಾಗಿ ಮಾತನಾಡಿ, ಕಾನೂನಾತ್ಮಕವಾಗಿ ಪರಿಶೀಲನೆ ಮಾಡುತ್ತೇವೆ. ಸಂವಿಧಾನಬದ್ಧವಾಗಿ ಯಾವ ರೀತಿ ಇರಬೇಕು ಅಂತಿದೆ ಆ ರೀತಿ ಮಾಡುತ್ತಾರೆ. ಆ ರೀತಿ ಮಾಡುವಲ್ಲಿ ಸಿಎಂ ಪರಿಶೀಲಿಸುತ್ತಿದ್ದಾರೆ ಎಂದರು.
ರಾಜ್ಯದ ನಾಯಕರ ದೆಹಲಿ ಭೇಟಿ ವಿಚಾರವಾಗಿ ಮಾತನಾಡಿ, ನಾನು ಬೇರೆ ಕೆಲಸಕ್ಕೆ ದೆಹಲಿಗೆ ಹೋಗಿದ್ದೆ ಲೋಕಸಭೆ ಟಿಕೆಟ್ ಬಗ್ಗೆ ಅಲ್ಲಿ ಚರ್ಚೆಯಾಗಿಲ್ಲ ಎಂದರು. ನಿಗಮ ಮಂಡಳಿ ನೇಮಕ ವಿಚಾರವಾಗಿ ಮಾತನಾಡಿ, ಶಾಸಕರು ಮತ್ತು ಕಾರ್ಯಕರ್ತರಿಗೆ ಕೊಡುವ ನಿರ್ಧಾರ ಆಗಿದೆ. ಇನ್ನೂ ಧಾರವಾಡ ಲೋಕಸಭೆ ಟಿಕೆಟ್ ಆಕಾಂಕ್ಷಿಗಳ ಸಭೆ ವಿಚಾರವಾಗಿ ಮಾತನಾಡಿ, ಸಭೆ ಆಗಿದೆ. ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿಗೆ ಇದೆ. ಅದರ ಬಗ್ಗೆ ಪರಿಶೀಲನೆ ಮಾಡಬೇಕು. ಪರಿಶೀಲನೆ ಬಳಿಕ ಹೈಕಮಾಂಡ ಮತ್ತು ಡಿಕೆಶಿ ಫೈನಲ್ ಮಾಡುತ್ತೇವೆ. ಲೋಕಸಭೆ ಯಲ್ಲಿ ನಾವು ಮಾಡಿದ ಕೆಲಸ ಆಧಾರದ ಮೇಲೆ ಜನರ ಬಳಿ ಹೋಗುತ್ತೇವೆ ಎಂದು ಧಾರವಾಡದಲ್ಲಿ ಸಚಿವ ಸಂತೋಷ ಲಾಡ್ ಹೇಳಿಕೆ ನೀಡಿದ್ದಾರೆ.