ಬೆಳಗಾವಿ:- ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಅವರು ರಾಜ್ಯದಲ್ಲಿ ಹಿಜಾಬ್ ಬ್ಯಾನ್ ವಾಪಸ್ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.
ಈ ಸಂಬಂಧ ಬೆಳಗಾವಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಅಧಿಕಾರಕ್ಕೆ ಬಂದಾಗಿನಿಂದ ಮುಸ್ಲಿಂ ತುಷ್ಟೀಕರಣ ಮಾಡ್ತಾರೆ. ಇದು ಹೊಸತೇನು ಅಲ್ಲ, ಈ ಸಲ ಅಧಿಕಾರಕ್ಕೆ ಬಂದಿದ್ದು ಮುಸ್ಲಿಂ ಮತಗಳಿಂದ ಎಂಬುದನ್ನು ಕಾಂಗ್ರೆಸ್ ಪಕ್ಷ ಸ್ಪಷ್ಟವಾಗಿ ಹೇಳಿದೆ. ಬಳಿಕ 10 ಸಾವಿರ ಕೋಟಿ ಕೊಡ್ತಿನಿ ಅಂತ ಹೇಳಿದರು. ನಂತರ ಹಿಜಾಬ್ ಬ್ಯಾನ್ ವಾಪಸ್ ಹೊಸದಲ್ಲ. ಹಿಂದುಗಳ ಮನಸ್ಸಿನಲ್ಲಿ ವಿಷಬೀಜ ಬಿತ್ತಿದ್ದು ದುರಂತ ಎಂದು ಹೇಳಿದರು
ಮುಸ್ಲಿಂ ಮಹಿಳೆಯರ ಅಭಿವೃದ್ಧಿ ಮುಖ್ಯ ಎಂದು ಮೋದಿ ಸರ್ಕಾರ ತ್ರೀವಳಿ ತಲಾಕ್ ರದ್ದು ಮಾಡಿತು. ಸಿದ್ದರಾಮಯ್ಯ ನಡೆ ಪ್ರಗತಿಗೆ ವಿರೋಧವಾಗಿದೆ. ಹೋರಾಟವನ್ನು ಯಾರು ಮಾಡಬೇಕಿಲ್ಲ. ಹಿಂದೂಗಳು ಸಹ ಕೇಸರಿ ಶಾಲ್ ಹಾಕಿ ಬಂದ್ರೆ ಯಾರು ತಡೆಯುವಂತೆ ಇಲ್ಲ ಎಂದು ಹೇಳಿದರು.
ತರಗತಿಯ ವಾತಾವರಣ ಹಾಳು ಮಾಡೋ ಕೆಲಸವನ್ನು ಸಿದ್ದರಾಮಯ್ಯ ಮಾಡಿದ್ದಾರೆ ಎಂದು ಹೇಳಿದ್ದಾರೆ.