ಬೆಂಗಳೂರು: ಸಿಲಿಕಾನ್ ಸಿಟಿ ಹೊಸ ವರ್ಷಾಚರಣೆಗೆ ಸಜ್ಜಾಗುತ್ತಿದ್ದರೆ ಈ ಕಡೆ ಮಾತ್ರ ಬೆಂಗಳೂರಿನಲ್ಲಿ ಡ್ರಗ್ಸ್ ವಾಸನೆ ತೋರಿಸಲು ಮುಂದಾಗಿದ್ದ ಮೂವರು ಡ್ರಗ್ ಪೆಡ್ಲರ್’ಗಳನ್ನ ಸಿಸಿಬಿ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.
ಸಿಸಿಬಿಯಿಂದ ಒರ್ವ ವಿದೇಶಿ ಮತ್ತು ಇಬ್ಬರು ಕೇರಳ ಡ್ರಗ್ ಪೆಡ್ಲರ್’ಗಳನ್ನ ಅರೆಸ್ಟ್ ಮಾಡಲಾಗಿದ್ದು ಜೋಶುಹಾ, ನಿಸಾಮ್, ಅಬ್ದುಲ್ ಅಹದ್ ಬಂಧಿತ ಆರೋಪಿಗಳು ಬಂಧಿತರಿಂದ 52 ಲಕ್ಷ ಮೌಲ್ಯದ ಮಾದಕ ವಸ್ತುಗಳು ವಶಕ್ಕೆ ಪಡೆದಿದ್ದಾರೆ.
ಬೇಗೂರು ಮತ್ತು ಕೋರಮಂಗಲ ವ್ಯಾಪ್ತಿಯಲ್ಲಿ ಮಾದಕ ವಸ್ತು ಸಂಗ್ರಹ ಮಾಡಿಕೊಂಡಿದ್ರು ಖಚಿತ ಮಾಹಿತಿ ಮೇರೆ ದಾಳಿ ನಡೆಸಿ ಆರೋಪಿಗಳು ಹಾಗೂ 86.89 ಗ್ರಾಂ. MDMA, 100 LSD Strips ಸೇರಿದಂತೆ ಅನೇಕ ವಿಧದ ಡ್ರಗ್ಸ್ ವಶಕ್ಕೆ ಪಡೆದಿದ್ದಾರೆ.
ಮೂರು ತಿಂಗಳಿಂದ ಬೆಂಗಳೂರಿನಲ್ಲಿ ವಾಸವಿದ್ದ ವಿದೇಶಿ ಪ್ರಜೆ ಇಲ್ಲಿ ವಾಸವಿರೋ ಆಫ್ರಿಕಾ ಪ್ರಜೆಗಳಿಂದ ಕಡಿಮೆ ಬೆಲೆಗೆ ಡ್ರಗ್ಸ್ ಖರೀದಿ ಮಾಡಿ ಹೆಚ್ಚು ಬೆಲೆಗೆ ಮಾರಾಟ ಮಾಡ್ತಿದ್ದ ಉಳಿದ ಇಬ್ಬರು ಕೇರಳ ಡ್ರಗ್ ಪೆಡ್ಲರ್ಗಳು ಸ್ಥಳೀಯ ಪೆಡ್ಲರ್ ನಿಂದ ಖರೀದಿ ಮಾಡುತ್ತಿದ್ರು
ಸದ್ಯ ಕೋರಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಮೂವರು ಆರೋಪಿಗಳನ್ನ ಪೊಲೀಸರು ಡ್ಲಿಲ್ ಮಾಡಿದ್ದು ಮತ್ತಷ್ಟು ಮಾಹಿತಿ ಕಲೆಹಾಕುತ್ತಿದ್ದಾರೆ.