ಹುಬ್ಬಳ್ಳಿ: ಪ್ರಧಾನಿ ನರೇಂದ್ರ ಮೋದಿ ಐದು ಸಾವಿರ ಕೋಡ್ತಾರಂತೆ ಅಂತೆ ಸುಳ್ಳು ವದಂತಿ ಹಬ್ಬಿದ್ದು ಹುಬ್ಬಳ್ಳಿ ಸಮೀಪದ ಕಲಘಟಗಿಯ ಗ್ಯಾಸ್ ಕಚೇರಿವೊಂದರ ಮುಂದೆ ಮಹಿಳೆಯರ ದಂಡು ಸೇರಿದೆಕೇಂದ್ರ ಸರ್ಕಾರ ಗ್ಯಾಸ್ ಸಿಲಿಂಡರ್ ಗಾಗಿ ಇ ಕೆವೈಸಿ ಮಾಡಲು ಆದೇಶ ಹೋರಡಿಸಿದ್ದು, ಗ್ಯಾಸ್ ಕಚೇರಿ ಮುಂದೆ ಇ ಕೆವೈಸಿ ಗಾಗಿ ಜನರು ಆಗಮಿಸುತ್ತಿರೋದು ತಮಗೆಲ್ಲ ಗೋತ್ತೆ ಇದೆ.
ಹುಬ್ಬಳ್ಳಿ ಧಾರವಾಡ ಹಾಗೂ ಸುತ್ತಮುತ್ತಲಿನ ಪ್ರದೇಶಗಳ ಗ್ರಾಮೀಣ ಬಾಗದಲ್ಲಿ ಮೋದಿಯವರು ಐದು ಸಾವಿರ ನೀಡುತ್ತಿದ್ದಾರೆ ಎಂದು ಸುಳ್ಳು ವದಂತಿ ಹಬ್ಬಿಸಿದ್ದು ಇಂದು ಕಲಘಟಗಿ ಪಟ್ಟಣದ ಲೋಕಪೂಜ್ಯ ಗ್ಯಾಸ್ ಕಚೇರಿ ಮುಂದೆ ನೂರಾರು ಮಹಿಳೆಯರು ಮುಂಜಾನೆಯಿಂದಲೇ ಸರದಿಯಲ್ಲಿ ನಿಂತಿದ್ದಾರೆ.
ನಿನ್ನೆಯವರಗೂ ಇ ಕೆವೈಸಿಗೆ ಅಲ್ಪಪ್ರಮಾಣದ ಜನರು ಆಗಮಿಸುತ್ತಿದ್ದರು ಇಂದು ಏಕಾಏಕಿ ಗ್ರಾಮೀಣ ಬಾಗದಿಂದ ನೂರಾರು ಜನರು ಆಗಮಿಸಿದ್ದು ಈ ಕೆವೈಸಿ ಮಾಡಲು ತೊಂದರೆ ಆಗುತ್ತಿದೆ ಎಂದು ಸಿಬ್ಬಂದಿ ತಿಳಿಸಿದ್ದಾರೆ. ಪ್ರಧಾನಿ ನರೇಂದ್ರ
ಮೋದಿಯವರು ಐದು ಸಾವಿರ ಹಣ ನೀಡುತ್ತಿದ್ದಾರೆ ಎನ್ನುವ ಸುಳ್ಳು ವದಂತಿಗೆ ಮಹಿಳೆಯರು ಆಗಮಿಸುತ್ತಿದ್ದು ಇದು ಸುಳ್ಳು ಎಂದು ಮಹಿಳೆಯರಿಗೆ ತಿಳಿಸಿದರು ಸರದಿಯಿಂದ ಹಿಂದೆ ಸರಿಯದೆ ಇರುವುದು ಆಶ್ಚರ್ಯವಾಗಿದೆ. ಈ ಒಂದು ಗ್ಯಾಸ್ ಇ ಕೆವೈಸಿ ಮಾಡಿಸಲು ಇನ್ನು ಯಾವದೆ ರೀತಿಯಾದ ಕೋನೆಯ ದಿನಾಂಕ ನಿಗದಿ ಪಡಿಸಿಲ್ಲ ಜನರು ನಿಧಾನವಾಗಿ ಮಾಡಿಸಬಹುದು ಎನ್ನಲಾಗಿದೆ.