ಬೆಂಗಳೂರು: ಸಿಎಂ ಸಿದ್ದರಾಮಯ್ಯ ಹಾಗೂ ಸಚಿವರಾದ ಜಮೀರ್ ಅಹ್ಮದ್ಖಾನ್ ಮತ್ತು ಕೃಷ್ಣಬೈರೇಗೌಡ ಖಾಸಗೀ ವಿಮಾನಯಾನದಲ್ಲಿ ದೆಹಲಿಗೆ ಹೋಗಿಬಂದ ವಿಚಾರ ರಾಜಕೀಯ ವಲಯದಲ್ಲಿ ಬಿಸಿಬಿಸಿ ಚರ್ಚೆಗೆ ಗ್ರಾಸವಾಗಿದೆ. ರಾಜ್ಯದಲ್ಲಿ ಬರಗಾಲ ತಾಂಡವವಾಡ್ತಿರುವ ಸಂದರ್ಭದಲ್ಲಿ ಆಡಳಿತ ಪಕ್ಷದ ಪ್ರಮುಖರು ಐಶಾರಾಮಿ ಪ್ರಯಾಣದ ನೆಪದಲ್ಲಿ ಮೋಜು ಮಸ್ತಿ ಬೇಕಿತ್ತಾ ಎಂದು ವಿಪಕ್ಷ ಬಿಜೆಪಿ ಆಕ್ರೋಶ ಹೊರಹಾಕ್ತಿದೆ. ಇದು ಆಡಳಿತ ಹಾಗೂ ವಿಪಕ್ಷದ ನಡುವೆ ರಾಜಕೀಯ ವಾಕ್ಸಮರಕ್ಕೆ ವೇದಿಕೆಯಾಗಿದೆ..
ಈ ಮೂರು ರಾಶಿಗಳ ಬಹುದಿನದ ಪ್ರೀತಿ ಪ್ರೇಮ ಮದುವೆ ಕಾರ್ಯ ಯಶಸ್ವಿ – ಶನಿವಾರ- ರಾಶಿ ಭವಿಷ್ಯ ಡಿಸೆಂಬರ್-23,2023
ರಾಜ್ಯದಲ್ಲಿ ಬರ ತಾಂಡವವಾಡ್ತಿದೆ ಈ ಹಿನ್ನೆಲೆಯಲ್ಲಿ ಕೇಂದ್ರದಿಂದ ಬರಬೇಕಾದ ಪರಿಹಾರವನ್ನು ಕೇಳಲು ಸಿಎಂ ಸಿದ್ದರಾಮಯ್ಯ, ಸಚಿವರಾದ ಜಮೀರ್ ಅಹ್ಮದ್ ಖಾನ್, ಕೃಷ್ಣಬೈರೇಗೌಡ ಸೇರಿದಂತೆ ಪ್ರಮುಖ ನಾಯಕರು ದೆಹಲಿಗೆ ಹೋಗಿ ಪ್ರಧಾನಿ ಮೋದಿಯವರನ್ನ ಭೇಟಿ ಮಾಡಿ ಬಂದಿದ್ದಾರೆ. ಇವರೆಲ್ಲಾ ದೆಹಲಿಗೆ ಹೋಗಿಬಂದ ಪ್ರೈವೇಟ್ ಜೆಟ್ ನ ಐಶಾರಾಮಿ ವಿಡಿಯೋವನ್ನ ಸಚಿವ ಜಮೀರ್ ಅಹ್ಮದ್ ಖಾನ್ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ, ಇದೇ ವಿಚಾರ ಇದೀಗ ರಾಜಕೀಯ ಚರ್ಚೆಗೆ ಗ್ರಾಸವಾಗಿದ್ದು ಇಂತಹ ಸಂಕಷ್ಟದ ಸಮಯದಲ್ಲಿ ಈ ಮೋಜು ಮಸ್ತಿ ಬೇಕಿತ್ತಾ ಅಂತ ವಿಪಕ್ಷ ಬಿಜೆಪಿ ಕೆರಳಿ ಕೆಂಡವಾಗಿದೆ.