ಚಳಿಗಾಲದಲ್ಲಿ ಸಾಮಾನ್ಯ ಸಮಸ್ಯೆ ಎಂದರೆ ಕೆಮ್ಮು. ಕೆಮ್ಮು ಒಮ್ಮೆ ಪ್ರಾರಂಭವಾದರೆ ನಿಮ್ಮ ದೈನಂದಿನ ಚಟುವಟಿಕೆಗಳ ಜೊತೆಗೆ ನಿದ್ದೆಗೂ ಅಡ್ಡಿಯುಂಟು ಮಾಡುತ್ತದೆ. ಇದರಿಂದಾಗಿ ಆಯಂಟಿಬಯೋಟಿಕ್ಗಳನ್ನು ಅವಲಂಬಿಸುವ ಬದಲು ಈ ಸಿಂಪಲ್ ಮನೆಮದ್ದುಗಳನ್ನು ಟ್ರೈ ಮಾಡಿ.
ಕೆಮ್ಮು ಮತ್ತು ನೋಯುತ್ತಿರುವ ಗಂಟಲಿಗೆ ಜೇನುತುಪ್ಪವು ಉತ್ತಮ ಮನೆಮದ್ದು. ಚಳಿಗಾಲದಲ್ಲಿ ದೇಹವನ್ನು ಆರೋಗ್ಯವಾಗಿಡಲು ಜೇನುತುಪ್ಪವನ್ನು ವರ್ಷಗಳಿಂದ ಬಳಸಲಾಗುತ್ತಿದೆ. ಆದ್ದರಿಂದ ನೀವೂ ಕೂಡ ಒಣ ಕೆಮ್ಮಿನ ಸಮಸ್ಯೆಯಿಂದ ಬಳಲುತ್ತಿದ್ದರೆ ಜೇನುತುಪ್ಪದೊಂದಿಗೆ ತುಳಸಿ ಎಲೆಯನ್ನು ಸೇವಿಸಿ. ಇದರಿಂದ ಗಂಟಲು ನೋವಿನ ಸಮಸ್ಯೆ ನಿವಾರಣೆಯಾಗುತ್ತದೆ ಮತ್ತು ದೇಹವೂ ಆರೋಗ್ಯವಾಗಿರುತ್ತದೆ. ಇದಲ್ಲದೇ ಜೇನುತುಪ್ಪದೊಂದಿಗೆ ಈರುಳ್ಳಿ ರಸವನ್ನು ಬೆರೆಸಿ ಸೇವಿಸುವುದು ಉತ್ತಮ. ಈರುಳ್ಳಿಯಲ್ಲಿ ಕ್ವೆರ್ಸೆಟಿನ್ ಸಮೃದ್ಧವಾಗಿದ್ದು, ಇದರೊಂದಿಗೆ ಜೇನುತುಪ್ಪವನ್ನು ಬೆರೆಸಿದಾಗ ಅದು ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ.
ಒಂದು ಜಾರ್ನಲ್ಲಿ ಜೇನುತುಪ್ಪವನ್ನು ಹಾಕಿ. ಈಗ ಅದಕ್ಕೆ 2 ಚಮಚ ಈರುಳ್ಳಿಯ ರಸ ಸೇರಿಸಿ. ಚೆನ್ನಾಗಿ ಅಲ್ಲಾಡಿಸಿ ಮತ್ತು 5-6 ಗಂಟೆಗಳ ಕಾಲ ಮುಚ್ಚಿಡಿ ಅಥವಾ ರಾತ್ರಿಯಿಡೀ ಹೀಗೆ ಇಡಬಹುದು. ಈಗ ಈ ಮಿಶ್ರಣವನ್ನು ದಿನಕ್ಕೆ 2 ಚಮಚ ತೆಗೆದುಕೊಳ್ಳಿ. ಕೆಮ್ಮಿನ ಸಿರಪ್ ಬದಲಿಗೆ ಈ ಮನೆಮದ್ದನ್ನು ಅನುಸರಿಸಿ, ಕೆಮ್ಮು ಎರಡು ದಿನಗಳಲ್ಲಿ ಮಾಯವಾಗುತ್ತದೆ.