ಬೆಂಗಳೂರು:- ಆರು ಬಾರಿ ಜೈಲಿಗೆ ಹೋಗಿ ಬಂದ್ರೂ ಬುದ್ದಿ ಕಲಿಯದ ಪಿಂಪ್ ನನ್ನು ಸಿಸಿಬಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ವೇಶ್ಯವಾಟಿಕೆ ಜಾಲ ಮುಂದುವರೆಸಿದ್ದ ಮಂಜುನಾಥ್ ನನ್ನು ಗೂಂಡಾ ಕಾಯ್ದೆಯಡಿ ಬಂಧಿಸಲಾಗಿದೆ. ಆರೋಪಿಯು, ಹುಳಿಮಾವು, ಮಡಿವಾಳ, ಪುಟ್ಟೇನಹಳ್ಳಿ, ಮೈಕೊ ಲೇಔಟ್, ಸುದ್ದುಗುಂಟೆಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ. ಉದ್ಯೋಗ ಅರಸಿ ಬೆಂಗಳೂರಿಗೆ ಬರುವ ಹೊರರಾಜ್ಯದ ಯುವತಿಯರು ಇವನು ಟಾರ್ಗೆಟ್ ಮಾಡುತ್ತಿದ್ದ.
ಯುವತಿಯರನ್ನ ಕೆಲಸದ ಆಮಿಷವೊಡ್ಡಿ ಮಾನವ ಕಳ್ಳಸಾಗಾಣಿಕೆ ಮಾಡಿ ದಂಧೆಗೆ ನೂಕುತ್ತಿದ್ದ. ಯುವತಿಯರನ್ನ ಲಾಡ್ಜ್, ಬಾಡಿಗೆ ಮನೆಗಳಲ್ಲಿ ಇರಿಸಿಕೊಂಡು ದಂಧೆ ಮಾಡುತ್ತಿದ್ದ.
ಆರೋಪಿ ವಿರುದ್ಧ ಈ ಮುನ್ನ ವಿವಿಧ ಠಾಣೆಗಳಲ್ಲಿ 7 ಪ್ರಕರಣ ದಾಖಲಾಗಿತ್ತು. ಜಾಮೀನು ಪಡೆದು ಮತ್ತೆ ವೇಶಾವ್ಯಾಟಿಕೆ ಜಾಲದಲ್ಲಿ ಆರೋಪಿ ತೊಡಗಿಸಿಕೊಂಡಿದ್ದ. ಈ ಹಿನ್ನೆಲೆ ಗೂಂಡಾ ಕಾಯ್ದೆಯಡಿ ಸಿಸಿಬಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ.