ನವದೆಹಲಿ: ಭಾರತದ ವಸಾಹತುಶಾಹಿ ಯುಗದ ಕ್ರಿಮಿನಲ್ ಕಾನೂನುಗಳನ್ನು ಬದಲಿಸುವ ಮೂರು ನಿರ್ಣಾಯಕ ಮಸೂದೆಗಳನ್ನು (Criminal Code Bills) ಲೋಕಸಭೆಯಲ್ಲಿ ಅಂಗೀಕರಿಸಲಾಯಿತು.ವಿಪಕ್ಷಗಳ ಕೆಲವೇ ಸದಸ್ಯರ ಉಪಸ್ಥಿತಿಯಲ್ಲಿ ಅವರ ವಿರೋಧದ ಭಾರತೀಯ ನ್ಯಾಯ (ಎರಡನೇ) ಸಂಹಿತಾ- 2023, ಭಾರತೀಯ ನಾಗರಿಕ ಸುರಕ್ಷಾ (ಎರಡನೇ) ಸಂಹಿತಾ- 2023 ಮತ್ತು ಭಾರತೀಯ ಸಾಕ್ಷಿ (ಎರಡನೇ) ಮಸೂದೆ- 2023 ವಿಧೇಯಕಗಳಿಗೆ ಲೋಕಸಭೆ ಅನುಮೋದನೆ ನೀಡಿದೆ.
Apple ವಾಚ್ ಸೀರಿಸ್ 9, ವಾಚ್ ಅಲ್ಟ್ರಾ 2 ಮಾರಾಟ US ನಲ್ಲಿ ಸ್ಥಗಿತ: ಕಾರಣವೇನು?
ಈ ಕುರಿತ ಚರ್ಚೆಗೆ ಉತ್ತರಿಸಿದ ಗೃಹಮಂತ್ರಿ ಅಮಿತ್ ಶಾ, ಈ ಮಸೂದೆಗಳನ್ನು ಜಾರಿಗೆ ತರುತ್ತಿರುವುದು ಶಿಕ್ಷಿಸಲು ಅಲ್ಲ. ನ್ಯಾಯ ನೀಡುವುದಕ್ಕೆ. ತ್ವರಿತ ನ್ಯಾಯದಾನವೇ ನಮ್ಮ ಗುರಿ. ಈ ಮಸೂದೆಗಳಲ್ಲಿ ಡಿಜಿಟಲ್, ಎಲೆಕ್ಟ್ರಾನಿಕ್ ಎವಿಡೆನ್ಸ್ಗಳನ್ನು ಸಾಕ್ಷ್ಯವಾಗಿ ಪರಿಗಣನೆಗೆ ತೆಗೆದುಕೊಳ್ಳಲಾಗಿದೆ. ಈ ಕಾಯ್ದೆಗಳು ಮುಂದಿನ ನೂರು ವರ್ಷ ದೇಶದ ನ್ಯಾಯ ಪ್ರಕ್ರಿಯೆಗೆ ಉಪಯೋಗವಾಗುತ್ತವೆ ಎಂದು ತಿಳಿಸಿದ್ದಾರೆ. ಲೋಕಸಭಾ ಭದ್ರತಾ ಉಲ್ಲಂಘನೆಯ ವಿರುದ್ಧ ಪ್ರತಿಭಟನೆಯ ನಂತರ 143 ವಿರೋಧ ಪಕ್ಷದ ಸದಸ್ಯರನ್ನು ಅಮಾನತುಗೊಳಿಸಿದ ಕಾರಣ ಯಾವುದೇ ಮಹತ್ವದ ಚರ್ಚೆಯಿಲ್ಲದೆ ಕಾನೂನುಗಳನ್ನು ಅಂಗೀಕರಿಸಲಾಯಿತು.
ಹೊಸ ಕಾನೂನು ಸಂಹಿತೆಗಳಲ್ಲಿ ಏನಿದೆ?
* ಹಿಟ್ & ರನ್ಗೆ 10 ವರ್ಷ ಜೈಲು
* ಅಪಘಾತದ ಗಾಯಾಳುವನ್ನು ಆಸ್ಪತ್ರೆಗೆ ಸೇರಿಸಿದ್ರೆ ಶಿಕ್ಷೆ ಪ್ರಮಾಣ ಇಳಿಕೆ
* ಗುಂಪು ದಾಳಿಗೆ ಗಲ್ಲು ಶಿಕ್ಷೆ/ಏಳು ವರ್ಷ ಜೈಲು ಶಿಕ್ಷೆ
* ಅಪ್ರಾಪ್ತೆ ಮೇಲಿನ ಗ್ಯಾಂಗ್ರೇಪ್ – ಜೀವಾವಧಿ ಶಿಕ್ಷೆ
* ಗ್ಯಾಂಗ್ರೇಪ್ನಿಂದ ಅಪ್ರಾಪ್ತೆ ಸಾವು – ಗಲ್ಲು ಶಿಕ್ಷೆ
* ದೇಶದ್ರೋಹ – ಏಳು ವರ್ಷ ಜೈಲು
* ಅಪರಾಧಿಗಳು ವಿದೇಶಕ್ಕೆ ಎಸ್ಕೇಪ್ ಆದ್ರೆ, 90 ದಿನದಲ್ಲಿ ಶರಣಾಗಬೇಕು
* ಇಲ್ಲದಿದ್ದಲ್ಲಿ ಅವರ ಪರವಾಗಿ ಸರ್ಕಾರ ವಕೀಲರನ್ನು ನೇಮಿಸುತ್ತೆ. ಕೋರ್ಟ್ ತೀರ್ಪು ಪ್ರಕಟಿಸುತ್ತೆ
* ಅಂತಹ ಅಪರಾಧಿಗಳನ್ನು ವಿದೇಶದಿಂದ ಕರೆತಂದು ಗಲ್ಲು ಶಿಕ್ಷೆ
* ಮಹಿಳೆಯರಿಗೆ ಇ-ಎಫ್ಐಆರ್ ನಮೂದು ಮಾಡಿಕೊಳ್ಳುವ ಅವಕಾಶ
* ಯಾರು ಬೇಕಿದ್ರೂ ಎಲ್ಲಿಂದ ಆದ್ರೂ ಝೀರೋ ಎಫ್ಐಆರ್ ಹಾಕಬಹುದು
* 24 ಗಂಟೆಗಳಲ್ಲಿ ಸಂಬಂಧಿಸಿದ ಠಾಣೆಗೆ ಕೇಸ್ ವರ್ಗಾಯಿಸಿಕೊಳ್ಳಬಹುದು
* ಸಾಕ್ಷ್ಯವಿಲ್ಲದೇ ಅರೆಸ್ಟ್ ಮಾಡಿ ಠಾಣೆಯಲ್ಲಿ ಯಾರನ್ನು ಇರಿಸುವಂತಿಲ್ಲ
* ಅರೆಸ್ಟ್ ಆದವರ ವಿವರ ಕುಟುಂಬಸ್ಥರಿಗೆ ತಲುಪಿಸಲು ಅಧಿಕಾರಿ ನೇಮಕ
* ಏಳು ವರ್ಷ ಶಿಕ್ಷೆ ಬೀಳುವ ಪ್ರಕರಣಗಳಲ್ಲಿ ಫೊರೆನ್ಸಿಕ್ ಟೀಂ ತನಿಖೆ ಕಡ್ಡಾಯ
* ಅಪರಾಧ ವೇಳೆ ಸಿಕ್ಕಿಬಿದ್ದ ವಾಹನ – 30 ದಿನದಲ್ಲಿ ಕೋರ್ಟ್ ಮೂಲಕ ಮಾರಾಟ