96ನೇ ಆಸ್ಕರ್ ಪ್ರಶಸ್ತಿಗಾಗಿ ಭಾರತದಿಂದ ಅಧಿಕೃತವಾಗಿ ಆಯ್ಕೆಯಾಗಿದ್ದ, ಮಲಯಾಳಂನ 2018ನೇ ಹೆಸರಿನ ಸಿನಿಮಾ ಅಂತಿಮ ಸುತ್ತಿನ ಸ್ಪರ್ಧೆಗೆ ಎಂಟ್ರಿ ಪಡೆಯುವಲ್ಲಿ ವಿಫಲವಾಗಿದೆ. ಇದರಿಂದಾಗಿ ಸಹಜವಾಗಿಯೇ ಭಾರತೀಯ ಸಿನಿಮಾ ಪ್ರೇಕ್ಷಕರಿಗೆ ನಿರಾಸೆಯಾಗಿದೆ. ಅಂತಾರಾಷ್ಟ್ರೀಯ ಫೀಚರ್ ಫಿಲ್ಮ್ ವಿಭಾಗಕ್ಕೆ ಈ ಸಿನಿಮಾವನ್ನು ಭಾರತದಿಂದ ಆಯ್ಕೆ ಮಾಡಿ ಕಳುಹಿಸಲಾಗಿತ್ತು. ಆದರೆ, ಮುಂದಿನ ಸುತ್ತಿಗೆ ಹೋಗುವಲ್ಲಿ ಅದು ವಿಫಲವಾಗಿದೆ.
ಕಳೆದ ಸಲ ರಾಜಮೌಳಿ ನಿರ್ದೇಶನದ ‘ಆರ್.ಆರ್.ಆರ್’ ಸಿನಿಮಾದ ‘ನಾಟು ನಾಟು’ ಹಾಡಿಗಾಗಿ ಆಸ್ಕರ್ (Oscar) ಪ್ರಶಸ್ತಿ ಬಂದಿತ್ತು. ಈ ಬಾರಿ ದಕ್ಷಿಣದ ಮತ್ತೊಂದು ಸಿನಿಮಾ ಈ ವರ್ಷದ ಆಸ್ಕರ್ ಪ್ರಶಸ್ತಿಗಾಗಿ ನಾಮಿನೇಟ್ (Nomination) ಆಗಿ ಸಂಭ್ರಮಕ್ಕೆ ಕಾರಣವಾಗಿತ್ತು. ಈ ವಿಷಯವನ್ನು ಈ ಹಿಂದೆ ಆಸ್ಕರ್ ಆಯ್ಕೆ ಸಮಿತಿ ಅಧ್ಯಕ್ಷ, ಕನ್ನಡದವರೇ ಆಗಿರುವ ಗಿರೀಶ್ ಕಾಸರವಳ್ಳಿ ತಿಳಿಸಿದ್ದರು
ಟೊವಿನೋ ಥಾಮಸ್ ನಟನೆಯ 2018 ಹೆಸರಿನ ಮಲಯಾಳಂ (Malayalam) ಸಿನಿಮಾ ವಿಶೇಷ ಕಥಾವಸ್ತುವನ್ನು ಹೊಂದಿದೆ. ಕೇರಳದಲ್ಲಿ ನಾಲ್ಕು ವರ್ಷಗಳ ಹಿಂದೆ ನಡೆದ ಅತಿವೃಷ್ಠಿ ಸೃಷ್ಟಿಸಿದ ಆವಾಂತರವನ್ನು ಆಧರಿಸಿದ ಚಿತ್ರಿಸಲಾಗಿದೆ. ಈ ಚಿತ್ರಕ್ಕೆ ಭಾರೀ ಪ್ರತಿಕ್ರಿಯೆ ಕೂಡ ಉತ್ತಮವಾಗಿತ್ತು. ಈ ಸಿನಿಮಾವನ್ನು ಕಾಸರವಳ್ಳಿ ಅಧ್ಯಕ್ಷತೆಯ ಕಮೀಟಿಯು ಆಸ್ಕರ್ ಪ್ರಶಸ್ತಿ ಸ್ಪರ್ಧೆಗಾಗಿ ಆಯ್ಕೆ ಮಾಡಲಾಗಿತ್ತು. ಈ ಆಯ್ಕೆಯು ಫಿಲ್ಮ್ ಫೆಡರೇಶನ್ ಆಫ್ ಇಂಡಿಯಾ ಮೂಲಕ ನಡೆದಿತ್ತು. ಇದು ಪ್ರತಿ ವರ್ಷವೂ ಒಂದು ಸಿನಿಮಾವನ್ನು ಆಯ್ಕೆ ಮಾಡಿ, ಸರಕಾರವೇ ಉಳಿದ ವೆಚ್ಚವನ್ನು ಭರಿಸಿ ಕಳುಹಿಸುತ್ತದೆ. ಖಾಸಗಿಯಾಗಿ ಯಾವ ಸಿನಿಮಾಗಳು ಬೇಕಾದರೂ ಸ್ಪರ್ಧಿಸಬಹುದಾಗಿದೆ.