ದೊಡ್ಡಬಳ್ಳಾಪುರ: ಟ್ರ್ಯಾಕ್ಟರ್ ಮತ್ತು ಕ್ಯಾಂಟರ್ ನಡುವೆ ಅಪಘಾತ ಸಂಭವಿಸಿರುವ ಟಿ.ಬಿ ಸರ್ಕಲ್ ಸಮೀಪ ನಡೆದಿದೆ. ಡಿಕ್ಕಿ ರಭಸಕ್ಕೆ ನೀರಿನ ಟ್ಯಾಂಕರ್ ರಸ್ತೆಯಲ್ಲಿ ಮುಗುಚಿ ಬಿದ್ದದ್ದು, ಸ್ಥಳದಲ್ಲಿ ವಾಹನ ದಟ್ಟಣೆ ಉಂಟಾಗಿ ವಾಹನ ಸವಾರರು ಪರದಾಡುವಂತಾಗಿತ್ತು.
ಟ್ಯಾಂಕರ್ ನಲ್ಲಿ ನೀರನ್ನು ತುಂಬಿಕೊಂಡು ಕೋರ್ಟ್ ರಸ್ತೆ ಮುಖಾಂತರ ಬಂದ ಟ್ರ್ಯಾಕ್ಟರ್, ಡಿಕ್ರಾಸ್ ಕಡೆ ಹೋಗಲು ಯೂಟರ್ನ್ ತೆಗೆದುಕೊಳ್ಳುವ ಸಮಯದಲ್ಲಿ ಗೌರಿಬಿದನೂರು ಕಡೆಯಿಂದ ಬಂದ ಲಾರಿ ಏಕಾಏಕಿ ಡಿಕ್ಕಿ ಹೊಡೆದ ರಭಸಕ್ಕೆ ನೀರಿನ ಟ್ಯಾಂಕರ್ ಮುಗುಚಿ ಬಿದ್ದಿದೆ. ಸ್ಳಳಕ್ಕೆ ನಗರ ಠಾಣಾ ಪೊಲೀಸರು ದೌಡಾಯಿಸಿ ವಾಹನ ದಟ್ಟಣೆ ನಿಯಂತ್ರಣ ಮಾಡಿದರು.