ಬೆಂಗಳೂರು: ಕಾರ್ಯಕರ್ತರಿಗೆ ನಿಗಮ ಮಂಡಳಿಯಲ್ಲಿ ಅವಕಾಶ ಕೊಡದ ಹೊರತು ನಿಗಮ ಮಂಡಳಿ ನೇಮಕ ಬೇಡ ಎಂದು ರಾಹುಲ್ ಗಾಂಧಿ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.
ದೆಹಲಿಯಲ್ಲಿ ರಾಹುಲ್ ಗಾಂಧಿ ಸಮ್ಮುಖದಲ್ಲಿ ಶಾಸಕರ ಪಟ್ಟಿ ಸಮರ್ಥಿಸಿಕೊಳ್ಳಲು ಮುಂದಾದ ಸಿದ್ದರಾಮಯ್ಯ (Siddaramaiah) ಇರಿಸು ಮುರಿಸಿಗೆ ಒಳಗಾಗಿದ್ದಾರೆ. ರಾಹುಲ್ ಗಾಂಧಿ ಮುಂದೆ ಡಿಸಿಎಂ ಡಿ.ಕೆ.ಶಿವಕುಮಾರ್ (D.K.Shivakumar) ಸಹ ಕಾರ್ಯಕರ್ತರ ಪರ ಮಾತನಾಡಿ ಸಿಎಂಗೆ ಮತ್ತಷ್ಟು ಮುಜುಗರ ಉಂಟು ಮಾಡಿದ್ದಾರೆ ಎನ್ನಲಾಗಿದೆ.
https://ainlivenews.com/kial-is-one-of-the-most-beautiful-airports-in-the-world/
ಮೊದಲಿನಿಂದಲೂ ಕಾರ್ಯಕರ್ತರ ಪರ ಡಿಕೆಶಿ ಲಾಬಿ ಮಾಡುತ್ತಿದ್ದರು. ಆದರೆ ಸದ್ಯಕ್ಕೆ ಶಾಸಕರಿಗಷ್ಟೆ ಅವಕಾಶ ಕೊಡೋಣ ಎಂದು ಸಿದ್ದರಾಮಯ್ಯ ಪಟ್ಟು ಹಿಡಿದಿದ್ದರು. ಇಬ್ಬರು ಒಮ್ಮತಕ್ಕೆ ಬಂದ ಮೇಲೆ ದೆಹಲಿಗೆ ಬನ್ನಿ ಎಂದು ಹೈಕಮಾಂಡ್ ಹೇಳಿತ್ತು.
ಶಾಸಕರಿಗೆ ಪಕ್ಷ ಟಿಕೆಟ್ ನೀಡಿದೆ. ಅವರನ್ನು ಪಕ್ಷ ಶಾಸಕರನ್ನಾಗಿ ಮಾಡಿದೆ. ಪಕ್ಷದ ಗೆಲುವಿಗೆ ಹಗಲಿರುಳು ದುಡಿದ ಕಾರ್ಯಕರ್ತರಿಗೆ ಅಧಿಕಾರ ಕೊಡದಿದ್ದರೆ ಅದು ಲೋಕಸಭೆ ಮೇಲೆ ಪರಿಣಾಮ ಬೀರಲ್ವಾ ಎಂದು ರಾಹುಲ್ ಗಾಂಧಿ ಪ್ರಶ್ನೆ ಮಾಡಿದರು. ಇರುವ 50 ನಿಗಮ ಮಂಡಳಿಗೆ ಸಾವಿರಕ್ಕೂ ಹೆಚ್ಚು ಆಕಾಂಕ್ಷಿಗಳಿದ್ದಾರೆ. ಯಾರನ್ನೆ ಮಾಡಿದರೂ ಉಳಿದವರಿಗೆ ಅಸಮಾಧಾನ ಆಗುತ್ತೆ ಎಂದು ಸಿದ್ದರಾಮಯ್ಯ ವಾದ ತಿಳಿಸಿದರು. ಕಾರ್ಯಕರ್ತರಿಗೆ ಅಧಿಕಾರ ಇಲ್ಲಾ ಅಂದರೆ ಶಾಸಕರಿಗೂ ಬೇಡ. ಶಾಸಕರಿಗಷ್ಟೆ ಅನುಮತಿ ಬೇಡ. ಕಾರ್ಯಕರ್ತರ ಪಟ್ಟಿ ಆದ ಮೇಲೆ ಒಟ್ಟಿಗೆ ಎಐಸಿಸಿ ಒಪ್ಪಿಗೆ ಕೊಡಲಿ ಎಂದು ಕಡ್ಡಿ ತುಂಡಾದಂತೆ ರಾಹುಲ್ ಗಾಂಧಿ ಹೇಳಿದರು.