ಮೈಸೂರು: ಅರಮನೆ ನಗರಿ ಮೈಸೂರಿಗೆ ಮತ್ತೆ ಕೊರೊನಾ ಭೀತಿ ಶುರುವಾಗಿದೆ. ಕಳೆದೆರೆಡು ವರ್ಷಗಳ ಹಿಂದೆ ತಾಂಡವಾಡಿದ್ದ ಮಾಹಾಮಾರಿ ಮತ್ತೆ ಅಬ್ಬರಿಸುತ್ತಾ ಅನ್ನೋ ಭಯ ಎದುರಾಗಿದೆ. ಮೈಸೂರಲ್ಲಿ 6 ಮಂದಿಗೆ ಕೊರೊನಾ ರೂಪಾಂತರಿ JN.1 ವೈರಸ್ ದೃಢಪಟ್ಟಿದೆ. 5 ಮಂದಿ 60 ವರ್ಷ ಮೇಲ್ಪಟ್ಟವರಾಗಿದ್ದು, 48 ವರ್ಷದ ಓರ್ವರಲ್ಲಿ ಕೋವಿಡ್ ಸೋಂಕು ಪತ್ತೆಯಾಗಿದೆ.
Apple ವಾಚ್ ಸೀರಿಸ್ 9, ವಾಚ್ ಅಲ್ಟ್ರಾ 2 ಮಾರಾಟ US ನಲ್ಲಿ ಸ್ಥಗಿತ: ಕಾರಣವೇನು?
ಸೋಂಕು ಪತ್ತೆಯಾದ ಆರು ಮಂದಿಗೂ ತುರ್ತು ನಿಗಾ ಘಟಕದಲ್ಲಿರಿಸಿ ಅಗತ್ಯ ಚಿಕಿತ್ಸೆ ನೀಡಲಾಗುತ್ತಿದೆ. ಸೋಂಕಿತರ ಬಗ್ಗೆ ಹೆಚ್ಚಿನ ನಿಗಾ ಇಟ್ಟು ಚಿಕಿತ್ಸೆ ನೀಡಲಾಗುತ್ತಿದ್ದು, ಟ್ರಾವೆಲ್ ಹಿಸ್ಟರಿ ಬಗ್ಗೆಯೂ ಆರೋಗ್ಯ ಇಲಾಖೆ ಅಧಿಕಾರಿಗಳು ಗಮನಹರಿಸಿದ್ದಾರೆ. ಖುದ್ದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಪಿ.ಸಿ. ಕುಮಾರಸ್ವಾಮಿ ಈ ಸಂಬಂಧ ಮಾಹಿತಿ ಕಲೆಹಾಕಿ , ವೈದ್ಯರಿಗೆ ಕಠಿಣ ಸೂಚನೆ ನೀಡಿದ್ದಾರೆ.