ಈ ವಾರ ಬಿಗ್ಬಾಸ್ ಮನೆಯಲ್ಲಿ ವ್ಯವಹಾರದ್ದೇ ಮೇನಿಯಾ. ಖರೀದಿ ಮಾರಾಟದ ವ್ಯವಹಾರವೀಗ ಹೊಸದೊಂದು ಮಜಲು ತಲುಪಿದೆ.
ಹೌದು,ಇಷ್ಟು ದಿನ ವ್ಯಕ್ತಿಗಳನ್ನು ಖರೀದಿಸುವ, ಟಾಸ್ಕ್ಗಳ ಮೂಲಕ ಹಣ ಸಂಪಾದಿಸುವ ಚಟುವಟಿಕೆಯಲ್ಲಿ ಮುಳುಗಿಹೋಗಿದ್ದ ಸದಸ್ಯರಿಗೆ ಬಿಗ್ಬಾಸ್ ಹೊಸದೊಂದು ಅವಕಾಶ ನೀಡಿದ್ದಾರೆ. ಅದು ಲಕ್ಷುರಿ ಖರೀದಿಸುವ ಅವಕಾಶ. ಆದರೆ ಮನೆಯ ಸದಸ್ಯರು ಅವರ ಬಳಿ ಇರುವ ಹಣದಿಂದ ದಿನಸಿಗಳನ್ನು ಖರೀದಿಸಬೇಕು.
ಯಾರ ಬಳಿ ಇರುವ ಹಣವನ್ನು ದಿನಸಿಗೆ ವ್ಯವಿಸಬೇಕು ಎಂಬಲ್ಲಿ ಮನೆಯ ಸದಸ್ಯರಲ್ಲಿ ಭಿನ್ನಾಭಿಪ್ರಾಯ ಮೂಡಿದೆ. ‘ಲೀಡರ್ಗಳ ಬಳಿ ಜಾಸ್ತಿ ಹಣವಿದೆ’ ಎಂದು ವಿನಯ್ ಹೇಳಿದ್ದಾರೆ. ಸಂಗೀತಾ, ‘ಅರ್ಧ ಅರ್ಧ ಶೇರ್ ಮಾಡಿಕೊಳ್ಳೋಣ’ ಎಂದೂ ಹೇಳಿದ್ದಾರೆ. ಆದರೆ ತನಿಷಾ ಅದಕ್ಕೆ ಒಪ್ಪಿಲ್ಲ. ‘ದಿನಸಿ ಬೇಕಾಗಿರುವುದು ಮನೆಯ ಎಲ್ಲ ಸದಸ್ಯರಿಗೆ. ಹಾಗಾಗಿ ಎಲ್ಲರೂ ಹಣ ವ್ಯಯಿಸಬೇಕು’ ಎಂಬುದು ಅವರ ವಾದ.
ಈ ಹೊತ್ತಿನಲ್ಲಿ ಮಧ್ಯಪ್ರವೇಶಿಸಿದ ನಮ್ರತಾ ವಿರುದ್ಧವೂ ತನಿಷಾ ಹರಿಹಾಯ್ದಿದ್ದಾರೆ. ಇದರಿಂದ ಮಾತಿಗೆ ಮಾತು ಬೆಳೆದು ಜಗಳ ನಡೆದಿದೆ.
ಮನೆಯ ಸದಸ್ಯರ ಭಿನ್ನಾಭಿಪ್ರಾಯದಲ್ಲಿ ಲಕ್ಷುರಿ ಬಜೆಟ್ ಕಳೆದುಕೊಳ್ಳುತ್ತಾರಾ? ಯಾರ ಹಣದಲ್ಲಿ ಲಕ್ಷುರಿ ಮನೆಗೆ ಬರುತ್ತದೆ..? ಎಂಬುವುದನ್ನು ಇಂದಿನ ಸಂಚಿಕೆಯವರೆಗೂ ಕಾದುನೋಡಬೇಕಿದೆ.